ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 20; ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

|
Google Oneindia Kannada News

ಮುಂಬೈ, ಮಾರ್ಚ್ 20: ದೇಶದಲ್ಲಿ ಸತತ 21ನೇ ದಿನ ತೈಲ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ. ಪ್ರಸ್ತುತ ಪೆಟ್ರೋಲ್ ಬೆಲೆ ಲೀಟರಿಗೆ 91.17 ರೂಪಾಯಿ ಹಾಗೂ ಡೀಸೆಲ್ ಬೆಲೆ ಲೀಟರಿಗೆ 81.47 ರೂ ಆಗಿದೆ.

ಫೆಬ್ರವರಿ 27ರಂದು ಕೊನೆಯದಾಗಿ ತೈಲ ಬೆಲೆಯಲ್ಲಿ ಕೊಂಚ ಏರಿಕೆಯಾಗಿದ್ದು, ಸದ್ಯಕ್ಕೆ ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಅದೇ ಬೆಲೆ ಮುಂದುವರೆದಿದೆ. ದೇಶದ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರಿಗೆ 100ರೂ ಇದ್ದು, ಆ ಬೆಲೆಯಲ್ಲಿಯೂ ವ್ಯತ್ಯಾಸವಾಗಿಲ್ಲ. ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆ ತಗ್ಗಿಸುವ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಚಿಂತಿಸಿ ಗ್ರಾಹಕರ ಮೇಲಿನ ಹೊರೆ ತಗ್ಗಿಸಬಹುದೇ ಎಂದು ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್ ಸಂಸತ್ತಿನಲ್ಲಿ ಪ್ರಶ್ನಿಸಿದ್ದಾರೆ.

ಮಾರ್ಚ್ 19ರಂದು ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ? ಮಾರ್ಚ್ 19ರಂದು ಭಾರತದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

ಫೆಬ್ರವರಿ ಆರಂಭದಿಂದಲೂ ಕಚ್ಚಾ ತೈಲದ ಮೇಲೆ ಬ್ಯಾರಲ್‌ಗೆ $7 ಗೆ ಹೆಚ್ಚಾಗಿತ್ತು. ಇದರಿಂದ ತೈಲ ಬೆಲೆಯಲ್ಲಿ ಫೆಬ್ರವರಿ ತಿಂಗಳಿನಲ್ಲಿ 14 ಬಾರಿ ಏರಿಕೆಯಾಗಿತ್ತು. ಫೆಬ್ರವರಿ ತಿಂಗಳಿನಲ್ಲಿಯೇ ಪೆಟ್ರೋಲ್‌ಗೆ ಲೀಟರ್‌ಗೆ 4.22ರೂ ಹಾಗೂ ಡೀಸೆಲ್‌ಗೆ 4.34ರೂ ಏರಿಕೆಯಾಗಿತ್ತು.

Petrol Diesel Rate Unchanged For 3rd Week March 20 Price List

2021ರಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಒಟ್ಟಾರೆ ಪೆಟ್ರೋಲ್‌ಗೆ 7.46 ರೂ ಹಾಗೂ ಡೀಸೆಲ್ ಗೆ 7.60 ರೂವರೆಗೆ ತಲುಪಿದೆ. ತೈಲಗಳ ಮೇಲಿನ ರೀಟೇಲ್ ಬೆಲೆಯು ಇನ್ನಷ್ಟು ಹೆಚ್ಚಬಹುದು ಎಂದು ತೈಲ ಕಂಪನಿಗಳು ಅಂದಾಜಿಸಿವೆ. ಕಳೆದ ಆರು ದಿನಗಳಲ್ಲಿ ಕಚ್ಚಾ ತೈಲ ಬೆಲೆಯಲ್ಲಿ 6% ತಗ್ಗಿದ್ದು, ಬ್ಯಾರೆಲ್‌ಗೆ $ 64.5 ರೂವರೆಗೆ ತಲುಪಿದೆ.

ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
ನವದೆಹಲಿ: 91.17 ರೂ 81.47 ರೂ
ಮುಂಬೈ: 97.57 ರೂ 88.60 ರೂ
ಕೋಲ್ಕತ್ತಾ: 91.35 ರೂ 84.35ರೂ
ಬೆಂಗಳೂರು: 94.22 ರೂ 86.37 ರೂ
ಹೈದರಾಬಾದ್: 94.70ರೂ 88.86 ರೂ

English summary
Fuel price stable for 21 consecutive days in india. Here is fuel price in major cities in india,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X