ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೈಲ ಬೆಲೆ ಏರಿಕೆ; ಪೆಟ್ರೋಲ್, ಡೀಸೆಲ್ ಬಳಕೆಯೂ ಕಡಿಮೆಯಾಗಿದೆಯಂತೆ!

|
Google Oneindia Kannada News

ನವದೆಹಲಿ, ಮಾರ್ಚ್ 03: ಕಳೆದ ತಿಂಗಳಿನಿಂದಲೂ ದೇಶಾದ್ಯಂತ ತೈಲ ಬೆಲೆ ಏರಿಕೆಯಾಗುತ್ತಲೇ ಸಾಗಿದೆ. ದಾಖಲೆ ಮಟ್ಟವನ್ನೂ ತಲುಪಿದ್ದು, ಜನ ಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಿದೆ. ಫೆಬ್ರವರಿ ತಿಂಗಳೊಂದರಲ್ಲಿಯೇ ಹದಿನಾಲ್ಕು ಬಾರಿ ತೈಲ ಬೆಲೆ ಏರಿಕೆ ಕಂಡಿದೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ತೈಲ ಬೆಲೆ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಕುರಿತು ಸರ್ಕಾರ ಚಿಂತನೆ ನಡೆಸುತ್ತಿರುವುದಾಗಿ ತಿಳಿದುಬಂದಿದೆ.

ಫೆ.27ರಂದು ಪೆಟ್ರೋಲ್‌ಗೆ 24 ಪೈಸೆ ಹಾಗೂ ಡೀಸೆಲ್‌ಗೆ 15 ಪೈಸೆ ಏರಿಕೆಯಾಗಿದ್ದು, ದೆಹಲಿಯಲ್ಲಿ ಲೀಟರ್‌ ಪೆಟ್ರೋಲ್‌ಗೆ 91.17 ರೂ ಹಾಗೂ ಡೀಸೆಲ್‌ಗೆ 81.47 ರೂ ಬೆಲೆ ಇದೆ. ನಾಲ್ಕು ದಿನಗಳವರೆಗೂ ಈ ಬೆಲೆ ಸ್ಥಿರವಾಗಿದ್ದು, ಮಾರ್ಚ್ 3ರಂದು ತೈಲ ಬೆಲೆ ಯಾವುದೇ ಏರಿಕೆ ಕಂಡಿಲ್ಲ. ಜೊತೆಗೆ ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯ ಪ್ರಮಾಣವೂ ತಗ್ಗಿರುವುದಾಗಿ ತಿಳಿದುಬಂದಿದೆ. ಮುಂದೆ ಓದಿ...

 ತೆರಿಗೆ ಕಡಿತ; ಮಾರ್ಚ್ ಮಧ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ? ತೆರಿಗೆ ಕಡಿತ; ಮಾರ್ಚ್ ಮಧ್ಯದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆಯಾಗುತ್ತಾ?

 ಪ್ರಮುಖ ನಗರಗಳಲ್ಲಿ ತೈಲ ಬೆಲೆ

ಪ್ರಮುಖ ನಗರಗಳಲ್ಲಿ ತೈಲ ಬೆಲೆ

ನಗರ ಪೆಟ್ರೋಲ್ ಡೀಸೆಲ್
ದೆಹಲಿ- 91.17 ರೂ 81.47 ರೂ
ಮುಂಬೈ- 97.57 ರೂ 88.60 ರೂ
ಚೆನ್ನೈ- 93.11 ರೂ 86.45 ರೂ
ಬೆಂಗಳೂರು- 94.22ರೂ 86.35 ರೂ

ಪೆಟ್ರೋಲ್, ಡೀಸೆಲ್, ಗ್ಯಾಸ್: ಮಾರ್ಚ್.1ರಿಂದ ಎಲ್ಲವೂ ಬದಲು!ಪೆಟ್ರೋಲ್, ಡೀಸೆಲ್, ಗ್ಯಾಸ್: ಮಾರ್ಚ್.1ರಿಂದ ಎಲ್ಲವೂ ಬದಲು!

