ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಟ್ರೋಲ್, ಡೀಸೆಲ್, ಗ್ಯಾಸ್: ಮಾರ್ಚ್.1ರಿಂದ ಎಲ್ಲವೂ ಬದಲು!

|
Google Oneindia Kannada News

ನವದೆಹಲಿ, ಫೆಬ್ರವರಿ.28: ಕೊರೊನಾವೈರಸ್ ಮಾರ್ಗಸೂಚಿ ನಿಯಮಗಳನ್ನು ಪಾಲನೆ ಮಾಡಿದ್ದು ಆಯಿತು. ಕೊವಿಡ್-19 ನಿಯಮಗಳ ಪಾಲನೆ ಜೊತೆ ಜೊತೆಗೆ ದೇಶದಲ್ಲಿ ಮಾರ್ಚ್.01ರಿಂದ ಹೊಸ ಬದಲಾವಣೆಗಳು ಆಗಲಿವೆ.

ಪೆಟ್ರೋಲ್ ದರ, ಡೀಸೆಲ್ ದರ, ಸಿಲಿಂಡರ್ ಬೆಲೆ ಒಂದು ದಿಕ್ಕಿದಲ್ಲಿ ಏರಿಕೆಯತ್ತ ಸಾಗುತ್ತಿದೆ. ಬೆಲೆ ಏರಿಕೆಯ ಬಿಸಿ ಸಾರ್ವಜನಿಕರ ಜೇಬು ಸುಡುತ್ತಿದೆ. 2021ರ ಮಾರ್ಚ್.01ರಿಂದ ದೇಶದಲ್ಲಿ ಸಿಲಿಂಡರ್ ದರ, ಪೆಟ್ರೋಲ್ ಮತ್ತು ಡೀಸೆಲ್ ದರ, ಭಾರತೀಯ ಸ್ಟೇಟ್ ಬ್ಯಾಂಕ್ ಖಾತೆದಾರರಿಗೆ ಕೆವೈಸಿ ಕಡ್ಡಾಯ, ಎಟಿಎಂಗಳಲ್ಲಿ 2000 ರೂ ನೋಟು ಅಲಭ್ಯ, ಐಎಫ್ಎಸ್ ಸಿ ಕೋಡ್ ಬದಲಾವಣೆ, ಫಾಸ್ಟ್ಯಾಗ್ ಕಾರ್ಡ್ ಪಡೆಯಲು ಹಣ, ವಿಶೇಷ ರೈಲುಗಳ ಸಂಚಾರ ಹೀಗೆ ಹಲವು ವಿಭಾಗಗಳಲ್ಲಿ ಬದಲಾವಣೆಗಳ ಆಗಲಿವೆ.

ತೈಲ ಬೆಲೆ ಏರಿಕೆ; ಸೈಕಲ್‌ನಲ್ಲಿ ಅಧಿವೇಶನಕ್ಕೆ ಬಂದ ತೇಜಸ್ವಿ ಯಾದವ್ತೈಲ ಬೆಲೆ ಏರಿಕೆ; ಸೈಕಲ್‌ನಲ್ಲಿ ಅಧಿವೇಶನಕ್ಕೆ ಬಂದ ತೇಜಸ್ವಿ ಯಾದವ್

ಭಾರತದಲ್ಲಿ ಮಾರ್ಚ್.01ರಿಂದ ಬದಲಾವಣೆ ಕಾಣುತ್ತಿರುವ ಪ್ರಮುಖ ಏಳು ಅಂಶಗಳ ಕುರಿತು ಒಂದು ವಿಶೇಷ ವರದಿ ಇಲ್ಲಿದೆ ನೋಡಿ.

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ

ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆ

ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳಿನ ಮೊದಲ ದಿನ ಅಡುಗೆ ಅನಿಲದ ಹೊಸ ದರವನ್ನು ಪ್ರಕಟಿಸಲಾಗುತ್ತದೆ. ಫೆಬ್ರವರಿ ತಿಂಗಳೊಂದರಲ್ಲೇ ಮೂರು ಬಾರಿ ಸಿಲಿಂಡರ್ ದರದಲ್ಲಿ ಏರಿಕೆಯಾಗಿತ್ತು. 21 ದಿನಗಳಲ್ಲೇ 100 ರೂ ಸಿಲಿಂಡರ್ ಬೆಲೆ ಹೆಚ್ಚಳವಾಗಿತ್ತು. ಪ್ರಸ್ತುತ 14.2 ಕೆಜಿ ಸಿಲಿಂಡರ್ ದರ ದೆಹಲಿಯಲ್ಲಿ 794, ಕೋಲ್ಕತ್ತಾದಲ್ಲಿ 745.50 ಮತ್ತು ಚೆನ್ನೈನಲ್ಲಿ 735 ರೂಪಾಯಿಯಿದೆ.

