ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಡೋಸ್ ಲಸಿಕೆ ಪಡೆವರಲ್ಲಿ ಭಾರತ ವಿಶ್ವದಲ್ಲೇ ನಂಬರ್ 1

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 15; ಭಾರತದಲ್ಲಿ ಕೋವಿಡ್ ಲಸಿಕಾ ಅಭಿಯಾನ ವೇಗವಾಗಿ ನಡೆಯುತ್ತಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು ಮತ್ತು ಎರಡು ಡೋಸ್ ಪೂರ್ಣಗೊಳಿಸಿದವರಲ್ಲಿ ಭಾರತ ವಿಶ್ವದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಆರೋಗ್ಯ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಕೋವಿಡ್ ಲಸಿಕೆ ಇ-ಬುಕ್ ಅಪ್‌ಲೋಡ್ ಮಾಡಲಾಗಿದೆ. ಶೇ 62.54 ರಷ್ಟು ಲಸಿಕೆಯನ್ನು ಗ್ರಾಮೀಣ ಪ್ರದೇಶದಲ್ಲಿ ಮತ್ತು ಶೇ 36.30ಯಷ್ಟು ಲಸಿಕೆಯನ್ನು ನಗರ ಪ್ರದೇಶದಲ್ಲಿ ನೀಡಲಾಗಿದೆ ಎಂದು ಹೇಳಿದೆ.

 ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ 2-3 ತಿಂಗಳಲ್ಲಿ ಪ್ರತಿಕಾಯ ತಗ್ಗಲಿದೆ; ಅಧ್ಯಯನ ಕೋವಿಶೀಲ್ಡ್-ಕೋವ್ಯಾಕ್ಸಿನ್ ಲಸಿಕೆ ಪಡೆದವರಲ್ಲಿ 2-3 ತಿಂಗಳಲ್ಲಿ ಪ್ರತಿಕಾಯ ತಗ್ಗಲಿದೆ; ಅಧ್ಯಯನ

ಸೆಪ್ಟೆಂಬರ್ ತನಕ ಪುರುಷರಿಗೆ ಶೇ 52.5, ಮಹಿಳೆಯರಿಗೆ ಶೇ 47.5ರಷ್ಟು ಲಸಿಕೆ ನೀಡಲಾಗಿದೆ. ದೇಶದ ವಯಸ್ಕರಲ್ಲಿ ಶೇ 60.7ರಷ್ಟು ಜನರು ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದಾರೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕೊರೊನಾ ಲಸಿಕೆ ಪಡೆಯಲು ನೌಕರರಿಗೆ ವರ್ಲ್‌ಪೂಲ್ ಆರ್ಥಿಕ ನೆರವುಕೊರೊನಾ ಲಸಿಕೆ ಪಡೆಯಲು ನೌಕರರಿಗೆ ವರ್ಲ್‌ಪೂಲ್ ಆರ್ಥಿಕ ನೆರವು

People Who Got At Least One Dose Of Covid Vaccine India Highest In World

ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರು, ಎರಡು ಡೋಸ್ ಪಡೆದವರು ಎರಡರಲ್ಲಿಯೂ ವಿಶ್ವದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಒಟ್ಟು 181 ಮಿಲಿಯನ್ ಜನರು ಎರಡು ಡೋಸ್ ಲಸಿಕೆ ಪಡೆದಿದ್ದಾರೆ. ಅಮೆರಿಕದಲ್ಲಿ 178 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರೊನಾ ಲಸಿಕೆ 2 ಡೋಸ್‌ಗಳು ಸಾಕಷ್ಟು ಪರಿಣಾಮಕಾರಿ, ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್ಕೊರೊನಾ ಲಸಿಕೆ 2 ಡೋಸ್‌ಗಳು ಸಾಕಷ್ಟು ಪರಿಣಾಮಕಾರಿ, ಮೂರನೇ ಡೋಸ್ ಅಗತ್ಯವಿಲ್ಲ: ಲ್ಯಾನ್ಸೆಟ್

ದೇಶವ್ಯಾಪಿ ಲಸಿಕಾ ಅಭಿಯಾನದ ಅಂಗವಾಗಿ ಈಗ ಕೇಂದ್ರ ಸರ್ಕಾರವೇ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಉಚಿತವಾಗಿ ಕೋವಿಡ್ ಲಸಿಕೆ ಒದಗಿಸುತ್ತಿದೆ. ಕೇಂದ್ರ ಸರ್ಕಾರ ದೇಶದ ಲಸಿಕೆ ಉತ್ಪಾದಕರಿಂದ ಶೇ 75ರಷ್ಟು ಲಸಿಕೆಯನ್ನು ಖರೀದಿಸುತ್ತಿದೆ ಮತ್ತು ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಕೆ ಮಾಡುತ್ತದೆ.

ದೇಶದಲ್ಲಿ ಲಸಿಕೆ ಅಭಿಯಾನ ಆರಂಭವಾದಾಗ ಮೂಂಚೂಣಿ ಕಾರ್ಯಕರ್ತರಿಗೆ ಮೊದಲು ಲಸಿಕೆ ನೀಡಲಾಯಿತು. ಈಗಾಗಲೇ ದೇಶದಲ್ಲಿ ಶೇ 100ರಷ್ಟು ಮುಂಚೂಣಿ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. 81.1ರಷ್ಟು ಜನರು 2ನೇ ಡೋಸ್‌ಗೆ ಅರ್ಹರಾಗಿದ್ದಾರೆ.

