ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೆ ಸೆಂಚುರಿ ಕಡೆಗೆ ಹೊರಟ ಇಂಧನ ಬೆಲೆ: ಕೊಲ್ಲಿ ಯುದ್ಧದ ನಂತರ ದಾಖಲೆ ಏರಿಕೆ

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 17: ಅಂತಾರಾಷ್ಟ್ರೀಯ ವಾಯಿದೆ ವಹಿವಾಟು ಮಾರುಕಟ್ಟೆಯಲ್ಲಿ ಬ್ರೆಂಟ್‌ ಕಚ್ಚಾ ತೈಲ ದರ ಸೋಮವಾರ ಶೇ.19.5ರಷ್ಟು ಏರಿಕೆಯಾಗಿದ್ದು, 72ಕ್ಕೆ ಜಿಗಿದಿದೆ.

ಇದು 1990-91ರ ಕೊಲ್ಲಿಯುದ್ಧದ ನಂತರ ಒಂದೇ ದಿನದ ಗರಿಷ್ಠ ಏರಿಕೆಯಾಗಿದೆ. ಭಾರತದಲ್ಲಿ ಕೂಡ ವಾಯಿದೆ ವಹಿವಾಟು ಮಾರುಕಟ್ಟೆಯಲ್ಲಿ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿರುವ ಕಚ್ಚಾ ತೈಲದ ದರದಲ್ಲಿಶೇ.10 ಏರಿಕೆಯಾಗಿದೆ.

ಸೌದಿ ಅರೇಬಿಯಾದಲ್ಲಿ ವಿಶ್ವದ ಅತಿ ದೊಡ್ಡ ಕಚ್ಚಾ ತೈಲ ಸಂಸ್ಕರಣಾ ಘಟಕದ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿರುವ ಹಿನ್ನೆಲೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಏರಿಕೆ ಕಾಣುವ ಎಲ್ಲಾ ಸಾಧ್ಯತೆಗಳಿವೆ.

ಉಗ್ರರ ದಾಳಿ ಸೌದಿ ತೈಲಾಗಾರದ ಮೇಲೆ: ಅದರ ಭಾರೀ ಬೆಲೆ ಏರಿಕೆ ಎಫೆಕ್ಟ್ ಭಾರತದ ಮೇಲೆ?ಉಗ್ರರ ದಾಳಿ ಸೌದಿ ತೈಲಾಗಾರದ ಮೇಲೆ: ಅದರ ಭಾರೀ ಬೆಲೆ ಏರಿಕೆ ಎಫೆಕ್ಟ್ ಭಾರತದ ಮೇಲೆ?

ಸೋಮವಾರ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಬ್ಯಾರಲ್'ಗೆ 72 ಡಾಲರ್'ಗೆ ತಲುಪಿದೆ. ಇದು ಹಿಂದಿನ ದರಕ್ಕಿಂತ ಶೇ.20ರಷ್ಟು ದುಬಾರಿಯಾಗಿದೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಲೀಟರ್‌ ಪೆಟ್ರೋಲ್‌ ದರ 72.03 ರೂ. ಮತ್ತು ಡೀಸೆಲ್‌ ದರ 65.43 ರೂ. ಇದೆ.

ಪಶ್ಚಿಮ ಬಂಗಾಳ ಕೋಲ್ಕತಾದಲ್ಲಿ ಪೆಟ್ರೋಲ್‌ ದರ 74.76 ರೂ. ಮತ್ತು ಡೀಸೆಲ್‌ ದರ 67.84 ರೂ. ಇದೆ. ತಮಿಳುನಾಡು ರಾಜಧಾನಿ ಚೆನ್ನೈನಲ್ಲಿ ಪೆಟ್ರೋಲ್‌ ದರ 74.85 ರೂ. ಮತ್ತು ಡೀಸೆಲ್‌ ದರ 69.15 ರೂ. ಇದೆ. ವಾಣಿಜ್ಯ ನಗರಿ ಮುಂಬಯಿನಲ್ಲಿ ಪೆಟ್ರೋಲ್‌ ದರ 77.71 ರೂ. ಮತ್ತು ಡೀಸೆಲ್‌ ದರ 68.62 ರೂ. ಇದೆ.