ಇಂಧನ ಬೆಲೆ ಇಳಿಕೆಯ ಸೂಚನೆ ನೀಡಿದ ಸಚಿವ

ಇಂಧನ ಬೆಲೆ ಇಳಿಕೆಯ ಸೂಚನೆ ನೀಡಿದ ಸಚಿವ

ಚಳಿಗಾಲದ ಅಂತ್ಯದ ವೇಳೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನಿ ನೀಡಿದ್ದಾರೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಆಗಿರುವ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನರ ಮೇಲೂ ಅದರ ಪರಿಣಾಮ ಬೀರಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾತೈಲಕ್ಕೆ ಬೇಡಿಕೆ ಹೆಚ್ಚಾಗಿತ್ತು. ಈ ಹಿನ್ನೆಲೆ ಬೆಲೆ ಏರಿಕೆಯಾಗಿತ್ತು. ಚಳಿಗಾಲದ ಅಂತ್ಯದ ವೇಳೆಗೆ ಇಂಧನ ಬೆಲೆ ಇಳಿಕೆಯ ಲಕ್ಷಣಗಳಿವೆ ಎಂದು ತಿಳಿಸಿದ್ದಾರೆ.

ಖಾತೆದಾರರಿಗೆ ಕೆವೈಸಿ ಕಡ್ಡಾಯಗೊಳಿಸಿದ ಎಸ್ ಬಿಐ

ಖಾತೆದಾರರಿಗೆ ಕೆವೈಸಿ ಕಡ್ಡಾಯಗೊಳಿಸಿದ ಎಸ್ ಬಿಐ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಖಾತೆದಾರರು ತಮ್ಮ ಖಾತೆಗಳನ್ನು ಸಕ್ರಿಯವಾಗಿಡಲು ಬಯಸಿದರೆ ಮಾರ್ಚ್.01ರೊಳಗೆ ಕಡ್ಡಾಯವಾಗಿ ತಮ್ಮ ಕೆವೈಸಿ(Know Your Customer) ಮಾಹಿತಿಯನ್ನು ದಾಖಲಿಸಿಕೊಳ್ಳಬೇಕು.

2000 ರೂ. ನೋಟು ಎಟಿಎಂಗಳಲ್ಲಿ ಬರುವುದಿಲ್ಲ

2000 ರೂ. ನೋಟು ಎಟಿಎಂಗಳಲ್ಲಿ ಬರುವುದಿಲ್ಲ

ಇಂಡಿಯನ್ ಬ್ಯಾಂಕ್ ಎಟಿಎಂಗಳಲ್ಲಿ ಮಾರ್ಚ್.01ರಿಂದ 2000 ಮುಖಬೆಲೆಯ ನೋಟುಗಳು ಸಿಗುವುದಿಲ್ಲ. ಒಂದು ವೇಳೆ ಗ್ರಾಹಕರು 2000 ರೂ. ಮುಖಬೆಲೆಯ ನೋಟುಗಳನ್ನು ಪಡೆಯುವುದಕ್ಕೆ ಇಚ್ಛಿಸಿದರೆ ಬ್ಯಾಂಕಿನ ಕ್ಯಾಶ್ ಕೌಂಟರ್ ಗೆ ತೆರಳಿ ಅಲ್ಲಿ ಹಣವನ್ನು ಬದಲಾಯಿಸಿಕೊಳ್ಳುವುದಕ್ಕೆ ಅವಕಾಶವಿದೆ. ಆದರೆ ಯಾವುದೇ ಕಾರಣಕ್ಕೂ ಎಟಿಎಂಗಳಲ್ಲಿ 2000 ರೂಪಾಯಿ ನೋಟುಗಳನ್ನು ತುಂಬಿಸುವುದಿಲ್ಲ ಎಂದು ಇಂಡಿಯನ್ ಬ್ಯಾಂಕ್ ಸ್ಪಷ್ಟಪಡಿಸಿದೆ.

ಐಎಫ್ಎಸ್ ಸಿ ಕೋಡ್ ಬದಲಾಯಿಸಿದ ಬ್ಯಾಂಕ್ ಗಳು

ಐಎಫ್ಎಸ್ ಸಿ ಕೋಡ್ ಬದಲಾಯಿಸಿದ ಬ್ಯಾಂಕ್ ಗಳು

ಬ್ಯಾಂಕ್ ಆಫ್ ಬರೋಡಾದಲ್ಲಿ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗಳು ವಿಲೀನಗೊಂಡ ನಂತರದಲ್ಲಿ ಈ ಬ್ಯಾಂಕ್ ಗಳ ಐಎಫ್ಎಸ್ ಸಿ ಕೋಡ್ ಬದಲಾವಣೆ ಮಾಡಲಾಗಿದೆ. ಮಾರ್ಚ್.01ರಿಂದ ಬ್ಯಾಂಕಿನ IFSC ಕೋಡ್ ಬದಲಾವಣೆಯು ಜಾರಿಗೆ ಬರಲಿದೆ. ಮಾರ್ಚ್.31ರೊಳಗೆ ಹೊಸ MICR ಸಂಖ್ಯೆಯನ್ನು ಹೊಂದಿರುವ ಹೊಸ ಪಾಸ್ ಬುಕ್ ಗಳನ್ನು ಪಡೆಯುವಂತೆ ಬ್ಯಾಂಕ್ ಆಫ್ ಬರೋಡಾ ತಮ್ಮ ಗ್ರಾಹಕರಿಗೆ ತಿಳಿಸಿದೆ. ಏಪ್ರಿಲ್.01ರಿಂದ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ಗ್ರಾಹಕರು ಕೂಡಾ ಬ್ಯಾಂಕ್ ಆಫ್ ಬರೋಡಾದ ಗ್ರಾಹಕರಾಗುತ್ತಾರೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

