ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕ ಸಮರ ನಂತರ ವಾಹನ ಸವಾರರಿಗೆ ಆಘಾತ ಕಾದಿದೆ

|
Google Oneindia Kannada News

ಬೆಂಗಳೂರು, ಮೇ 21: ಲೋಕಸಭೆ ಚುನಾವಣೆ 2019ರ ಫಲಿತಾಂಶ ಹೊರ ಬೀಳುವುದಕ್ಕೂ ಮುನ್ನವೇ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗತೊಡಗಿದೆ. ಮೇ 23ರ ನಂತರ ತ್ವರಿತಗತಿಯಲ್ಲಿ ಇಂಧನ ಬೆಲೆ ಏರಿಕೆ ನಿಶ್ಚಯವಾಗಿದೆ.

ಸೋಮವಾರದಂದು ಪೆಟ್ರೊಲ್ ದರ 9 ಪೈಸೆ ಏರಿಕೆ ಕಂಡು 71.12 ರು ಪ್ರತಿ ಲೀಟರ್ ನಷ್ಟಿತ್ತು. ಡೀಸೆಲ್ 15 ಪೈಸೆ ಏರಿಕೆ ಕಂಡು 66.11 ರು ಪ್ರತಿ ಲೀಟರ್ ನಷ್ಟಿತ್ತು. ಕಳೆದ 40 ದಿನಗಳಿಂದ ಇಂಧನ ದರದ ಮೇಲೆ ನಿಯಂತ್ರಣ ಹೊಂದಿದ್ದ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ಚುನಾವಣೆ ಫಲಿತಾಂಶದ ಬಳಿಕ ಬೆಲೆ ಏರಿಕೆಗೆ ಮುಂದಾಗಲಿವೆ.

ಪೆಟ್ರೋಲ್, ಡೀಸೆಲ್ ದರದಲ್ಲಿ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟು?ಪೆಟ್ರೋಲ್, ಡೀಸೆಲ್ ದರದಲ್ಲಿ ತುಸು ಇಳಿಕೆ, ನಿಮ್ಮ ನಗರದಲ್ಲಿ ಎಷ್ಟು?

ಇರಾನ್ ನಿಂದ ತಲ ಖರೀದಿಗೆ ಅಮೆರಿಕ ನಿರ್ಬಂಧ ಹೇರುವ ಭೀತಿಯಿಂದ, ಇಂಧನ ಆಮದು ಮಾಡಿಕೊಳ್ಳಲು ಭಾರತವು ಬೇರೆ ದೇಶವನ್ನು ಹುಡುಕಬೇಕಾಗಿದೆ. ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

ಮೇ 23ಕ್ಕೆ 5ರಿಂದ 10 ರುಪಾಯಿ ತೈಲ ಬೆಲೆ ಏರಿಕೆಗೆ ನಡೆದಿದೆಯಂತೆ ಸಿದ್ಧತೆ!ಮೇ 23ಕ್ಕೆ 5ರಿಂದ 10 ರುಪಾಯಿ ತೈಲ ಬೆಲೆ ಏರಿಕೆಗೆ ನಡೆದಿದೆಯಂತೆ ಸಿದ್ಧತೆ!

ಹೀಗಾಗಿ, ಪೂರೈಕೆ ಕೊರತೆಯಿಂದ ಇಂಧನ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ಹೇಳಿದೆ.

ಇರಾನ್ ಮೇಲೆ ಅಮೆರಿಕದ ನಿರ್ಬಂಧ

ಇರಾನ್ ಮೇಲೆ ಅಮೆರಿಕದ ನಿರ್ಬಂಧ

ಇರಾನ್ ಮೇಲೆ ನಿರ್ಬಂಧವನ್ನು ಅಮೆರಿಕ ಮುಂದುವರೆಸಿದ್ದೇ ಆದಲ್ಲಿ ಕಚ್ಚಾ ತೈಲ ಬೆಲೆ 100 ಡಾಲರ್ ಮುಟ್ಟಿದರೂ ಅಚ್ಚರಿಯೇನಿಲ್ಲ ಎಂಬ ಮಾತು ಕಳೆದ ವರ್ಷಾಂತ್ಯದಿಂದ ಕೇಳಿ ಬಂದಿತ್ತು .ಆದರೆ, ಸೌದಿ ಅರೇಬಿಯಾ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಹಾಗೂ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ನಡುವಿನ ತೈಲ ಒಪ್ಪಂದದಿಂದಾಗಿ ಕಚ್ಚಾ ತೈಲ ಬೆಲೆ ಸ್ಥಿಮಿತಕ್ಕೆ ಬಂದಿತ್ತು.

