ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚುನಾವಣೆ ನಂತರ ಮತ್ತೆ ಏರಿಕೆಯಾಗುವುದೇ ಪೆಟ್ರೋಲ್, ಡೀಸೆಲ್ ಬೆಲೆ? ಇಲ್ಲಿದೆ ದರ ವಿವರ...

|
Google Oneindia Kannada News

ನವದೆಹಲಿ, ಮಾರ್ಚ್ 13: ಫೆಬ್ರವರಿ ತಿಂಗಳಿನಲ್ಲಿ 16 ಬಾರಿ ಏರಿಕೆ ಕಂಡಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಮಾರ್ಚ್‌ನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. ಹದಿನಾಲ್ಕು ದಿನಗಳ ನಂತರ ತೈಲ ಬೆಲೆಯಲ್ಲಿ ಯಾವುದೇ ಏರಿಕೆ ಕಾಣದೇ ಸ್ಥಿರವಾಗಿ ಉಳಿದುಕೊಂಡಿದೆ.

ಜನವರಿಯಲ್ಲಿ 10 ಬಾರಿ ಹಾಗೂ ಫೆಬ್ರವರಿಯಲ್ಲಿ 16 ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಈ ವರ್ಷದ ಮೊದಲ ಎರಡು ತಿಂಗಳಲ್ಲಿಯೇ 26 ಬಾರಿ ಬೆಲೆ ಏರಿಕೆಗೊಂಡು ಗ್ರಾಹಕರಿಗೆ ನುಂಗಲಾರದ ತುತ್ತಾಗಿತ್ತು. ಕೆಲವು ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ನೂರರ ಗಡಿ ದಾಟಿ ದಾಖಲೆ ಮಟ್ಟ ತಲುಪಿತ್ತು. ಆದರೆ ಮಾರ್ಚ್‌ನಲ್ಲಿ ಬೆಲೆ ಏರಿಕೆ ಬಿಸಿಯಿಂದ ಜನರಿಗೆ ಸ್ವಲ್ಪ ವಿಶ್ರಾಂತಿ ನೀಡಿದಂತಿದೆ. ಚುನಾವಣಾ ಸಮಯವಾದ್ದರಿಂದ ಸದ್ಯಕ್ಕೆ ಬೆಲೆ ಏರಿಕೆ ಮಾತಿಲ್ಲ ಎಂಬುದು ಜನರ ಅಭಿಪ್ರಾಯವಾಗಿದೆ. ಮುಂದೆ ಓದಿ...

 ತೈಲ ಬೆಲೆ ಸ್ಥಿರತೆ; ಚುನಾವಣೆ ಕಾರಣವಾ?

ತೈಲ ಬೆಲೆ ಸ್ಥಿರತೆ; ಚುನಾವಣೆ ಕಾರಣವಾ?

ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶದಲ್ಲಿ ಮಾರ್ಚ್ ಅಂತ್ಯದಲ್ಲಿ ವಿಧಾನಸಭೆ ಚುನಾವಣೆ ಎದುರಾಗುತ್ತಿರುವ ಕಾರಣ ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಿಲ್ಲ ಎಂಬುದು ಬಹು ಜನರ ಅಭಿಪ್ರಾಯವಾಗಿದೆ. ಚುನಾವಣೆ ಮೇಲೆ ಬೆಲೆ ಏರಿಕೆ ಪರಿಣಾಮ ಬೀರಬಹುದಾದ ಎಲ್ಲಾ ಸಾಧ್ಯತೆ ಇರುವುದರಿಂದ ಸದ್ಯಕ್ಕೆ ಏರಿಕೆ ಮಾಡಿಲ್ಲ. ಆದರೆ ಚುನಾವಣೆ ನಂತರ ಮತ್ತೆ ಬೆಲೆ ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.

ಚುನಾವಣೆ ಎಫೆಕ್ಟ್!: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಸಾಧ್ಯತೆಚುನಾವಣೆ ಎಫೆಕ್ಟ್!: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತ ಸಾಧ್ಯತೆ

 ಮಾ.13ರಂದು ಪ್ರಮುಖ ನಗರಗಳಲ್ಲಿ ತೈಲ ಬೆಲೆ ಎಷ್ಟಿದೆ?

