ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಈ ಬಾರಿ ಬಕ್ರೀದ್ ಗೆ ಮೇಕೆ ಬದಲು ಮೇಕೆ ಚಿತ್ರವಿರುವ ಕೇಕ್ ಕತ್ತರಿಸೋಣ'

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಈ ಸಲದ ಬಕ್ರೀದ್ ಅನ್ನು ಪರಿಸರಸ್ನೇಹಿಯಾಗಿ ಆಚರಿಸಲು ಲಖನೌದ ಜನರು ತಯಾರಿ ನಡೆಸಿದ್ದಾರೆ. ಏನಪ್ಪಾ ಇದು ಪರಿಸರಸ್ನೇಹಿ ಗಣಪತಿ ಅನ್ನೋ ರೀತಿಯಲ್ಲಿ ಧ್ವನಿಸುತ್ತಿದೆಯಲ್ಲಾ ಎಂದು ನಿಮಗೆ ಅನಿಸಿದರೆ ಈ ವರದಿ ಬಹಳ ಆಸಕ್ತಿಕರವಾಗಿದೆ. ಮೇಕೆ ಚಿತ್ರವಿರುವ ಕೇಕ್ ಕತ್ತರಿಸುವ ಮೂಲಕ ಬಕ್ರೀದ್ ಆಚರಿಸಲು ಚಿಂತನೆ ನಡೆದಿದೆಯಂತೆ.

ಈ ಬಗ್ಗೆ ಬೇಕರಿಯೊಂದರಲ್ಲಿ ಕೇಕ್ ಖರೀದಿಸುತ್ತಿದ್ದ ಗ್ರಾಹಕರೊಬ್ಬರು ಮಾತನಾಡಿ, ಬಕ್ರೀದ್ ದಿನದಂದು ಪ್ರಾಣಿ ಹತ್ಯೆ ಮಾಡುವುದು ಸರಿಯಲ್ಲ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ: ಕೇಕ್ ಕತ್ತರಿಸುವ ಮೂಲಕ ಎಲ್ಲರೂ ಹಬ್ಬವನ್ನು ಆಚರಣೆ ಮಾಡಿ. ಯಾವುದೇ ಕಾರಣಕ್ಕೂ ಪ್ರಾಣಿ ಬಲಿ ಕೊಡುವುದು ಬೇಡ ಎಂದಿದ್ದಾರೆ.

People in Lucknow are preparing to celebrate an eco friendly Bakrid

ಈ ವ್ಯಕ್ತಿಯ ತೀರ್ಮಾನಕ್ಕೆ ನಮ್ಮ ಬೆಂಬಲವಿದೆ ಎಂದು ಕೆಲವರು ಟ್ವಿಟ್ಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದರೆ, ಇದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಪ್ರಭಾವ ಎಂದು ಕೆಲವರು ಹೇಳಿದ್ದಾರೆ. ಹೇಗಿದ್ದರೂ ಫತ್ವಾ ಬರುತ್ತದೆ ಎಂದು ಕೂಡ ಹೇಳಲಾಗಿದೆ. ಏನಾದರಾಗಲಿ, ಒಬ್ಬ ವ್ಯಕ್ತಿಯ ಆಲೋಚನೆ ಮತ್ತು ಚಿಂತನೆ ಹೀಗಿದೆ ಎಂದು ಹೇಳಿಕೊಳ್ಳುವುದರಲ್ಲಿ ಏನು ತಪ್ಪಿದೆ? ಈ ನಿರ್ಧಾರಕ್ಕೆ ನೀವೇನಂತೀರಿ?

English summary
People in Uttar Pradesh's Lucknow are preparing to celebrate an eco friendly Bakrid by cutting cakes with a goat image. A buyer at a bakery says, The custom of sacrificing an animal on Bakrid is not right.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X