ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020ರ ಸ್ಟ್ರಾಬೆರಿ ಚಂದ್ರಗ್ರಹಣ ನೋಡಲು ಏನಿದೆ ಕಾರಣ?

|
Google Oneindia Kannada News

ಬೆಂಗಳೂರು, ಮೇ 30: ಆಗಸದ ಅತ್ಯಾಕರ್ಷಕ ವಿದ್ಯಮಾನಗಳಲ್ಲಿ ಗ್ರಹಣಗಳು ಕೂಡಾ ಒಂದು. 2020ರಲ್ಲಿ ಒಟ್ಟು ನಾಲ್ಕು ಚಂದ್ರಗ್ರಹಣಗಳು ಘಟಿಸಲಿವೆ. ಈ ಪೈಕಿ ಎರಡನೇ ಚಂದ್ರಗ್ರಹಣವು ಜೂನ್ 5 ಹಾಗೂ 6 ರ ರಾತ್ರಿ ಸಂಭವಿಸಲಿದೆ.

Recommended Video

ಪೆನಂಬ್ರಲ್ ಚಂದ್ರಗ್ರಹಣದಿಂದ ಯಾವ ರಾಶಿಗಳಿಗೆ ಶುಭ..?ಅಶುಭ..? | Lunar Eclipse | Oneindia Kannada

2020ರ ಮೊದಲ ಚಂದ್ರಗ್ರಹಣ ಜ.10ರಂದು ಸುಮಾರು ನಾಲ್ಕು ಗಂಟೆ ಐದು ನಿಮಿಷದ ಅವಧಿ ಕಾಲ ಭಾರತದಲ್ಲಿ ಗೋಚರವಾಗಿತ್ತು. ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 90ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗಿತ್ತು.

ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಉಂಟಾಗುವ ಈ ವಿದ್ಯಮಾನ, ವೀಕ್ಷಣೆಗೆ ಅತ್ಯಾಕರ್ಷಕವಾಗಿರುತ್ತದೆ. ಈ ಸಂದರ್ಭದಲ್ಲಿ ಸೂರ್ಯನ ಕಿರಣಗಳು ಚಂದ್ರನ ಮೇಲೆ ಬೀಳುವುದಕ್ಕೆ ಭೂಮಿ ಅಡ್ಡಿಪಡಿಸುತ್ತದೆ. ಈ ಬಾರಿಯ ಚಂದ್ರಗ್ರಹಣವನ್ನು Penumbral Lunar Eclipse/ Strawberry Moon Eclipse ಎಂದು ಕರೆಯಲಾಗುತ್ತಿದೆ. ಚಂದ್ರಗ್ರಹಣ ಎಲ್ಲೆಲ್ಲಿ ಗೋಚರಿಸಲಿದೆ. ಎಷ್ಟು ಅವಧಿ ಕಾಣಿಸಲಿದೆ? ಇನ್ನಷ್ಟು ವಿವರ ಮುಂದಿದೆ...

ಭಾರತದ ಬಹುತೇಕ ಎಲ್ಲ ನಗರಗಳಲ್ಲಿ ಗೋಚರ

ಭಾರತದ ಬಹುತೇಕ ಎಲ್ಲ ನಗರಗಳಲ್ಲಿ ಗೋಚರ

ಸ್ಟ್ರಾಬೆರಿ ಚಂದ್ರಗ್ರಹಣ ಎಂದು ಕರೆಯಲಾಗುವ penumbral lunar eclipse ಜೂನ್ 5 ಹಾಗೂ 6 ರ ರಾತ್ರಿ ರಂದು ಸಂಭವಿಸಲಿದೆ. ಈ ಅಪರೂಪದ ವಿದ್ಯಮಾನವು ಯುರೋಪ್, ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೆರಿಕ, ಫೆಸಿಫಿಕ್, ಅಟ್ಲಾಂಟಿಕ್, ಹಿಂದೂ ಮಹಾಸಾಗರ, ಅಂಟಾರ್ಟಿಕಾ ಭಾಗಗಳಲ್ಲಿ ಕಾಣಿಸಲಿದೆ ಎಂದು ಟೈಮ್ ಅಂಡ್ ಡೇಟ್ ವೆಬ್ ವರದಿ(https://www.timeanddate.com/eclipse/lunar/2020-june-5) ಮಾಡಿದೆ. ಭಾರತದ ಬಹುತೇಕ ಎಲ್ಲ ನಗರಗಳಲ್ಲಿಯೂ ಇದನ್ನು ನೋಡಬಹುದಾಗಿದೆ.

ಸ್ಟ್ರಾಬೆರಿ ಚಂದ್ರಗ್ರಹಣ ವಿಶೇಷವೇನು?

ಸ್ಟ್ರಾಬೆರಿ ಚಂದ್ರಗ್ರಹಣ ವಿಶೇಷವೇನು?