ಕಚ್ಚಾ ತೈಲ ದರ ತಾತ್ಕಾಲಿಕವಾಗಿದ್ದರೂ ಭಾರತಕ್ಕೆ ತೊಂದರೆ

ಕಚ್ಚಾ ತೈಲ ದರ ತಾತ್ಕಾಲಿಕವಾಗಿದ್ದರೂ ಭಾರತಕ್ಕೆ ತೊಂದರೆ

ಕಚ್ಚಾ ತೈಲ ದರ ತಾತ್ಕಾಲಿಕವಾಗಿದ್ದರೂ, ಭಾರತಕ್ಕೆ ನಕಾರಾತ್ಮಕವಾಗಿ ಪರಿಣಮಿಸಲಿದೆ. ಕೆಲವೇ ದಿನಗಳಲ್ಲಿತೈಲ ದರಗಳು ಏರಿಕೆಯಾಗಲಿವೆ. ಸದ್ಯಕ್ಕೆ 5-6 ರೂ. ಹೆಚ್ಚಳ ಸಾಧ್ಯತೆ ಇದೆ. ಸೌದಿಯಲ್ಲಿನ ಬಿಕ್ಕಟ್ಟು ಮುಂದುವರಿದರೆ ದರ ಮತ್ತಷ್ಟು ಏರಿಕೆಯಾದರೂ ಅಚ್ಚರಿ ಇಲ್ಲ. ಈ ನಡುವೆ ದಾಳಿಗೆ ಬಳಸಿರುವ ಆಯುಧಗಳು ಇರಾನ್‌ ಮೂಲದ್ದು ಎಂದು ಸೌದಿ ಅರೇಬಿಯಾ ಹೇಳಿದೆ.

ತೈಲೋತ್ಪಾದನೆ ಕುಂಠಿತ

ತೈಲೋತ್ಪಾದನೆ ಕುಂಠಿತ

ಸೌದಿ ಅರೇಬಿಯಾದಲ್ಲಿನ ವಿಶ್ವದ ಅತೀದೊಡ್ಡ ಕಚ್ಚಾ ತೈಲ ಸಂಸ್ಕರಣಾ ಘಟಕದ ಮೇಲೆ ಉಗ್ರರು ಡ್ರೋನ್ ದಾಳಿ ನಡೆಸಿರುವ ಹಿನ್ನಲೆಯಲ್ಲಿ ತೈಲೋತ್ಪಾದನೆ ಕುಂಠಿತಗೊಂಡಿದ್ದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಏರಿಕೆ ಕಾಣುವ ಸಾಧ್ಯತೆಗಳಿವೆ.

ಪೆಟ್ರೋಲ್, ಡೀಸೆಲ್ ಬೆಲೆ 5-6 ರೂಗಳಷ್ಟು ಏರಿಕೆ ಸಾಧ್ಯತೆ

ಪೆಟ್ರೋಲ್, ಡೀಸೆಲ್ ಬೆಲೆ 5-6 ರೂಗಳಷ್ಟು ಏರಿಕೆ ಸಾಧ್ಯತೆ

ದೇಶದಲ್ಲಿ ಮುಂದಿನ 15 ದಿನಗಳಲ್ಲಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ರೂ.5-6ರಷ್ಟು ಏರಿಕೆಯಾಗಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

ಭಾರತಕ್ಕೆ ತೊಂದರೆ ಇಲ್ಲ ಎಂದ ಪೆಟ್ರೋಲಿಯಂ ಸಚಿವಾಲಯ

ಭಾರತಕ್ಕೆ ತೊಂದರೆ ಇಲ್ಲ ಎಂದ ಪೆಟ್ರೋಲಿಯಂ ಸಚಿವಾಲಯ

ಆದರೆ, ಸೌದಿ ಅರೇಬಿಯಾದಲ್ಲಿ ಉತ್ಪಾದನೆ ಕಂಠಿತಗೊಂಡಿದ್ದರೂ ಅದರಿಂದ ಭಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟಪಡಿಸಿದೆ. ಭಾರತ ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದು ದೇಶ. ನಮಗೆ ಅತಿ ಹೆಚ್ಚು ತೈಲ ಸರಬರಾಜು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಸೌದಿ ಅರೇಬಿಯಾ ನ.2 ಸ್ಥಾನದಲ್ಲಿದೆ. ಸೌದಿ ಸರ್ಕಾರದ ಅರಾಮ್ಕೋ ಅಧಿಕಾರಿಗಳೇ ಭಾರತಕ್ಕೆ ಯಾವುದೇ ಸಮಸ್ಯೆಯಾಗವುದಿಲ್ಲ ಎಂದು ಹೇಳಿದ್ದಾರೆ.

ಯಥಾಸ್ಥಿತಿ ಕಾಯ್ದುಕೊಂಡ ಬೆಂಗಳೂರು

ಯಥಾಸ್ಥಿತಿ ಕಾಯ್ದುಕೊಂಡ ಬೆಂಗಳೂರು

ದೈನಂದಿನ ಬೆಲೆ ಬದಲಾವಣೆ ಪ್ರಕ್ರಿಯೆಯಲ್ಲಿ ಇಂದು ರಾಜ್ಯ ರಾಜ್ಯಧಾನಿ ಬೆಂಗಳೂರಿನ ಪೆಟ್ರೋಲ್ ದರ ಯಥಾಸ್ಥಿತಿ ಕಾಯ್ದುಕೊಂಡಿದೆ. ಇಂದಿನ ದರ ನಿನ್ನೆ ಅಷ್ಟೇ ಇದ್ದು ಲೀಟರ್‌ಗೆ 74.49 ರೂ ಇದೆ. ಡೀಸೆಲ್‌ ದರದಲ್ಲಿ ಕೂಡ ಬದಲಾವಣೆಯಾಗಿಲ್ಲ. ಇಂದಿನ ಬೆಲೆ 67.66ರೂ ಇದೆ.

English summary
Motorists in India could possibly be hit by a rise in fuel prices on the back of a rise in international crude oil prices.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X