ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿ ಸರ್ಕಾರಕ್ಕೆ ನಾಲ್ಕು ವರ್ಷ: ಹರ್ಷವೋ, ನಿರಾಶೆಯೋ?!

|
Google Oneindia Kannada News

Recommended Video

ಮೋದಿ ಸರ್ಕಾರಕ್ಕೆ 4 ವರ್ಷ | ಟ್ವಿಟ್ಟರ್ ನಲ್ಲಿ ಜನತಾ ನಾರ್ಧನ ಅಭಿಪ್ರಾಯ | Oneindia Kannada

ನವದೆಹಲಿ, ಮೇ 26: ಎನ್ ಡಿ ಎ ನೇತೃತ್ವದ ಮೈತ್ರಿ ಸರ್ಕಾರ ನಾಲ್ಕು ವರ್ಷಗಳನ್ನು ಪೂರೈಸಿದ್ದು, ಮುಂದಿನ ವರ್ಷ ನಡೆಯುವ ಲೋಕಸಭಾ ಚುನಾವಣೆಯ ಹೊತ್ತಲ್ಲಿ ಇದು ಸಿಂಹಾವಲೋಕನದ ಸಮಯ.

ಅಪನಗದೀಕರಣ, ಜಿಎಸ್ಟಿಯಂಥ ಕ್ರಾಂತಿಕಾರೀ ಅಥವಾ ವಿವಾದಾಸ್ಪದ ನಿರ್ಧಾರಗಳ ಹೊರತಾಗಿಯೂ ಪ್ರಧಾನಿ ಮೋದಿ ಸರ್ಕಾರ ಜನರ ಮನಸ್ಸಲ್ಲಿ ಉತ್ತಮ ಭಾವನೆಯನ್ನು ಉಳಿಸಿಕೊಂಡಿದೆಯೇ?

ಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿಮೋದಿ ಸರ್ಕಾರದ 4 ವರ್ಷ: ಸಾಧಿಸಿದ್ದು, ಸೋತಿದ್ದು ಮತ್ತು 2019ರ ಹಾದಿ

ನಿನ್ನೆಯಷ್ಟೇ ಹೊರಬಿದ್ದ ಟೈಮ್ಸ್ ನೌ ಸಮೀಕ್ಷೆ ಈಗ ಲೋಕಸಭಾ ಚುನಾವಣೆ ನಡೆದರೂ ಮೋದಿ ಸರ್ಕಾರ ಬಹುಮತ ಪಡೆದು ಗೆಲ್ಲುತ್ತದೆ ಎಂದಿತ್ತು. ಅದರರ್ಥ ಜನರಿಗೆ ಮೋದಿ ಸರ್ಕಾರದ ಕ್ರಾಂತಿಕಾರಿ ನಿರ್ಧಾರಗಳ ದೂರದೃಷ್ಟಿಯ ಅರಿವಿದೆ ಎಂದಾಯ್ತು. ಟ್ವಿಟ್ಟರ್ ನಲ್ಲೂ ಹಲವರು ಮೋದಿ ಸರ್ಕಾರದ ಸಾಧನೆಗಳನ್ನು ಹಾಡಿ ಹೊಗಳಿದ್ದಾರೆ. ಕೆಲವರು ಮೋದಿ ಸರ್ಕಾರ ಜನಹಿತವನ್ನು ಮರೆತಿದೆ ಎಂದು ಋಣಾತ್ಮ ಅಭಿಪ್ರಾಯವನ್ನೂ ನೀಡಿದ್ದಾರೆ.

ಆನ್ ಲೈನ್ ಸಂವಹನಕ್ಕೆ ಉತ್ತೇಜನ

ಆನ್ ಲೈನ್ ಸಂವಹನ ಅಥವಾ ಈ ಮೇಲ್ ಗೆ ಕಳೆದ ಐದು ವರ್ಷಗಳಲ್ಲಿ ನೀಡಲಾದ ಮಹತ್ವದಿಂದಾಗಿ ಐಟಿ ಕ್ಷೇತ್ರಕ್ಕೆ 977.54 ಕೋಟಿ ರೂಪಾಯಿಯಷ್ಟು ಪೋಸ್ಟೇಜ್ ವೆಚ್ಚ ಉಳಿತಾಯಬವಾಗಿದೆ. ಇದು ಮೋದಿ ಸರ್ಕಾರದ ಸಾಪ್ ನಿಯತಿ ಸಹಿ ವಿಕಾಸ್(ಸ್ಪಷ್ಟ ಗುರಿ, ಸರಿಯಾದ ವಿಕಾಸ) ಎಂದಿದ್ದಾರೆ ಅಮರ್ಜೀತ್ ಸಿಂಗ್.