ಮಾ.13ರಂದು ಪ್ರಮುಖ ನಗರಗಳಲ್ಲಿ ತೈಲ ಬೆಲೆ ಎಷ್ಟಿದೆ?

ನಗರ ಪೆಟ್ರೋಲ್ ಡೀಸೆಲ್
ದೆಹಲಿ: 91.17 ರೂ 81.47 ರೂ
ಮುಂಬೈ: 97.57 ರೂ 88.60 ರೂ
ಚೆನ್ನೈ: 93.11 ರೂ 86.45 ರೂ
ಕೋಲ್ಕತ್ತಾ: 91.35 ರೂ 84.35 ರೂ
ಬೆಂಗಳೂರು: 94.22 ರೂ 86.37 ರೂ
ಹೈದರಾಬಾದ್: 94.79 ರೂ 88.86 ರೂ

 ಫೆಬ್ರವರಿ 27ರಂದು ಕೊನೆಯ ಬಾರಿ ಬೆಲೆ ಏರಿಕೆ

ಫೆಬ್ರವರಿ 27ರಂದು ಕೊನೆಯ ಬಾರಿ ಬೆಲೆ ಏರಿಕೆ

ಫೆಬ್ರವರಿ ತಿಂಗಳೊಂದರಲ್ಲಿಯೇ ಹದಿನಾರು ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಏರಿಸಲಾಗಿತ್ತು. ಜನವರಿಯಲ್ಲಿ ಹತ್ತು ಬಾರಿ ಬೆಲೆ ಏರಿಸಿದ್ದು, ಈ ಎರಡು ತಿಂಗಳಿನಲ್ಲಿ ಒಟ್ಟು ಪೆಟ್ರೋಲ್ ಬೆಲೆ ಲೀಟರಿಗೆ 7.12 ರೂ ಏರಿಕೆಯಾದರೆ, ಡೀಸೆಲ್ 7.45 ರೂ ಏರಿಕೆಯಾಗಿತ್ತು. ಫೆಬ್ರವರಿ 27ರಂದು ಅಂತಿಮವಾಗಿ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸಲಾಗಿತ್ತು. ಪೆಟ್ರೋಲ್‌ಗೆ 24 ಪೈಸೆ ಹಾಗೂ ಡೀಸೆಲ್‌ಗೆ 15 ಪೈಸೆ ಏರಿಸಲಾಗಿತ್ತು.

ಮಾರ್ಚ್ 12: ನಿಮ್ಮೂರಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?ಮಾರ್ಚ್ 12: ನಿಮ್ಮೂರಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ?

 ತೈಲದ ಮೇಲಿನ ತೆರಿಗೆ ಕಡಿತ ಮಾಡಿದ ಐದು ರಾಜ್ಯಗಳು

ತೈಲದ ಮೇಲಿನ ತೆರಿಗೆ ಕಡಿತ ಮಾಡಿದ ಐದು ರಾಜ್ಯಗಳು

ತೈಲ ಬೆಲೆ ದಾಖಲೆ ಮಟ್ಟ ತಲುಪಿದ್ದು, ಜನರ ಮೇಲಿನ ಬೆಲೆ ಏರಿಕೆ ಹೊರೆ ತಪ್ಪಿಸಲು ಐದು ರಾಜ್ಯಗಳು ತೆರಿಗೆ ಕಡಿತಗೊಳಿಸಿದ್ದವು. ರಾಜಸ್ಥಾನ, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್‌ನಲ್ಲಿ ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಲಾಗಿತ್ತು. ತೈಲ ಬೆಲೆ ಮೇಲಿನ ತೆರಿಗೆಯನ್ನು ಕಡಿತಗೊಳಿಸಲು ಸಾಧ್ಯವಾದ ದಾರಿ ಹುಡುಕುತ್ತಿರುವುದಾಗಿ ಈಚೆಗೆ ಕೇಂದ್ರ ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ನಿಟ್ಟಿನಲ್ಲಿ ಮಾತುಕತೆ ನಡೆಸಲಿರುವುದಾಗಿಯೂ ತಿಳಿದುಬಂದಿದೆ.

English summary
Petrol and diesel prices remained steady for the 14th consecutive day on march 13th in india
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X