ಸ್ಟ್ರಾಬೆರಿ ಚಂದ್ರಗ್ರಹಣದ ವೇಳೆ ಚಂದ್ರನ ಮೇಲ್ಮೈನ ಶೇ 57ರಷ್ಟು ಭಾಗವು ಭೂಮಿಯಿಂದ ಭಾಗಶಃ ಮುಚ್ಚಿರುವುದರಿಂದ ಅದರ ಹೊರಭಾಗದ ನೆರಳು ಮಾತ್ರ ಗೋಚರವಾಗುತ್ತದೆ. ಹೀಗಾಗಿ, ಬಹುತೇಕರಿಗೆ ಗ್ರಹಣ ಸರಿಯಾಗಿ ಗೋಚರಿಸದೇ ಹೋಗಬಹುದು. ಪೆನಂಬ್ರಲ್‌ ಚಂದ್ರ ಗ್ರಹಣವು ಸಾಮಾನ್ಯವಾಗಿ ಸ್ವಲ್ಪ ಗಾಢವಾಗಿದ್ದರೂ, ಹುಣ್ಣಿಮೆಯ ದಿನ ವೀಕ್ಷಿಸಲು ಸಾಧ್ಯವಿಲ್ಲ, ಆದರೆ ಆಕಾಶವು ಸ್ಪಷ್ಟವಾಗಿದ್ದರೆ ಮಾತ್ರ ಕಾಣಿಸಿಕೊಳ್ಳುತ್ತದೆ. ಇದನ್ನು ನೋಡಲು ಸಾಧ್ಯವಾದರೆ ಖಂಡಿತವಾಗಿಯೂ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳಬಹುದು.

ಗ್ರಹಣದ ಸಮಯ

ಗ್ರಹಣದ ಸಮಯ

ಜೂನ್ 5 ಹಾಗೂ ಜೂನ್ 6 ರ ರಾತ್ರಿ ವೇಳೆ ನಡೆಯುವೀ ವಿದ್ಯಮಾನದ ಪ್ರಮುಖ ಅವಧಿ ಹೀಗಿದೆ: ಗ್ರಹಣವು ಜೂನ್ 5ರ ರಾತ್ರಿ 11.15 ISTಗೆ ಆರಂಭವಾಗಿ ಜೂನ್ 6ರಂದು 2:34 AMರಂದು ಅಂತ್ಯಗೊಳ್ಳಲಿದೆ. 12.54 PM ಕ್ಕೆ ಗ್ರಹಣ ಪೂರ್ಣಪ್ರಮಾಣದಲ್ಲಿರಲಿದ್ದು, ಈ ಎರಡನೇ ಮೇಲ್ಮೈ ಚಂದ್ರಗ್ರಹಣದ ಅವಧಿ 18 ನಿಮಿಷ ಎನ್ನಬಹುದು. ಸೂರ್ಯಗ್ರಹಣದಂತೆ ಚಂದ್ರಗ್ರಹಣ ವೀಕ್ಷಿಸಲು ವಿಶೇಷ ಕನ್ನಡಕ ಅಗತ್ಯವಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಮತ್ತೆ ಯಾವಾಗ ಚಂದ್ರಗ್ರಹಣ

ಮತ್ತೆ ಯಾವಾಗ ಚಂದ್ರಗ್ರಹಣ

2020ರಲ್ಲಿ ನಾಲ್ಕು ಬಾರಿ ಚಂದ್ರಗ್ರಹಣ ಸಂಭವಿಸಲಿದ್ದು, ಜನವರಿ 10ರಂದು, ಜೂನ್ 5 ರಂದು, ಜುಲೈ 4 ಹಾಗೂ ಜೂನ್ 30ರಂದು ಚಂದ್ರಗ್ರಹಣ ಕಾಣಬಹುದು.

ಮುಂದಿನ ಸಂಪೂರ್ಣ ಚಂದ್ರಗ್ರಹಣ 2021ರ ಮೇ 26ರಂದು ಸಂಭವಿಸಲಿದೆ. ಇದು ಪೂರ್ವ ಏಷ್ಯಾ, ಆಸ್ಟ್ರೇಲಿಯಾ, ಪೆಸಿಫಿಕ್ ಸಾಗರ ಮತ್ತು ಅಮೆರಿಕದಲ್ಲಿ ಕಾಣಿಸಲಿದೆ. ಇದರ ಬಳಿಕ 2021ರ ನವೆಂಬರ್ 19ರಂದು ಭಾಗಶಃ ಚಂದ್ರಗ್ರಹಣ ಉಂಟಾಗಲಿದೆ. ಇದು ಉತ್ತರ ಮತ್ತು ದಕ್ಷಿಣ ಅಮೆರಿಕ, ಆಸ್ಟ್ರೇಲಿಯಾ ಮತ್ತು ಯುರೋಪ್ ಹಾಗೂ ಏಷ್ಯಾದ ಕೆಲವು ಭಾಗಗಳಲ್ಲಿ ಗೋಚರಿಸಲಿದೆ.

{quiz_138}

English summary
Lunar Eclipse 2020: The second penumbral lunar eclipse of 2020 is expected to occur between June 5 and June 6. Penumbral Lunar Eclipse Date, Timings, How and when to watch details is here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X