Array

ದತ್ತು ಗ್ರಾಮಗಳು ಏನಾಗಿದ್ದಾವೆಂದು ನೋಡಿದ್ದೀರಾ?

ಸಂಸದ್ ಗ್ರಾಮ ಯೋಜನೆಯನ್ನು ನೀವು ಆರಂಭಿಸಿದಿರಿ. ಒಬ್ಬೊಬ್ಬ ಸಂಸದನೂ ಒಂದು ಗ್ರಾಮವನ್ನು ದತ್ತು ಪಡೆದು ಅದನ್ನು ಅಭಿವೃದ್ಧಿ ಪಡಿಸುವ ಯೋಜನೆ ಅದು. ಆದರೆ ಒಮ್ಮೆಯಾದರೂ ಆ ಗ್ರಾಮಗಳಿಗೆ ತೆರಳಿ ನೀವು ವಾಸ್ತವ ಏನಾಗಿದೆ ಎಂದು ಪರೀಕ್ಷಿಸಿದ್ದೀರೇ? ಎಂದು ಪ್ರಶ್ನಿಸಿದ್ದಾರೆ ಶಿವ ಶಂಕರ್.

ಮೋದಿ ಸಾಧನೆ ಪ್ರಚಾರಕ್ಕೆ ಬಿಜೆಪಿಯಿಂದ ತರಹೇವಾರಿ ಯೋಜನೆ!ಮೋದಿ ಸಾಧನೆ ಪ್ರಚಾರಕ್ಕೆ ಬಿಜೆಪಿಯಿಂದ ತರಹೇವಾರಿ ಯೋಜನೆ!

ಸಾಕಷ್ಟು ಹಗರಣಗಳು

ಈ ನಾಲ್ಕು ವರ್ಷಗಳ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾಡಿದ್ದು ಬರೀ ಹಗರಣಗಳನ್ನ. ನಿರುದ್ಯೋಗ, ಇಂಧನ ಬೆಲೆಯಲ್ಲಿ ಹೆಚ್ಚಳ, ಸಾರ್ವಜನಿಕ ಹಣ ಬಳಸಿಕೊಂಡು ಸದಾ ವಿದೇಶಿ ಪ್ರವಾಸ ಮಾಡಿದ್ದು ಇದೇ ಸಾಧನೆ ಎಂದು ತೆಗಳಿದ್ದಾರೆ ಸಾಯಿ ಸ್ವರೂಪ್.

ಭ್ರಷ್ಟಾಚಾರ ಮುಕ್ತ ಸರ್ಕಾರ

ಭ್ರಷ್ಟಾಚಾರ ಮುಕ್ತ ಸರ್ಕಾರ ಮೋದಿ ಸರ್ಕಾರದ ಅತ್ಯಂತ ದೊಡ್ಡ ಸಾಧನೆ. ದಿಟ್ಟ ಮತ್ತು ರಚನಾತ್ಮಕ ಸುಧಾರಣೆಯನ್ನು ತರುವುದಕ್ಕೆ ಸಾಧ್ಯವಿರುವುದು ಮೋದಿಯವರಿಗೆ ಮಾತ್ರ. ಮೋದಿಯವರನ್ನು ಮಣಿಸಲು ವಿರೋಧ ಪಕ್ಷಗಳೆಲ್ಲವೂ ಒಂದಾಗುತ್ತಿವೆ. ಆದರೆ ಸದೃಢ ಆರ್ಥಿಕತೆಗಾಗಿ ನಾವು ಮತ್ತೆ ಮೋದಿಯವರನ್ನೇ ಗೆಲ್ಲಿಸಬೇಕಿದೆ ಎಂದಿದ್ದಾರೆ ಮೋಹನ್.

ಕಾಳಧನಿಕರಿಗೆ ಎದೆನಡುಗಿಸಿದ ಮೋದಿ

ಕಾಳಧನಿಕರ ಎದೆ ನಡುಗಿಸಿದ ಮೊದಲ ಪ್ರಧಾನಿ ನನ್ನ ಮೋದಿಜೀ. ಈ ಬಾರಿ 90 ಲಕ್ಷ ಮಂದಿ ಹೂಸದಾಗಿ ಅದಾಯ ಪ್ರತಿ ಸಲ್ಲಿಸಿದ್ದು, 83000 ಕೋಟಿ ಸಾಲ ಮರುಪಾವತಿ ಇದಕ್ಕೆ ಸಾಕ್ಷಿ ಎಂದು ಟ್ವೀಟ್ ಮಾಡಿದ್ದಾರೆ ಪ್ರಶಾಂತ್.

English summary
4th anniversary of BJP led NDA government. People on twitter here explain their opinion about 4 years of PM Narendra Modi's rule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X