ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೆಪ್ಪರ್ ಸ್ಪ್ರೇ 'ರಾಜ' ಕ್ಷಮೆ ಟ್ರೆಂಡಿಂಗ್ ಇನ್ನೂ ಜಾರಿ

By Mahesh
|
Google Oneindia Kannada News

ಬೆಂಗಳೂರು, ಫೆ.14: ಲೋಕಸಭೆಯಲ್ಲಿ ತೆಲಂಗಾಣ ಮಸೂದೆ ಮಂಡನೆ ವೇಳೆ ಪೆಪ್ಪರ್ ಸ್ಪ್ರೇ (ಕರಿಮೆಣಸಿನ ಪುಡಿ) ಎರಚಿ ಜಗದ್ವಿಖ್ಯಾತಿ ಗಳಿಸಿದ್ದ ಸೀಮಾಂಧ್ರ ಸಂಸದ ಎಲ್ ರಾಜಗೋಪಾಲ್ ಅವರು ಕೊನೆಗೂ ಶುಕ್ರವಾರ ಕ್ಷಮೆಯಾಚಿಸಿದ್ದಾರೆ. ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸದನದಲ್ಲಿ ಗದ್ದಲವೆಬ್ಬಿಸಿ, ಸದನದ ಕಲಾಪಕ್ಕೆ ತಡೆ ಉಂಟುಮಾಡಿದ ಆಂಧ್ರಪ್ರದೇಶದ 17 ಮಂದಿ ಸಂಸದರನ್ನು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅವರು ಗುರುವಾರವೇ ಅಮಾನತುಗೊಳಿಸಿದ್ದರು.

ಸಂಸತ್ ನಲ್ಲಿ ಈ ರೀತಿ ನಡೆಯಬಾರದಿತ್ತು. ಆದರೆ ನಾನು ಆತ್ಮರಕ್ಷಣೆಗಾಗಿ ಪೆಪ್ಪರ್ ಸ್ಪ್ರೇ ಬಳಕೆ ಮಾಡಬೇಕಾಯಿತು. ಆದರೆ ನಮ್ಮ ವರ್ತನೆಗೆ ಕ್ಷಮೆಯಾಚಿಸುತ್ತೇವೆ. ಗುರುವಾರ ನಡೆದ ಘಟನೆಯಿಂದ ನಾವೆಲ್ಲರು ತಲೆತಗ್ಗಿಸುವಂತಾಗಿದೆ ಎಂದು ಅವರು ಹೇಳಿದ್ದಾರೆ. ರಾಜ ಕ್ಷಮೆಯಾಚಿಸಿದರೂ ಸಾಮಾಜಿಕ ಜಾಲ ತಾಣಗಳಲ್ಲಿ ಈ ಬಗ್ಗೆ ಚರ್ಚೆ, ಜೋಕು ನಿಂತಿಲ್ಲ ಗುರುವಾರದ ರೀತಿಯಲ್ಲೇ ಶುಕ್ರವಾರವೂ #PepperSpray ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ನಲ್ಲಿತ್ತು.[ರಾಯಲಸೀಮೆ ಜನತೆ ತತ್ತರ]

ತೆಲಂಗಾಣ ಮಸೂದೆ ಮಂಡನೆಗೆ ಮುಂದಾದಾಗ ವಿಜಯವಾಡದ ಕಾಂಗ್ರೆಸ್ ಸಂಸದ ರಾಜಗೋಪಾಲ್ ಅವರು ಕರಿಮೆಣಸು ಪುಡಿ ಎರಚುವ ಮೂಲಕ ಲೋಕಸಭಾ ಕಲಾಪಕ್ಕೆ ಧಕ್ಕೆಯನ್ನುಂಟು ಮಾಡಿದ್ದರು.ಪೆಪ್ಪರ್ ಸ್ಪ್ರೇ ಬಳಸಿದ ಕಾರಣ ಸಂಸದರು ಕೆಮ್ಮುತ್ತಾ, ತಮ್ಮ ಕಣ್ಣುಗಳನ್ನು ಕರವಸ್ತ್ರದಿಂದ ಮುಚ್ಚುವ ದೃಶ್ಯ ಲೋಕಸಭೆಯಲ್ಲಿ ಕಂಡು ಬಂದಿತ್ತು. ಈ ಸಂದರ್ಭದಲ್ಲಿ ನೂಕುನುಗ್ಗಲು ಸಂಭವಿಸಿತ್ತು. ಇಷ್ಟೆಲ್ಲಾ ಸಮಸ್ಯೆಗಳಿಗೆ ಸೀಮಾಂಧ್ರದ ಸಂಸದರೇ ಕಾರಣ ಎಂಬ ಹಿನ್ನಲೆಯಲ್ಲಿ ಸಂಸದ ಎಲ್ ರಾಜಗೋಪಾಲ್ ಸೇರಿದಂತೆ 17 ಸಂಸದರನ್ನು ಲೋಕಸಭಾದಿಂದ ಅಮಾನತು ಮಾಡಲಾಗಿತ್ತು.

