ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಿರುವನಂತಪುರ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್‌ ಬಾಂಬ್‌ ದಾಳಿ!

|
Google Oneindia Kannada News

ತಿರುವನಂತಪುರ, ಜೂನ್ 08 : ಇಲ್ಲಿನ ಬಿಜೆಪಿ ಜಿಲ್ಲಾ ಕಚೇರಿ ಮೇಲೆ ಬುಧವಾರ ಕಿಡಿಗೇಡಿಗಳು ಪೆಟ್ರೋಲ್‌ ಬಾಂಬ್ ದಾಳಿ ನಡೆಸಿದ್ದಾರೆ.

ಬೈಕ್ ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಈ ದಾಳಿ ನಡೆಸಿದ್ದಾರೆ. ಆ ವೇಳೆ ಕಚೇರಿಯಲ್ಲಿ ಯಾರೂ ಇಲ್ಲದಿದ್ದರಿಂದ ಅದೃಷ್ಟವಶಾತ್ ಯಾವುದೇ ಪ್ರಾಣಾಹಾನಿಯಾಗಿಲ್ಲ. ಕಚೇರಿ ಮುಂಭಾಗದಲ್ಲಿದ್ದ ಕುರ್ಚಿಯೊಂದು ಸುಟ್ಟುಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Petrol bomb hurled at BJP office in Thiruvananthapuram

'ದಾಳಿಯ ಹಿಂದೆ ಸಿಪಿಎಂ ಸಂಚು ಇದೆ' ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಸುರೇಶ್‌ ಆರೋಪಿಸಿದ್ದಾರೆ. ಘಟನೆ ರಾತ್ರಿ 8.30ಕ್ಕೆ ನಡೆದಿದ್ದರೂ ಪೊಲೀಸರು ಸ್ಥಳಕ್ಕೆ ಬರುವಾಗ ತಡ ವಾಗಿತ್ತು ಎಂದು ದೂರಿದ್ದಾರೆ.

ಸೀತರಾಂ ಯೆಚೂರಿ ಮೇಲಿನ ಹಲ್ಲೆಯ ಪ್ರತೀಕಾರ

ಸೀತರಾಂ ಯೆಚೂರಿ ಮೇಲಿನ ಹಲ್ಲೆಯ ಪ್ರತೀಕಾರ

ದೆಹಲಿಯಲ್ಲಿ ಸಿಪಿಎಂ ಮುಖಂಡ ಸೀತರಾಂ ಯೆಚೂರಿ ಅವರ ಮೇಲೆ ಹಿಂದೂ ಸೇನಾ ಕಾರ್ಯಕರ್ತರು ಹಲ್ಲೆಗೆ ಪ್ರಯತ್ನಿಸಿದ ಫಲವಾಗಿ ತಿರುವನಂತಪುರ ಜಿಲ್ಲಾ ಕಚೇರಿ ಮೇಲೆ ದಾಳಿ ಮಾಡಲಾಗಿದೆ ಎಂದು ಹೇಳಲಾಗಿತ್ತಿದೆ.

ಜಿಲ್ಲಾ ಬಂದ್‌ಗೆ ಕರೆ

ಜಿಲ್ಲಾ ಬಂದ್‌ಗೆ ಕರೆ

ಬಾಂಬ್ ದಾಳಿ ಖಂಡಿಸಿ ಗುರುವಾರ ಪಕ್ಷವು ಜಿಲ್ಲಾ ಬಂದ್‌ಗೆ ಕರೆ ನೀಡಿದೆ ಎಂದು ಜಿಲ್ಲಾ ಘಟಕದ ಅಧ್ಯಕ್ಷ ಎಸ್‌.ಸುರೇಶ್‌ ಅವರು ತಿಳಿಸಿದ್ದಾರೆ.

ಪಿಣರಾಯಿ ವಿಜಯನ್ ಸರಕಾರದ ಪಿತೂರಿ

ಪಿಣರಾಯಿ ವಿಜಯನ್ ಸರಕಾರದ ಪಿತೂರಿ

ಬಿಜೆಪಿ ಕಾರ್ಯಕರ್ತರ ಹಾಗೂ ಕಚೇರಿ ಮೇಲಿನ ದಾಳಿಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರದ ವ್ಯವಸ್ಥಿತ ಪಿತೂರಿ ಎಂದು ಕೇರಳ ಬಿಜೆಪಿಯ ಕಾರ್ಯದರ್ಶಿ ವಿ ವಿ ರಾಜೇಶ್ ಆರೋಪಿಸಿದ್ದಾರೆ.

ಸಿಪಿಎಂ v/s ಬಿಜೆಪಿ ಕಾರ್ಯಕರ್ತರು

ಸಿಪಿಎಂ v/s ಬಿಜೆಪಿ ಕಾರ್ಯಕರ್ತರು

ಕೇರಳದಲ್ಲಿ ಸಿಪಿಎಂ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಹಾಗಾಗ ಮಾರಾಮಾರಿ ನಡೆಯುತ್ತಲೇ ಇವೆ. ಅಷ್ಟೇ ಅಲ್ಲದೆ ಬಿಜೆಪಿ ಕಾರ್ಯಕರ್ತರ ಸರಣಿ ಹತ್ಯೆಗಳು ಆಗುತ್ತಲೇ ಇವೆ. ಇದಕ್ಕೆ ಖುದ್ದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಗಳು ಸಹ ಕೇಳಿಬಂದಿದೆ.

English summary
Petrol bomb thrown at BJP Thiruvananthapuram district committee office. No injuries,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X