ತೈಲ ಆಮದು ನಂಬಿಕೊಂಡಿರುವ ದೇಶಗಳು

ತೈಲ ಆಮದು ನಂಬಿಕೊಂಡಿರುವ ದೇಶಗಳು

ಇರಾನ್ ಮೇಲೆ ಅಮೆರಿಕ ಹೇರುವ ನಿರ್ಬಂಧದ ಮೇಲೆ ಭಾರತ, ಚೀನಾ, ದಕ್ಷಿಣ ಕೊರಿಯಾ, ಜಪಾನ್, ಟರ್ಕಿ, ಇಟಲಿ, ಯುನೈಟೆಡ್ ಅರಬ್ ಎಮಿರೇಟ್ಸ್ ಹಾಗೂ ತೈವಾನ್ ದೇಶಗಳ ಭವಿಷ್ಯ ನಿಂತಿದೆ. ಕಳೆದ ವಾರಾಂತ್ಯದಲ್ಲಿ ಪೆಟ್ರೋಲ್, ಡೀಸೆಲ್ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿತ್ತು. ಆದರೆ, ಮೇ 20ರ ನಂತರ ಏರಿಕೆಯ ಸೂಚನೆ ಸಿಕ್ಕಿದೆ.

ಕಚ್ಚಾತೈಲ ಬೆಲೆ ಏರಿಕೆ

ಕಚ್ಚಾತೈಲ ಬೆಲೆ ಏರಿಕೆ

ಕಚ್ಚಾತೈಲ ಬೆಲೆ ಈ ತಿಂಗಳ ಅಂತ್ಯಕ್ಕೆ ಏರಿಕೆಯಾಗುವ ಎಲ್ಲಾ ಲಕ್ಷಣಗಳು ಕಂಡು ಬಂದಿವೆ. ಮೇ 19ರ ತನಕವಾದರೂ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚಿನ ಏರಿಕೆ ಮಾಡುವುದಿಲ್ಲ. ಮೇ 23ರ ನಂತರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಬೆಲೆ ಏರಿಕೆ ಮಾಡಲಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಭಾರತ ತನ್ನ ಶೇ 80ರಷ್ಟು ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ.

ಎಷ್ಟು ಏರಿಕೆಯಾಗಬಹುದು?

ಎಷ್ಟು ಏರಿಕೆಯಾಗಬಹುದು?

ರೀಟೈಲ್ ದರವನ್ನು ಏರಿಕೆ ಮಾಡುವ ಸಾಧ್ಯತೆ ಹೆಚ್ಚಿದ್ದು, 3 ರಿಂದ 5 ರು ಪ್ರತಿ ಲೀಟರ್ ನಂತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಬಹುದು. ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿ ಪೆಟ್ರೋಲ್ 3 ರು ಪ್ರತಿ ಲೀಟರ್ ಹಾಗೂ ಡೀಸೆಲ್ 5 ರು ಪ್ರತಿ ಲೀಟರ್ ನಂತೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗಿತ್ತು. ಈ ನಷ್ಟವನ್ನು ಭರಿಸಲು ಈಗ ಇದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏರಿಕೆ ಮಾಡಬಹುದು.

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ

ಬೆಂಗಳೂರು ನಗರದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ
* ಮಂಗಳವಾರ (ಮೇ 11)ದಂದು ಪೆಟ್ರೋಲ್: 73.49ರು(0.05 ಪೈಸೆ ಇಳಿಕೆ)
* ಸೋಮವಾರದಂದು ಪೆಟ್ರೋಲ್ : 73.44 ರು(+0.10ಪೈಸೆ )
* ಭಾನುವಾರದಂದು ಪೆಟ್ರೋಲ್ : 73.44ರು

ಡೀಸೆಲ್ ಬೆಲೆ
* ಮಂಗಳವಾರ(ಮೇ 21)ದಂದು ಡೀಸೆಲ್ : 68.35ರು(0.09 ಪೈಸೆ ಇಳಿಕೆ) * ಸೋಮವಾರದಂದು ಡೀಸೆಲ್: 68.25 ರು(+0.15ಪೈಸೆ)
* ಭಾನುವಾರದಂದು ಡೀಸೆಲ್: 68.11ರು

English summary
State-owned oil marketing companies (OMC) on Monday have raised the retail price of petrol and diesel signaling that election induced price moderation for petroleum products has come to an end.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X