ಬ್ರೇಕಿಂಗ್ ನ್ಯೂಸ್ : ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 16: ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗಿದೆ. ಪ್ರತಿ ಪೆಟ್ರೋಲ್ 1.39 ರು ಹಾಗೂ ಡೀಸೆಲ್ 1.04ರು ಏರಿದೆ. ಪರಿಷ್ಕೃತ ದರಗಳು ಏಪ್ರಿಲ್ 16ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿವೆ.

ಇದಕ್ಕೂ ಮುನ್ನ ಜನವರಿ 15ರಂದು ಪೆಟ್ರೋಲ್ ದರ ಪ್ರತಿ ಲೀಟರ್ ಗೆ 0.42 ಪೈಸೆ ಏರಿಕೆ ಕಂಡಿದ್ದರೆ, ಡೀಸೆಲ್ ಪ್ರತಿ ಲೀಟರ್ ಗೆ 1.03 ರು ನಂತೆ ಏರಿಕೆಯಾಗಿತ್ತು.

ಇದಾದ ಬಳಿಕ ಮಾರ್ಚ್ 31, 2017ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಸರ್ಕಾರಿ ಸ್ವಾಮ್ಯ ತೈಲ ಕಂಪೆನಿಗಳು ಪೆಟ್ರೋಲ್ ಬೆಲೆ ಲೀಟರ್ ಗೆ ರು. 3.77 ಡೀಸೆಲ್ ಬೆಲೆ ಲೀಟರ್ ಗೆ ರು. 2.91 ಇಳಿಕೆ ಮಾಡಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದವು.

Petrol price hiked by Rs 1.39 per litre, and diesel by Rs 1.04 per litre

ಗಮನಿಸಿ: ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂ, ಭಾರತ್ ಪೆಟ್ರೋಲಿಯಂ ಪ್ರತಿ ತಿಂಗಳ ಮೊದಲ ದಿನ ಹಾಗೂ ತಿಂಗಳ ಮಧ್ಯದಲ್ಲಿ ಇಂಧನ ದರ, ಸಬ್ಸಿಡಿ ರಹಿತ ಎಲ್ ಪಿಜಿ, ಜೆಟ್ ಇಂಧನ, ಸೀಮೆಎಣ್ಣೆ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳುತ್ತವೆ. ಬೆಲೆ ಏರಿಕೆ ಹಾಗೂ ಇಳಿಕೆ ಎಲ್ಲವೂ ಜಾಗತಿಕ ಮಾರುಕಟ್ಟೆ ದರದ ಮೇಲೆ ಅವಲಂಬಿತವಾಗಿರುತ್ತದೆ. [ನಿತ್ಯ ಪೆಟ್ರೋಲ್-ಡೀಸೆಲ್ ಬೆಲೆ ನಿಗದಿ, ಮೇ 1ರಿಂದ ಈ 5 ನಗರದಲ್ಲಿ ಪ್ರಯೋಗ]

ಬೆಂಗಳೂರಿನಲ್ಲಿ ಡೀಸೆಲ್ ದರ 59.90 ರು ಪ್ರತಿ ಲೀಟರ್ ಗೆ ಹಾಗೂ ಪೆಟ್ರೋಲ್ ದರ 72.95 ನಂತೆ ಇದೆ. ದರ ಪರಿಷ್ಕರಣೆ ನಂತರ ಈ ಬೆಲೆಗಿಂತ ಪೆಟ್ರೋಲ್ 1.39 ರು ಪ್ರತಿ ಲೀಟರ್ ಗೆ ಹಾಗೂ ಡೀಸೆಲ್ 1.04 ರು ಪ್ರತಿ ಲೀಟರಿಗೆ ಅಗ್ಗವಾಗಲಿದೆ (ಒನ್ ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Petrol price hiked by Rs 1.39 per litre, and diesel by Rs 1.04 per litre. New price rates with effective from April 16 midnight.
Please Wait while comments are loading...