ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾರ್ಚ್ 4ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?

|
Google Oneindia Kannada News

ನವದೆಹಲಿ, ಮಾರ್ಚ್ 04: ದೇಶದಲ್ಲಿ ಸತತ ಐದನೇ ದಿನ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಸ್ಥಿರತೆ ಕಾಯ್ದುಕೊಂಡಿದೆ ಎಂದು ಪ್ರಮುಖ ತೈಲ ಕಂಪನಿ ಇಂಡಿಯನ್ ಆಯಿಲ್ ತಿಳಿಸಿದೆ.

ಫೆಬ್ರವರಿ 27ರಂದು ಕೊನೆಯದಾಗಿ ತೈಲ ಬೆಲೆಯಲ್ಲಿ ಏರಿಕೆ ಮಾಡಲಾಗಿತ್ತು. ದೆಹಲಿಯಲ್ಲಿ ಲೀಟರ್ ಪೆಟ್ರೋಲ್‌ಗೆ 24 ಪೈಸೆಯಂತೆ ಏರಿಕೆ ಮಾಡಿ, 91.17 ರೂ ಹಾಗೂ ಡೀಸೆಲ್‌ಗೆ 15 ಪೈಸೆ ಏರಿಕೆ ಮಾಡಿ ಲೀಟರಿಗೆ 81.47 ರೂವರೆಗೂ ತಲುಪಿತ್ತು. ಅದೇ ಬೆಲೆ ಮಾರ್ಚ್ 4ರಂದು ಸ್ಥಿರವಾಗಿದೆ.

ತೈಲ ಬೆಲೆ ಏರಿಕೆ; ಪೆಟ್ರೋಲ್, ಡೀಸೆಲ್ ಬಳಕೆಯೂ ಕಡಿಮೆಯಾಗಿದೆಯಂತೆ!ತೈಲ ಬೆಲೆ ಏರಿಕೆ; ಪೆಟ್ರೋಲ್, ಡೀಸೆಲ್ ಬಳಕೆಯೂ ಕಡಿಮೆಯಾಗಿದೆಯಂತೆ!

ಕಳೆದ ತಿಂಗಳಿನಿಂದಲೂ ದೇಶಾದ್ಯಂತ ತೈಲ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ಫೆಬ್ರವರಿ ತಿಂಗಳಲ್ಲಿ ಹದಿನಾಲ್ಕು ಬಾರಿ ತೈಲ ಬೆಲೆ ಏರಿಕೆ ಕಂಡಿದೆ. ಭಾರತದಲ್ಲಿ ಇಂಧನದ ಮೇಲೆ ಅಬಕಾರಿ ಸುಂಕ 32. 98 ರೂಪಾಯಿ ಇದ್ದು, ಈ ಸುಂಕವನ್ನು ಕಡಿತಗೊಳಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಮಾರ್ಚ್ ತಿಂಗಳ ಮಧ್ಯದಲ್ಲಿ ಈ ಬಗ್ಗೆ ನಿರ್ಧಾರ ಪ್ರಕಟಿಸುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.

Petrol Diesel Price On March 4 In Major Cities of India

ದೇಶದ ಪ್ರಮುಖ ನಗರಗಳಲ್ಲಿ ಮಾರ್ಚ್ 4ರ ತೈಲ ಬೆಲೆ ವಿವರ ಇಲ್ಲಿದೆ...

ನಗರ ಪೆಟ್ರೋಲ್ ಡೀಸೆಲ್
ದೆಹಲಿ: 91.17 81.47
ಮುಂಬೈ: 97.57 88.60
ಚೆನ್ನೈ: 93.11 86.45
ಕೋಲ್ಕತ್ತಾ: 91.35 84.35
ಬೆಂಗಳೂರು:94.22 86.37

ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಏರಿಳಿತ ಮತ್ತು ಡಾಲರ್-ರೂಪಾಯಿ ವಿನಿಮಯ ದರದ ಆಧಾರದ ಮೇಲೆ ಪೆಟ್ರೋಲ್-ಡೀಸೆಲ್ ಬೆಲೆ ನಿರ್ಧರಿತವಾಗುತ್ತದೆ. ಸರ್ಕಾರಿ ತೈಲ ಕಂಪನಿಗಳು ಬೆಲೆಗಳನ್ನು ಪರಿಶೀಲಿಸಿದ ನಂತರ, ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಈ ಬೆಲೆಯನ್ನು ಪರಿಷ್ಕರಿಸುತ್ತವೆ ಮತ್ತು ಪ್ರತಿದಿನ ಬೆಳಿಗ್ಗೆ 6 ಗಂಟೆಯಿಂದ ಪೆಟ್ರೋಲ್ ದರ ಮತ್ತು ಡೀಸೆಲ್ ದರವನ್ನು ಘೋಷಿಸುತ್ತವೆ.

English summary
Petrol, diesel prices steady for fifth consecutive day in country. Here is details on Petrol, diesel prices in important cities,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X