ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ-ಪಿಡಿಪಿ ಬ್ರೇಕಪ್: ಬಿಜೆಪಿಯದು ಕಪಟ ನಾಟಕವೇ?

|
Google Oneindia Kannada News

ಶ್ರೀನಗರ, ಜೂನ್ 19: ಜಮ್ಮು-ಕಾಶ್ಮಿರದ ರಾಜಕಾರಣದಲ್ಲಿ ಅನಿರೀಕ್ಷಿತ ಬೆಳವಣಿಗೆಯೊಂದು ಸಂಭವಿಸಿದೆ. 'ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆ, ಹಿಂಸಾಚಾರ ಮತ್ತು ತೀವ್ರಗಾಮಿತ್ವವನ್ನು ನಿಯಂತ್ರಣಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಶುಜತ್ ಬುಖಾರಿ ಹತ್ಯೆ ಇದಕ್ಕೊಂದು ಉದಾಹರಣೆ' ಎಂಬ ಕಾರಣ ನೀಡಿರುವ ಬಿಜೆಪಿ, ಪಿಡಿಪಿ(ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ)ಗೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದೆ.

2014ರಲ್ಲಿ ನಡೆದ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಪಿಡಿಪಿ 28, ಬಿಜೆಪಿ 25, ನ್ಯಾಷನಲ್ ಕಾನ್ಫರೆನ್ಸ್ 15 ಮತ್ತು ಕಾಂಗ್ರೆಸ್ 12 ಸ್ಥಾನಗಳನ್ನು ಗೆದ್ದುಕೊಂಡಿದ್ದವು. ಇತರರು 7 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ವಿಧಾನಸಭೆಯಲ್ಲಿ ಯಾರಿಗೂ ಬಹುಮತ ಸಿಕ್ಕಿರಲಿಲ್ಲ. ಒಟ್ಟು 87 ಸದಸ್ಯ ಬಲದ ವಿಧಾನಸಭೆಗೆ ಬಹುಮತಕ್ಕೆ ಅಗತ್ಯವಿದ್ದ 44 ಸೀಟುಗಳಿಗಾಗಿ ಬಿಜೆಪಿ-ಪಿಡಿಪಿ ಮೈತ್ರಿ ಮಾಡಿಕೊಂಡಿದ್ದವು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ತಲಾಖ್ಜಮ್ಮು ಮತ್ತು ಕಾಶ್ಮೀರದಲ್ಲಿ ಪಿಡಿಪಿಗೆ ಬಿಜೆಪಿ ತಲಾಖ್

"ಕಣಿವೆ ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಪಿಡಿಪಿ ಜೊತೆ ಮೈತ್ರಿ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಬಿಜೆಪಿ ಬರೋಬ್ಬರಿ ಮೂರು ವರ್ಷಗಳ ಕಾಲ ಆಡಳಿತ ನಡೆಸಿದೆ. ಮೂರು ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಆಡಳಿತ ನಡೆಸುತ್ತಿದ್ದ ಬಿಜೆಪಿಗೆ ಈ ರಾಜ್ಯದಲ್ಲಿ ಭಯೋತ್ಪಾದನೆ ಇತ್ತು ಎಂಬುದು ಈಗ ಗೊತ್ತಾಯಿತೇ" ಎಂದು ಕೆಲವರು ಬಿಜೆಪಿ ನಿರ್ಧಾರವನ್ನು ಅಣಕಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೆಹಬೂಬಾ ಮುಫ್ತಿಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಮೆಹಬೂಬಾ ಮುಫ್ತಿ

"ಬಿಜೆಪಿಯ ಭವಿಷ್ಯದ ದೃಷ್ಟಿಯಿಂದ ಈ ನಿರ್ಧಾರ ಸ್ವಾಗತಾರ್ಹ" ಎಂದು ಮತ್ತಷ್ಟು ಜನ ಅಭಿಪ್ರಾಯ ಪಟ್ಟಿದ್ದಾರೆ. ಪಿಡಿಪಿ-ಬಿಜೆಪಿ ಮೈತ್ರಿ ಬ್ರೇಕ್ ಅಪ್ ವಿಚಾರಕ್ಕೆ ಸಂಬಂಧಿಸಿದ ಇಂಟರೆಸ್ಟಿಂಗ್ ಟ್ವೀಟ್ ಗಳು ಇಲ್ಲಿವೆ.

ಈ ಸುಳ್ಳುಗಾರರನ್ನು ನಂಬಬೇಡಿ!

ಕಳೆದು ಮೂರು ವರ್ಷಗಳಿಂದ ಈ ಸುಳ್ಳುಗಾರರು ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ಕಡಿಮೆಯಾಗಿದೆ ಎನ್ನುತ್ತಲೇ ಬರುತ್ತಿದ್ದಾರೆ. ಅಪನಗದೀಕರಣದಿಂದ ಭಯೋತ್ಪಾದಕರ ಬೆನ್ನುಮೂಳೆ ಮುರಿದಿದೆ ಎಂದಿದ್ದಾರೆ. ಆದರೆ ಈಗ ಅದೇ ಸುಳ್ಳುಗಾರರು ನಮಗೆ ಹೇಳುತ್ತಿದ್ದಾರೆ, "ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಹಿಂಸೆ ಕಡಿಮೆಯಾಗಿಲ್ಲ. ಅದಕ್ಕೆಂದೇ ನಾವು ಮೈತ್ರಿ ಮುರಿದುಕೊಂಡಿದ್ದೇವೆ" ಎಂದು! ಎಂಬುದು ದ್ರುವ್ ರತೀ ಅವರ ಆಕ್ರೋಶದ ಟ್ವೀಟ್.

