ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋವಿಡ್ ಭೀತಿಯ ನಡುವೆ ಫ್ಲೂ ಲಸಿಕೆ ಪಡೆದುಕೊಳ್ಳಲು ಜನರ ದೌಡು

|
Google Oneindia Kannada News

ನವದೆಹಲಿ, ಅಕ್ಟೋಬರ್ 24: ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆ ಆಸ್ಪತ್ರೆಗೆ ದಾಖಲಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಲು ಇನ್‌ಫ್ಲೂಯೆಂಜಾಕ್ಕೆ ಲಸಿಕೆ ಪಡೆದುಕೊಳ್ಳಲು ಜನರು ಹಿಂದೆಂದಿಗಿಂತಲೂ ಹೆಚ್ಚಿನ ಆತುರ ತೋರಿಸುತ್ತಿದ್ದಾರೆ.

ಭಾರತದಲ್ಲಿ ಫ್ಲೂ ಲಸಿಕೆಯನ್ನು ವರ್ಷಕ್ಕೆ ಒಮ್ಮೆ ತೆಗೆದುಕೊಳ್ಳುವುದನ್ನು ಸರ್ಕಾರ ಕಡ್ಡಾಯ ಮಾಡಿಲ್ಲ. ಪ್ರತ ಅವಧಿಯಿಂದ ಅವಧಿಗೂ ಇನ್‌ಪ್ಲೂಯೆಂಜಾ ವೈರಸ್ ಹರಡುವಿಕೆ ವ್ಯಾಪಕವಾಗಿದ್ದರೂ ಹೆಚ್ಚಿನ ಭಾರತೀಯರು ಫ್ಲೂ ಲಸಿಕೆ ತೆಗೆದುಕೊಳ್ಳಲು ಮುಂದಾಗುವುದಿಲ್ಲ. ಆದರೆ ಈಗ ಹೆಚ್ಚಿನ ಜನರು ಫ್ಲೂ ಲಸಿಕೆ ಪಡೆದುಕೊಳ್ಳಲು ಮುಂದಾಗುತ್ತಿದ್ದಾರೆ.

ಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅನುಮತಿಗೆ ಶಿಫಾರಸುಕೋವ್ಯಾಕ್ಸಿನ್ ಲಸಿಕೆಯ 3ನೇ ಹಂತದ ಪ್ರಯೋಗದ ಅನುಮತಿಗೆ ಶಿಫಾರಸು

ಇನ್‌ಫ್ಲೂಯೆಂಜಾ ಲಸಿಕೆಯು ಕೋವಿಡ್‌ನಿಂದ ರಕ್ಷಣೆ ನೀಡದೆ ಹೋದರೂ ಪರೋಕ್ಷವಾಗಿ ಜನರಿಗೆ ಸಹಾಯ ಮಾಡುತ್ತದೆ ಎಂದು ಏಮ್ಸ್‌ನ ಔಷಧ ವಿಭಾಗದ ಮುಖ್ಯಸ್ಥ ನವೀತ್ ವಿಗ್ ಹೇಳಿದ್ದಾರೆ.

 People Getting Influenza Vaccine Shot To Reduce Risk Of Covid 19 Amid Pandemic

ಕೋವಿಡ್ 19ಕ್ಕೆ ಕಾರಣವಾಗಬಹುದಾದ ಇನ್‌ಫ್ಲೂಯೆಂಜಾ ವೈರಸ್ ಮತ್ತು ಸಾರ್ಸ್-ಕೋವ್ ವೈರಸ್‌ಗಳು ಚಳಿಗಾಲದಲ್ಲಿ ಹರಡುತ್ತವೆ. ಈಗ ಇನ್‌ಫ್ಲೂಯೆಂಜಾ ಲಸಿಕೆ ಪಡೆದುಕೊಳ್ಳುವುದು ಕೋವಿಡ್‌ನಿಂದ ರಕ್ಷಣೆ ನೀಡದೆ ಇರಬಹುದು. ಆದರೆ ಅದಕ್ಕೆ ಪರೋಕ್ಷವಾಗಿ ಸಹಕರಿಸುತ್ತದೆ. ಫ್ಲೂ ಅನಾರೋಗ್ಯ, ಆಸ್ಪತ್ರೆಗೆ ದಾಖಲಾಗುವುದು ಮತ್ತು ಸಾಯುವ ಅಪಾಯವನ್ನು ಈ ಲಸಿಕೆ ಕಡಿಮೆ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ಭಾರತದಲ್ಲಿ ನವೆಂಬರ್-ಡಿಸೆಂಬರ್ ನಿಂದ ಏಪ್ರಿಲ್-ಮೇ ಅವಧಿಯಲ್ಲಿ ಫ್ಲೂ ಸಂಬಂಧಿ ಅನಾರೋಗ್ಯ ಹೆಚ್ಚು ಹರಡುತ್ತದೆ. ವೈರಸ್‌ಗಳು ಬದಲಾಗದೆ ಇದ್ದರೂ, ಅವುಗಳ ವಿರುದ್ಧದ ಹೋರಾಟಕ್ಕೆ ಇಮ್ಯುನಿಟಿ ಹೆಚ್ಚಾಗಲಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

Recommended Video

ಇನ್ಮುಂದೆ ಪೊಲೀಸ್ ಹತ್ರ escape ಆಗೋದು ಕಷ್ಟ! | Oneindia Kannada

ಇನ್‌ಫ್ಲೂಯೆಂಜಾ ವೈರಸ್‌ಗಳು ಕೊರೊನಾ ವೈರಸ್ ಕಾಯಿಲೆಯ ವಿರುದ್ಧವೂ ಕೆಲಸ ಮಾಡಸುವ ಸಾಧ್ಯತೆ ಇದೆ. ವೈರಸ್‌ಗಳು ಒಂದೇ ಕುಟುಂಬಕ್ಕೆ ಸೇರಿವೆ. ಆದರೆ ಅವುಗಳ ನಡುವೆ ಸಾಮ್ಯತೆಗಳಿರುವುದಿಲ್ಲ. ಇನ್‌ಫ್ಲೂಯೆಂಜಾ ಲಸಿಕೆ ಕೋವಿಡ್ ವಿರುದ್ಧದ ಹೋರಾಟಕ್ಕೆ ನೆರವಾಗುತ್ತದೆ ಎಂಬ ಬಗ್ಗೆ ಯಾವುದೇ ದಾಖಲೆ ಇಲ್ಲ. ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಇನ್‌ಫ್ಲೂಯೆಂಜಾ ಲಸಿಕೆ ಸಹಾಯ ಮಾಡುವುದಿಲ್ಲ. ವೈರಸ್‌ಗಳ ಸ್ವರೂಪ ಪ್ರತಿ ವರ್ಷ ಬದಲಾಗುತ್ತದೆ. ಆದರೆ ಲಸಿಕೆ ಒಂದಷ್ಟು ಅಪಾಯಗಳನ್ನು ತಡೆಯುವಷ್ಟು ಸಹಕಾರಿಯಾಗಿದೆ ಎಂದು ಐಸಿಎಂಆರ್ ಪ್ರಧಾನ ನಿರ್ದೇಶಕ ಬಲರಾಮ್ ಭಾರ್ಗವ ಹೇಳಿದ್ದಾರೆ.

English summary
Indians are more willing to take inlfuenza vaccine shot to reduce the risk and hospitalisation amit covid 19 pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X