ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದ ಪೆಟ್ರೋಲ್, ಡೀಸೆಲ್ ದರ

By Sachhidananda Acharya
|
Google Oneindia Kannada News

ನವದೆಹಲಿ, ಮೇ 20: ಪೆಟ್ರೋಲ್ ಮತ್ತು ಡೀಸೆಲ್ ದರ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿದೆ. ಭಾನುವಾರ ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 33 ಪೈಸೆ ಹಾಗೂ ಡೀಸೆಲ್ ದರ 26 ಪೈಸೆಯಷ್ಟು ಹೆಚ್ಚಳ ಮಾಡಲಾಗಿದ್ದು, ಹಿಂದೆಂದಿಗಿಂತಲೂ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಪೆಟ್ರೋಲ್‌ ಮತ್ತು ಡೀಸೆಲ್ ದರ ಕಳೆದ 7 ದಿನಗಳಿಂದ ಸತತವಾಗಿ ಹೆಚ್ಚಳವಾಗಿದೆ. ಕಳೆದೊಂದು ವಾರದಲ್ಲಿ ಲೀಟರ್ ಪೆಟ್ರೋಲ್ ದರ ರೂ. 1.61ಮತ್ತು ಡೀಸೆಲ್ ದರ ಲೀಟರ್ ಗೆ ರೂ. 1.64 ಹೆಚ್ಚಳವಾಗಿದೆ.

ಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆಚುನಾವಣೆ ಮುಗಿದ ಬೆನ್ನಲ್ಲೇ ಮತ್ತೆ ಮೇಲೇರಿತು ಇಂಧನ ಬೆಲೆ

ಇಂದು ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ 33 ಪೈಸೆ ಮತ್ತು 23 ಪೈಸೆ ಏರಿಕೆ ಮಾಡಲಾಗಿದ್ದು, ದರ ಏರಿಕೆಯ ನಂತರ ಒಂದು ಲೀಟರ್ ಪೆಟ್ರೋಲ್ ದರ ದೆಹಲಿಯಲ್ಲಿ ರೂ. 76.24 ಆಗಿದೆ. ಡೀಸೆಲ್ ದರ ರೂ. 67.57 ಆಗಿದೆ.

Petrol and diesel price hits at highest level

ಈ ಹಿಂದೆ 2013ರ ಸೆಪ್ಟೆಂಬರ್‌ 14ರಂದು ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 76.06 ಆಗಿತ್ತು. ಇದು ಈವರೆಗಿನ ಗರಿಷ್ಠ ದರವಾಗಿತ್ತು. ಇದೀಗ ಈ ದಾಖಲೆ ಮುರಿದು ಪೆಟ್ರೋಲ್ ದರ ಹೊಸ ಎತ್ತರಕ್ಕೆ ಏರಿದೆ.

ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರ ಬಳಿಕ ಯಾವುದೇ ರೀತಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಮಾಡಿರಲಿಲ್ಲ. ಚುನಾವಣೆ ಮುಗಿಯುತ್ತಿದ್ದಂತೆ ಮೇ 14ರಿಂದ ಮತ್ತೆ ದರ ಏರಿಕೆ ಮಾಡಲಾಗಿತ್ತು.

ಮತ್ತೆ ದುಬಾರಿಯಾಗಬಹುದು ಪೆಟ್ರೋಲ್ ಮತ್ತು ಡೀಸೆಲ್!ಮತ್ತೆ ದುಬಾರಿಯಾಗಬಹುದು ಪೆಟ್ರೋಲ್ ಮತ್ತು ಡೀಸೆಲ್!

ಇದೀಗ ಬೆಂಗಳೂರಿನಲ್ಲಿ ಪೆಟ್ರೋಲ್ ದರ ರೂ. 77.48 ಆಗಿದ್ದು ಡೀಸೆಲ್ ದರ ರೂ. 68.73 ಆಗಿದೆ.

ಮೇ 14ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ಕ್ರಮವಾಗಿ ಲೀಟರ್‌ಗೆ 17 ಪೈಸೆ ಮತ್ತು 21 ಪೈಸೆ ಹೆಚ್ಚಳ ಮಾಡಲಾಗಿತ್ತು. ಅಲ್ಲಿಂದ ತೈಲ ದರ ಏರಿಕೆ ಮುಂದುವರಿದಿದ್ದು ಇನ್ನೂ ಏರುತ್ತಲೇ ಇದೆ.

English summary
Petrol price and diesel rates on Sunday touched an all-time high of Rs 76.24 and Rs 67.57 respectively in the national capital, renewing calls for the government to cut excise tax rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X