Array

ಎಲ್ಲ ಮುಗಿದ ಮೇಲೆ ಮೈತ್ರಿ ಮುರಿದುಕೊಂಡರು!

235 ನಾಗರಿಕರನ್ನು, 460 ಸಶಸ್ತ್ರ ಬಂಡಾಯಗಾರರನ್ನು ಕೊಂದ ನಂತರ ಎಲ್ಲ ಮುಗಿಯಿತೆಂದು ತಮ್ಮ ಅಪರಾಧದ ಪಾಲುದಾರ ಪಿಡಿಪಿ ಜೊತೆ ಮೈತ್ರಿ ಕಡಿದು ಕೊಂಡಿದೆ ಬಿಜೆಪಿ ಎಂದಿದ್ದಾರೆ ಫಯ್ಸಾಲ್.

ಉತ್ತಮ ನಿರ್ಧಾರ

ಎರಡು ವರ್ಷ ಇನ್ನೂ ಬಹಳ ಮುಂದಿದೆ. ಬಿಜೆಪಿಯದು ಅತ್ಯುತ್ತಮ ನಿರ್ಧಾರ ಎಂದಿದ್ದಾರೆ ಆನಂದ್ ರಂಗನಾಥನ್.

ಸಾಗತಾರ್ಹ ನಿರ್ಧಾರ

ಪಿಡಿಪಿ ಜೊತೆ ಮೈತ್ರಿ ಕಡಿದುಕೊಂಡ ಬಿಜೆಪಿ ನಿರ್ಧಾರವನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ಸ್ವಾಗತಾರ್ಹ. ಭಯೋತ್ಪಾದನೆಯನ್ನು ಕಬ್ಬಿಣದ ಕೈಯಿಂದ ಹತ್ತಿಕ್ಕಬೇಕು. ನಮ್ಮ ಸೇನೆಗೆ ಯಾವ ಅಡೆತಡೆಯಿಲ್ಲದೆ ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ ನೀಡಬೇಕು.

ಈ ಪ್ರಶ್ನೆ ಕೇಳುವ ಧೈರ್ಯವಿದೆಯೇ?

ಭಯೋತ್ಪಾದಕರು ಈಗಲೂ ಅಸ್ತಿತ್ವದಲ್ಲಿದ್ದಾರೆ ಎಂಬುದಾದರೆ ಅಪನಗದೀಕರಣದಿಂದಾದ ಪ್ರಯೋಜನವೇನು? ಮತ್ತೆ ಕಲ್ಲು ತೂರಾಟ ನಡೆಯುತ್ತಿದ್ದರೆ ನಿಮ್ಮ ನೋಟು ರದ್ದತಿಯ ಪರಿಣಾಮವೇನು? ಎಂದು ಬಿಜೆಪಿಯನ್ನು ಕೇಳುವ ಧೈರ್ಯ ಯಾವುದಾದರೂ ಪತ್ರಕರ್ತರಿಗಿದೆಯೇ? ಎಂದು ಪ್ರಶ್ನಿಸಿದ್ದಾರೆ ತೆಹ್ಸೀನ್ ಪೂನಾವಾಲಾ.

ತಪ್ಪನ್ನು ಮುಫ್ತಿ ಹೆಗಲಿಗೆ ಕಟ್ಟುವ ಯತ್ನ

ಕಾಶ್ಮೀರ ಕಣಿವೆಯಲ್ಲಿನ ಉದ್ವಿಗ್ನತೆಯ ಹೊಣೆಗಾರಿಕೆಯನ್ನು ಸಂಪೂರ್ಣ ಮುಫ್ತಿ ಹೆಗಲಿಕೆ ಹಾಕಿ, ತಾನು ನಿರ್ದೋಷಿ ಎಂದು ತೋರಿಸಿಕೊಳ್ಳಲು ಬಿಜೆಪಿ ಮಾಡಿದ ಕಪಟ ನಾಟಕ ಇದು. ಇದರಿಂದ ಯಾರೂ ಮೂರ್ಖರಾಗಬೇಡಿ. ಜಮ್ಮು-ಕಾಶ್ಮೀರದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿದ್ದರೂ ಅದಕ್ಕೆ ಬಿಜೆಪಿಯೂ ಸಮಾನ ಹೊಣೆ ಎಂದಿದ್ದಾರೆ ರೋಷನ್ ರೈ.

English summary
The Bharatiya Janata Party (BJP) on Tuesday pulled out of alliance with Mehbooba Mufti's People Democratic Party(PDP) in Jammu and Kashmir. Many twitterians say this is BJP's drama for 2019 Lok Sabha Elections. Here are few twitter reactions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X