ಸೀಮಾಂಧ್ರ ಭಾಗ ವಿರೋಧ

ಸೀಮಾಂಧ್ರ ಭಾಗ ವಿರೋಧ

ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆ ಮಸೂದೆ ಮಂಡನೆಗೆ ಸೀಮಾಂಧ್ರ ಭಾಗದ ಸಂಸದರು ವಿರೋಧ ವ್ಯಕ್ತಪಡಿಸಿ ಪೆಪ್ಪರ್ ಸ್ಪ್ರೇ ಮಾಡಿದ ಘಟನೆ ನಂತರ ಆಂಧ್ರಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ತೆಲಂಗಾಣ ರಾಜ್ಯ ರಚನೆ ಖಂಡಿಸಿ ಕರೆಯಲಾಗಿರುವ ರಾಜ್ಯ ಬಂದ್ ಗೆ ಕೋಸ್ತಾ ಹಾಗೂ ರಾಯಲಸೀಮೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಜನ ಜೀವನ ಅಸ್ತವ್ಯಸ್ತಗೊಂಡಿದೆ.

ದೇವರ ದಯೆ ಆತ ಪಿಸ್ತೂಲ್ ತಂದಿರಲಿಲ್ಲ

ಕ್ಷಮೆ ಕೋರಿದರೂ ರಾಜ ಸಮರ್ಥನೆ ಮಾಡಿಕೊಂಡಿದ್ದಾನೆ .ದೇವರ ದಯೆ ಆತ ಪಿಸ್ತೂಲ್ ತಂದಿರಲಿಲ್ಲ

ದೆಹಲಿ ಅಸೆಂಬ್ಲಿಗೂ ಸ್ವಲ್ಪ ಸ್ಪ್ರೇ ಮಾಡಿ ಪ್ಲೀಸ್

ದೆಹಲಿ ಅಸೆಂಬ್ಲಿಗೂ ಸ್ವಲ್ಪ ಸ್ಪ್ರೇ ಮಾಡಿ ಪ್ಲೀಸ್ ಕೇಜ್ರಿವಾಲ್ ಹಂಗಾಮ ನೋಡೋಕೆ ಆಗ್ತಾ ಇಲ್ಲ

ಎಮರ್ಜೆನ್ಸಿ ಬಂದರೆ ಹೇಗಿರುತ್ತೆ ಗೊತ್ತಾಯ್ತು

ಸದನದಿಂದ 500 ಜನ ಸದಸ್ಯರನ್ನು ತಕ್ಷಣವೇ ಖಾಲಿ ಮಾಡಿಸಿದ ಪೆಪ್ಪರ್ ಸ್ಪ್ರೇ

ಪೆಪ್ಪರ್ ಸ್ಪ್ರೇಗೆ ಅಮಾನತು? ಛೇ ಪಾಪ

Axe ಸ್ಪ್ರೇ ಹಾಕಿಕೊಂಡರೆ ಹುಡುಗಿಯರು ಬರ್ತಾರೆ ಆದ್ರೆ, ಪೆಪ್ಪರ್ ಸ್ಪ್ರೇಗೆ ಅಮಾನತು? ಛೇ ಪಾಪ

English summary
After MP L Rajagopal used pepper spray against some of his fellow MPs in the Lok Sabha on Thursday, outraged public have stormed Twitter with the hashtag #PepperSpray. The hashtag topped in all India trends on Thursday and continued on Friday even after his apology
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X