 ತಗ್ಗಿದ ಪೆಟ್ರೋಲ್, ಡೀಸೆಲ್ ಬಳಕೆ

ತಗ್ಗಿದ ಪೆಟ್ರೋಲ್, ಡೀಸೆಲ್ ಬಳಕೆ

ಹಿಂದೆಂದೂ ಕಂಡಿರದಂಥ ದಾಖಲೆ ಮಟ್ಟವನ್ನು ತೈಲ ಬೆಲೆ ಈ ಬಾರಿ ತಲುಪಿದೆ. 2021ರ ಆರಂಭದ ಈ ಎರಡು ತಿಂಗಳುಗಳಲ್ಲಿಯೇ 26 ಬಾರಿ ತೈಲ ಬೆಲೆಯನ್ನು ಏರಿಸಲಾಗಿದೆ. ಈ ಬೆಳವಣಿಗೆ ಪೆಟ್ರೋಲ್, ಡೀಸೆಲ್ ಬಳಕೆ ಮೇಲೂ ಪರಿಣಾಮ ಬೀರಿರುವುದಾಗಿ ತಿಳಿದುಬಂದಿದೆ. ಬೆಲೆ ಏರಿಕೆಯಿಂದಾಗಿ ಜನರು ಪೆಟ್ರೋಲ್ ಹಾಗೂ ಡೀಸೆಲ್ ಬಳಕೆಯನ್ನು ತಗ್ಗಿಸಿದ್ದು, ಕಳೆದ ವರ್ಷದ ಫೆಬ್ರವರಿಗೆ ಹೋಲಿಸಿದರೆ, ಈ ವರ್ಷದ ಫೆಬ್ರವರಿಯಲ್ಲಿ ಪೆಟ್ರೋಲ್ ಬಳಕೆಯಲ್ಲಿ 2% ಪ್ರಮಾಣ ತಗ್ಗಿದೆ ಹಾಗೂ ಡೀಸೆಲ್ ಬಳಕೆಯಲ್ಲಿ 8.6% ತಗ್ಗಿದೆ ಎಂದು "ಇಂಡಿಯನ್ ಎಕ್ಸ್‌ಪ್ರೆಸ್" ವರದಿ ಮಾಡಿದೆ.

 ತೆರಿಗೆ ಕಡಿತದ ಕುರಿತು ಚಿಂತನೆ

ತೆರಿಗೆ ಕಡಿತದ ಕುರಿತು ಚಿಂತನೆ

ಕೊರೊನಾ ಕಾರಣವಾಗಿ ಭಾರತದ ಆರ್ಥಿಕತೆಗೆ ದೊಡ್ಡ ಹೊಡೆತ ಬಿದ್ದಿದ್ದು, ತೈಲ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಈ ಕಾರಣದಿಂದ ಕಳೆದ 12 ತಿಂಗಳ ಅಂತರದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಎರಡು ಬಾರಿ ಏರಿಸಿದೆ. ತೈಲ ಬೆಲೆಗಳು ದಾಖಲೆ ಮಟ್ಟ ಕಂಡಿದ್ದು, ಇದಕ್ಕೆ ವ್ಯಾಪಕ ವಿರೋಧ ವ್ಯಕ್ತಗೊಂಡಿದೆ. ಈ ವಿರೋಧಗಳ ನಡುವೆ, ಜನಸಾಮಾನ್ಯರ ಮೇಲಿನ ಹೊರೆ ಇಳಿಸಲು ತೈಲ ಬೆಲೆ ಮೇಲಿನ ತೆರಿಗೆ ಕಡಿತ ಮಾಡುವ ಕುರಿತು ಸರ್ಕಾರ ಆಲೋಚಿಸುತ್ತಿರುವುದಾಗಿ ತಿಳಿದುಬಂದಿದೆ.

 ಮಾರ್ಚ್ ಮಧ್ಯದಲ್ಲಿ ತೆರಿಗೆ ಕಡಿತದ ಮಾಹಿತಿ

ಮಾರ್ಚ್ ಮಧ್ಯದಲ್ಲಿ ತೆರಿಗೆ ಕಡಿತದ ಮಾಹಿತಿ

ತೆರಿಗೆ ಕಡಿತದ ಕುರಿತು ಚರ್ಚೆ ನಡೆಸಲು ಹಲವು ರಾಜ್ಯಗಳನ್ನು, ತೈಲ ಕಂಪನಿಗಳನ್ನು ಹಾಗೂ ತೈಲ ಸಚಿವಾಲಯವನ್ನು ಕೇಂದ್ರ ಹಣಕಾಸು ಸಚಿವಾಲಯ ಸಂಪರ್ಕಿಸುತ್ತಿದೆ. ತೆರಿಗೆ ಕಡಿತಕ್ಕೆ ಪರಿಣಾಮಕಾರಿ ಮಾರ್ಗದ ಹುಡುಕಾಟದಲ್ಲಿರುವುದಾಗಿ ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಮಾರ್ಚ್ ಮಧ್ಯದಲ್ಲಿ ತೆರಿಗೆ ಕಡಿತದ ಕುರಿತು ಸ್ಪಷ್ಟ ಮಾಹಿತಿ ಸಿಗಲಿದೆ.

English summary
Petrol, diesel prices steady for fourth consecutive day. But petrol consumption fell by two percent and diesel by 8.6 percent in February as compared to a year ago in the same month,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X