IFSC ಕೋಡ್ ಬದಲಾಯಿಸಲು ಬಯಸಿದ PNSC

IFSC ಕೋಡ್ ಬದಲಾಯಿಸಲು ಬಯಸಿದ PNSC

ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಐಎಫ್ಎಸ್ ಸಿ ಕೋಡ್ ಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ತರಲು ತೀರ್ಮಾನಿಸಿದೆ. ತಮ್ಮ ಸಹಭಾಗಿತ್ವದ ಓರಿಯಂಟಲ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಜೊತೆಗೆ ಬ್ಯಾಂಕಿನ IFSC ಮತ್ತು MICR ಕೋಡ್ ಬದಲಾವಣೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಮುಂದಾಗಿದೆ. ಹೊಸ ಕೋಡ್ ಪಡೆಯುವುದರಲ್ಲಿ ಸ್ವಲ್ಪ ತೊಂದರೆ ಎದುರಾಗಿರುವ ಹಿನ್ನೆಲೆ ಮಾರ್ಚ್.31ರವರೆಗೂ ಹಳೆಯ ಕೋಡ್ ಚಾಲ್ತಿಯಲ್ಲಿ ಇರಲಿದೆ.

ಟೋಲ್ ಗಳಲ್ಲಿ ಉಚಿತವಾಗಿ ಫಾಸ್ಟ್ಯಾಗ್ ಸಿಗುವುದಿಲ್ಲ

ಟೋಲ್ ಗಳಲ್ಲಿ ಉಚಿತವಾಗಿ ಫಾಸ್ಟ್ಯಾಗ್ ಸಿಗುವುದಿಲ್ಲ

ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಯ ಟೋಲ್ ಗೇಟ್ ಗಳಲ್ಲಿ ಇಷ್ಟು ದಿನ ಉಚಿತವಾಗಿ ಫಾಸ್ಟ್ಯಾಗ್ ಕಾರ್ಡ್ ಗಳನ್ನು ವಿತರಿಸಲಾಗುತ್ತಿತ್ತು. ಆದರೆ ಮಾರ್ಚ್.01ರಿಂದ ಒಂದು ಫಾಸ್ಟ್ಯಾಗ್ ಕಾರ್ಡ್ ಬೆಲೆಯನ್ನು 100 ರೂಪಾಯಿಗೆ ನಿಗದಿಗೊಳಿಸಲಾಗಿದೆ ಎಂದು ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ತಿಳಿಸಿದೆ.

ದೇಶದಲ್ಲಿ ಮಾರ್ಚ್.01ರಿಂದ ವಿಶೇಷ ರೈಲು ವ್ಯವಸ್ಥೆ

ದೇಶದಲ್ಲಿ ಮಾರ್ಚ್.01ರಿಂದ ವಿಶೇಷ ರೈಲು ವ್ಯವಸ್ಥೆ

ಮಾರ್ಚ್.01ರಿಂದ ಹಲವು ವಿಶೇಷ ರೈಲುಗಳ ಸಂಚಾರ ಆರಂಭಿಸುವುದಾಗಿ ಭಾರತೀಯ ರೈಲ್ವೆ ಇಲಾಖೆ ತಿಳಿಸಿದೆ. ಈ ವಿಶೇಷ ರೈಲುಗಳ ಸಂಚಾರದಿಂದ ಉತ್ತರ ಪ್ರದೇಶ ಮತ್ತು ಬಿಹಾರದ ಕಾರ್ಮಿಕರಿಗೆ ಹಚ್ಚಿನ ಅನುಕೂಲವಾಗಲಿದೆ. ಪಶ್ಚಿಮ ವಿಭಾಗದಲ್ಲಿ 22 ಹೊಸ ರೈಲುಗಳನ್ನು ಬಿಡುವುದಕ್ಕೆ ತೀರ್ಮಾನಿಸಲಾಗಿದೆ. ಈ ರೈಲುಗಳು ದೆಹಲಿ, ಮಧ್ಯ ಪ್ರದೇಶ, ಮುಂಬೈ ಸೇರಿದಂತೆ ಹಲವು ಭಾಗಗಳಲ್ಲಿ ಸಂಚರಿಸಲಿವೆ.

English summary
Petrol, Diesel, Gas And Fastag Card: 7 Major Changes From March 1 In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X