ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

By Manjunatha
|
Google Oneindia Kannada News

ಕೊಯಮತ್ತೂರು, ಮಾರ್ಚ್‌ 07: ತಮಿಳುನಾಡಿನ ಕೊಯಮತ್ತೂರಿನಲ್ಲಿನ ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಲಾಗಿದ್ದು, ಇದೊಂದು ಪ್ರತೀಕಾರದ ದಾಳಿ ಎನ್ನಲಾಗಿದೆ.

ತಮಿಳುನಾಡು: ಪೆರಿಯಾರ್ ವಿಗ್ರಹ ಧ್ವಂಸ, ಇಬ್ಬರ ಬಂಧನ ತಮಿಳುನಾಡು: ಪೆರಿಯಾರ್ ವಿಗ್ರಹ ಧ್ವಂಸ, ಇಬ್ಬರ ಬಂಧನ

ನಿನ್ನೆ ತಡ ರಾತ್ರಿ ಘಟನೆ ನಡೆದಿದ್ದು, ಬೈಕಿನಲ್ಲಿ ಬಂದ ಇಬ್ಬರು ಯುವಕರು ಪೆಟ್ರೋಲ್ ಬಾಂಬ್‌ಗಳನ್ನು ಎಸೆದು ಪರಾರಿಯಾಗಿದ್ದಾರೆ. ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ನಿನ್ನೆ ಪೆರಿಯಾರ್ ವಿಗ್ರಹಕ್ಕೆ ಹಾನಿ ಹಾಗೂ ತ್ರಿಪುರಾದಲ್ಲಿ ಲೆನಿನ್ ವಿಗ್ರಹ ಧ್ವಂಸ ಮಾಡಿದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಬಿಜೆಪಿ ರಾಜ್ಯಕಾರ್ಯದರ್ಶಿ ಎಚ್.ರಾಜಾ ಅವರು ಲೆನಿನ್ ವಿಗ್ರಹ ಧ್ವಂಸ ಮಾಡಿದುದರ ಪರವಾಗಿ ಟ್ವೀಟ್ ಮಾಡಿದ್ದರು, ಹಾಗೂ ಪೆರಿಯಾರ್ ವಿಗ್ರಹವಕ್ಕೂ ಹಾನಿ ಮಾಡುವಂತೆ ಕುಮ್ಮಕ್ಕು ನೀಡಿದ್ದರು ಹಾಗಾಗಿ ಬಿಜೆಪಿ ಕಚೇರಿ ಮೇಲೆ ಹಲ್ಲೆ ಮಾಡಲಾಗಿದೆ ಎನ್ನಲಾಗಿದೆ.

Petrol bomb attack on Tamilnadu BJP office

ಪೆರಿಯಾರ್ ವಿಗ್ರಹಕ್ಕೆ ಹಾನಿ ವಿಚಾರವನ್ನು ಇಂದು ಡಿಎಂಕೆ ಮತ್ತು ಇತರ ಪಕ್ಷಗಳು ಸಂಸತ್‌ನಲ್ಲಿ ಪ್ರಸ್ತಾಪಿಸಲು ತಯಾರಾಗಿದ್ದು, ಸಂಸಂತ್‌ನಲ್ಲಿ ಬಿಜೆಪಿ ವಿರುದ್ಧ ಡಿಎಂಕೆ ಪಕ್ಷ ಹರಿಹಾಯುವ ಸಂಭವ ಇದೆ.

ಪೆಟ್ರೋಲ್ ಬಾಂಬ್ ದಾಳಿ ಸಂಬಂಧ ತಂತಿ ಪೆರಿಯಾರ್ ದ್ರಾವಿಡ ಕಲಗಂ (ಕೆಪಿಡಿಕೆ) ಸಂಘದ ಸದಸ್ಯ ಬಾಲು ಎಂಬಾತ ಪೊಲೀಸರಿಗೆ ಶರಣಾಗಿದ್ದಾನೆ. ನಿನ್ನೆ ಪೆರಿಯಾರ್ ಪ್ರತಿಮೆಗೆ ಹಾನಿ ಸಂಬಂಧ ಒಬ್ಬ ಬಿಜೆಪಿ ಕಾರ್ಯಕರ್ತನನ್ನು ಬಂಧಿಸಲಾಗಿದೆ.

English summary
Petrol bomb attack on Tamilnadu BJP office. a CPM and a BJP worker has been arrested in the case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X