ಶೇ 98.8ರಷ್ಟು ಆರೋಗ್ಯ ಕಾರ್ಯಕರ್ತರು ಮೊದಲ ಡೋಸ್ ಲಸಿಕೆಯನ್ನು ಪಡೆದಿದ್ದಾರೆ. ಶೇ 84.7ರಷ್ಟು ಜನರು ಎರಡನೇ ಡೋಸ್ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಇ-ಬುಕ್‌ನಲ್ಲಿ ತಿಳಿಸಿದೆ.

ಭಾರತದಲ್ಲಿ ಜನವರಿ 16ರಂದು ಕೋವಿಡ್ ಲಸಿಕೆ ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಮೊದಲ ದಿನವೇ ಅತಿ ಹೆಚ್ಚು ಜನರಿಗೆ ಲಸಿಕೆ ನೀಡುವ ಮೂಲಕ ವಿಶ್ವದ ಗಮನ ಸೆಳೆಯಿತು.

ದೇಶಾದ್ಯಂತ 244,310 ಕೋವಿಡ್ ಲಸಿಕಾ ಕೇಂದ್ರಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ. ಜನರಿಗೆ ಸುಲಭವಾಗಿ, ಸಮೀಪದಲ್ಲಿಯೇ ಲಸಿಕೆ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ. ಉಚಿತವಾಗಿ ಲಸಿಕೆ ನೀಡಲಾಗುತ್ತಿದ್ದು, ಖಾಸಗಿ ಆಸ್ಪತ್ರೆಗಳಲ್ಲಿ ಹಣ ಪಾವತಿಸಿ ಲಸಿಕೆ ಪಡೆಯುವ ವ್ಯವಸ್ಥೆ ಸಹ ಮಾಡಲಾಗಿದೆ.

ಒಂದು ವೇಳೆ ವ್ಯಕ್ತಿಗೆ ಕೋವಿಡ್ ಸೋಂಕು ತಗುಲಿದ್ದರೆ ಆತ ಚೇತರಿಸಿಕೊಂಡ ದಿನದಿಂದ ಮೂರು ತಿಂಗಳ ಬಳಿಕ ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಇತ್ತೀಚಿನ ಮಾರ್ಗಸೂಚಿ ಸ್ಪಷ್ಟಪಡಿಸಿದೆ. ಹೀಗೆ ಮಾಡುವುದರಿಂದ ದೇಹವು ಬಲವಾದ ರೋಗನಿರೋಧಕಶಕ್ತಿಯನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ ಮತ್ತು ಲಸಿಕೆಯ ಪರಿಣಾಮವು ಉತ್ತಮವಾಗಿರುತ್ತದೆ ಎಂದು ತಿಳಿಸಲಾಗಿದೆ.

ಭಾರತದಲ್ಲಿ ನೀಡುತ್ತಿರುವ ಲಸಿಕೆಗಳು ಇದುವರೆಗೂ ದೇಶದಲ್ಲಿ ಕಂಡುಬರುವ ರೂಪಾಂತರಿ ವೈರಾಣುವಿನ ವಿರುದ್ಧ ಪರಿಣಾಮಕಾರಿಯಾಗಿವೆ ಎಂದು ತಜ್ಞರಾದ ಡಾ. ಪಾಲ್ ಮತ್ತು ಡಾ. ಗುಲೇರಿಯಾ ಹೇಳಿದ್ದಾರೆ. ಲಸಿಕೆಗಳನ್ನು ತೆಗೆದುಕೊಂಡ ನಂತರ ಉಂಟಾಗುವ ಅಡ್ಡ ಪರಿಣಾಮಗಳ ಕುರಿತು ಗ್ರಾಮೀಣ ಪ್ರದೇಶಗಳಲ್ಲಿರುವ ಕೆಲವು ಜನರ ನಂಬಿಕೆ ತಪ್ಪು ಎಂದು ವೈದ್ಯರು ಹೇಳಿದ್ದಾರೆ.

ಕೇಂದ್ರ ಸರಕಾರ ಕೋವಿಡ್ ಲಸಿಕೆ ನೀಡುವ ಅಭಿಯಾನವನ್ನು ಚುರುಕುಗೊಳಿಸಲು 2021ರ ಜೂನ್ 21 ರಿಂದ ಹೊಸ ಘೋಷಣೆ ಮಾಡಿದೆ. ಹೆಚ್ಚಿನ ಲಸಿಕೆಗಳ ಲಭ್ಯತೆ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಮುಂಚಿತವಾಗಿಯೇ ತಿಳಿಸಲಾಗುತ್ತದೆ. ಇದರಿಂದಾಗಿ ಲಸಿಕೆ ಲಭ್ಯತೆ ಆಧಾರದ ಮೇಲೆ ಲಸಿಕೆ ಅಭಿಯಾನವನ್ನು ಚುರುಕುಗೊಳಿಸಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಾಧ್ಯವಾಗಲಿದೆ.

English summary
India highest in the world in the number of people who have received at least one dose of Covid-19 vaccine and the people who have completed the vaccination schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X