ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ಈ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 5 ರೂ ಇಳಿಕೆ!

|
Google Oneindia Kannada News

ಶಿಲ್ಲಾಂಗ್, ಫೆಬ್ರವರಿ.16: ಮೇಘಾಲಯದಲ್ಲಿ ಮೌಲ್ಯವರ್ಧಿತ ತೆರಿಗೆ(VAT) ಕಡಿಮೆ ಮಾಡುವ ಮೂಲಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ 5 ರೂಪಾಯಿ ಇಳಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಕೆ.ಸಂಗ್ಮಾ ಮಂಗಳವಾರ ತಿಳಿಸಿದ್ದಾರೆ.

ರಾಜ್ಯದ ಚಿಲ್ಲರೆ ಮಾರುಕಟ್ಟೆಯಲ್ಲಿ ಪೆಟ್ರೋಲ್ ದರ 91.26 ರೂಪಾಯಿಂದ 85.86 ರೂಪಾಯಿಗೆ ಇಳಿಕೆಯಾಗಿದೆ. ಡೀಸೆಲ್ ಬೆಲೆಯು 86.23 ರೂಪಾಯಿಯಿಂದ 79.13 ರೂಪಾಯಿಗೆ ಇಳಿಕೆಯಾಗಿದೆ. ಸರಕು ಸಾಗಾಣಿಕೆದಾರರ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿರುವ ನಡುವೆ ರಾಜ್ಯ ಸರ್ಕಾರವು ಈ ತೀರ್ಮಾನವನ್ನು ಘೋಷಿಸಿದೆ.

ಶತಕ ಮುಟ್ಟಿದ ಪೆಟ್ರೋಲ್ ಬೆಲೆ; ವೈರಲ್ ಆಯ್ತು ಈ ಫೋಟೊ...ಶತಕ ಮುಟ್ಟಿದ ಪೆಟ್ರೋಲ್ ಬೆಲೆ; ವೈರಲ್ ಆಯ್ತು ಈ ಫೋಟೊ...

ಕಳೆದ ವಾರವಷ್ಟೇ ಮೇಘಾಲಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗೆ 2 ರೂಪಾಯಿ ರಿಯಾಯಿತಿ ನೀಡಿತ್ತು. ಇದರಿಂದ ಒಂದು ವಾರದಲ್ಲೇ ಪೆಟ್ರೋಲ್ ಮೇಲೆ 7.4 ರೂಪಾಯಿ ಮತ್ತು ಡೀಸೆಲ್ ಮೇಲೆ 7.1 ರೂಪಾಯಿ ರಿಯಾಯಿತಿ ನೀಡಿದಂತೆ ಆಗಿದೆ.

Petrol, Diesel Prices Cut By Rs 5 In This State, How Its Possible

ಉಪವಾಸ ಸತ್ಯಾಗ್ರಹದ ಎಚ್ಚರಿಕೆ:

ಇಂಧನ ಬೆಲೆ ಏರಿಕೆ ವಿರೋಧಿಸಿ ರಾಜ್ಯದಲ್ಲಿ ಸರಕು ಸಾಗಾಟದಾರರು ಎರಡು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರು. ಸರ್ಕಾರವು ಸೂಕ್ತ ರೀತಿ ಕ್ರಮ ತೆಗೆದುಕೊಳ್ಳದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆ ಮುಖ್ಯಮಂತ್ರಿ ಕೆ. ಸಂಗ್ಮಾ ಅವರು ಇಂಧನದ ಮೇಲೆ ವಿಧಿಸುತ್ತಿದ್ದ ಶೇ.12ರಷ್ಟು ವ್ಯಾಟ್ ನ್ನು ಕಡಿತಗೊಳಿಸುವುದಕ್ಕೆ ನಿರ್ಧರಿಸಿದ್ದಾಗಿ ತಿಳಿಸಿದ್ದಾರೆ. ಕಳೆದ ವರ್ಷ ಮೇಘಾಲಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 326 ಕೋಟಿ ರೂಪಾಯಿ ತೆರಿಗೆ ಸಂಗ್ರಹಿಸಲಾಗಿದೆ.

English summary
Petrol, Diesel Prices Cut By Rs 5 In This State, How Its Possible.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X