ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಮಿಳುನಾಡು: ಪೆರಿಯಾರ್ ವಿಗ್ರಹ ಧ್ವಂಸ, ಇಬ್ಬರ ಬಂಧನ

|
Google Oneindia Kannada News

ವೆಲ್ಲೂರ್, ಮಾರ್ಚ್ 07: ಸಾಮಾಜಿಕ ಹೋರಾಟಗಾರ, ಪೆರಿಯಾರ್ ಎಂದೇ ಪ್ರಸಿದ್ಧರಾದ ಇವಿಆರ್ ರಾಮಸಾಮಿ ಅವರ ವಿಗ್ರಹವನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಧ್ವಂಸಗೊಳಿಸಲಾಗಿದ್ದು, ಭಾರೀ ವಿವಾದ ಸೃಷ್ಟಿಸಿದೆ.

ಕುಡಿದ ಮತ್ತಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಗಾಜುಗಳನ್ನು ಒಡೆದು, ನಂತರ ಮೂರ್ತಿಯ ಮೂಗನ್ನು ಧ್ವಂಸಗೊಳಿಸಿದ್ದಾರೆ. ಇಬ್ಬರನ್ನೂ ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಲೆನಿನ್ ಪ್ರತಿಮೆ ಧ್ವಂಸವಾದ ಬೆನ್ನಲ್ಲೇ ತ್ರಿಪುರಾದಲ್ಲಿ ಹಿಂಸಾಚಾರಲೆನಿನ್ ಪ್ರತಿಮೆ ಧ್ವಂಸವಾದ ಬೆನ್ನಲ್ಲೇ ತ್ರಿಪುರಾದಲ್ಲಿ ಹಿಂಸಾಚಾರ

ತ್ರಿಪುರದಲ್ಲಿ ನಿನ್ನೆ ರಷ್ಯಾದ ಕ್ರಾಂತಿಕಾರಿ ಲೆನಿನ್ ಅವರ ವಿಗ್ರಹವನ್ನು ಬಿಜೆಪಿ ಕಾರ್ಯಕರ್ತರು ಧ್ವಂಸಗೊಳಿಸಿದ್ದರು. ಇದಾದ ನಂತರ ಫೆಸ್ ಬುಕ್ ನಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಎಚ್ ರಾಜಾ, 'ಲೆನಿನ್ ಯಾರು? ಅವನಿಗೂ ಭಾರತಕ್ಕೂ ಏನು ಸಂಬಂಧ? ಭಾರತಕ್ಕೂ ಕಮ್ಯುನಿಸ್ಟ್ ಗೂ ಏನು ಸಂಬಂಧ? ಇಂದು ತ್ರಿಪುರದಲ್ಲಿ ಲೆಲಿನ್ ವಿಗ್ರಹ ನಾಶ ಮಾಡಲಾಗಿದೆ. ನಾಳೆ ತಮಿಳು ನಾಡಿನ ಇವಿ ಆರ್ ರಾಮಸಾಮಿ' ಎಂದು ಬರೆದುಕೊಂಡಿದ್ದರು!

ತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿತಮಿಳುನಾಡು ಬಿಜೆಪಿ ಕಚೇರಿ ಮೇಲೆ ಪೆಟ್ರೋಲ್ ಬಾಂಬ್ ದಾಳಿ

Periyar statue vandalised in TN's Vellore, 2 arrested

ಈ ಸ್ಟೇಟಸ್ ಹಾಕಿದ ಒಂದೇ ಗಂಟೆಯಲ್ಲಿ ಈ ಘಟನೆ ನಡೆದಿದ್ದು, ವಿವಾದ ಸೃಷ್ಟಿಸಿದೆ. ಎಚ್.ರಾಜಾ ಅವರನ್ನು ಈ ಕೂಡಲೇ ಬಂಧಿಸಿ ಎಂದು ಡಿಎಂ ಕೆ ಮುಖ್ಯಸ್ಥ ಸ್ಟಾಲಿನ್ ಒತ್ತಾಯಿಸಿದ್ದಾರೆ. ಆದರೆ ಈ ಪೋಸ್ಟ್ ಅನ್ನು ನಾನು ಹಾಕಿಲ್ಲ, ಬೇರೆ ಯಾರೋ ನನ್ನ ಖಾತೆಯಿಂದ ಪೋಸ್ಟ್ ಮಾಡಿದ್ದಾರೆ ಎಂದು ಎಚ್ ರಾಜಾ ಸಮಜಾಯಿಷಿ ನೀಡಿದ್ದಾರೆ.

English summary
A statue of social activist and politician EV Ramasamy, popularly known as Periyar, was on Tuesday evening vandalised in Vellore, Tamil Nadu. According to reports, two men, who were allegedly drunk, damaged the glasses and the nose of the statue. Both men have been arrested.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X