ನರೇಗಾ ಯೋಜನೆ; 3,360 ಕೋಟಿ ರೂ. ವೇತನ ಪಾವತಿ ಬಾಕಿ
ನವದೆಹಲಿ, ಫೆಬ್ರವರಿ 03; ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2022-23ನೇ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ)ಕ್ಕೆ ನೀಡುವ ಅನುದಾನ ಕಡಿತ ಮಾಡಲಾಗಿದೆ.
ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ನೀಡಿದ ಉತ್ತರಿಂದ ಇದು ಖಚಿತವಾಗಿದೆ. ಗ್ರಾಮೀಣ ಮಟ್ಟದಲ್ಲಿ ಉದ್ಯೋಗ ಸೃಷ್ಟಿ ಮಾಡುವ ಯೋಜನೆಗೆ ಶೇ 25ರಷ್ಟು ಅನುದಾನವನ್ನು ಈ ಬಾರಿಯ ಬಜೆಟ್ನಲ್ಲಿ ಕಡಿತಗೊಳಿಸಲಾಗಿದೆ. ಅಲ್ಲದೇ ಯೋಜನೆಯಡಿ ಕೆಲಸ ಮಾಡಿದ ಕಾರ್ಮಿಕರಿಗೆ ಇನ್ನೂ 3,360 ಕೋಟಿ ರೂ. ವೇತನ ಪಾವತಿ ಬಾಕಿ ಇದೆ.
ಬಜೆಟ್; ನರೇಗಾ ಯೋಜನೆಗೆ 1.5 ಲಕ್ಷ ಕೋಟಿ ಅನುದಾನ ನಿರೀಕ್ಷೆ
ಪಶ್ಚಿಮ ಬಂಗಾಳ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಅತಿ ಹೆಚ್ಚಿನ ವೇತನ ಪಾವತಿ ಬಾಕಿ ಉಳಿದಿದೆ. ಬಾಕಿ ಉಳಿದಿರುವ ವೇತನ ಮುಂದಿನ ಆರ್ಥಿಕ ವರ್ಷಕ್ಕೆ ಸಹ ಪಾವತಿಯಾಗದಿದ್ದರೆ ಮತ್ತೆ ಬಜೆಟ್ನಲ್ಲಿ ಅನುದಾನ ಕಡಿತ ಮಾಡಲಾಗುತ್ತದೆ.
ನರೇಗಾ ಯೋಜನೆಯಡಿ ಪಪ್ಪಾಯ ಬೆಳೆದು ಲಾಭ ಪಡೆದ ರೈತ
ಸಿಪಿಐಎಂ ಪಕ್ಷದ ಸದಸ್ಯ ಜಾನ್ ಬಿರ್ತಾಸ್ ಪ್ರಶ್ನೆಗೆ ಸರ್ಕಾರ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದೆ. ಕೋವಿಡ್ ಲಾಕ್ಡೌನ್ ಸಂದರ್ಭದಲ್ಲಿ ರಾಜ್ಯವಾರು ಕೈಗೊಂಡ ಕಾಮಗಾರಿಗಳು, ವೇತನ ಹಂಚಿಕೆ ಕುರಿತು ಮಾಹಿತಿ ನೀಡುವಂತೆ ಪ್ರಶ್ನಿಸಲಾಗಿತ್ತು.
ಕಾರ್ಮಿಕರಿಗೆ ನೆರವಾದ ನರೇಗಾ; ರೈತನ ಮೊಗದಲ್ಲೂ ನಗು
ಗ್ರಾಮೀಣಾಭಿವೃದ್ಧಿ ಸಚಿವಾಲಯದ ರಾಜ್ಯ ಖಾತೆ ಸಚಿವ ಸಾಧ್ವಿ ನಿರಂಜನ್ ಜ್ಯೋತಿ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದರು. ಜನವರಿ 27ರ ಮಾಹಿತಿ ಪ್ರಕಾರ 3,358.14 ಕೋಟಿ ವೇತನ ಬಾಕಿ ಇದೆ. ಇವುಗಳಲ್ಲಿ 752 ಕೋಟಿ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ 597 ಕೋಟಿ ಮತ್ತು ರಾಜಸ್ಥಾನ 555 ಕೋಟಿ ರೂ. ಬಾಕಿ ಇದೆ.
ನರೇಗಾ ಸಂಘರ್ಷ ಮೋರ್ಚಾ ಯೋಜನೆಗೆ ಅನುದಾನ ಕಡಿತ ಮಾಡಿರುವ ಕುರಿತು ಮಾಹಿತಿ ನೀಡಿದೆ. 2022-23ನೇ ಸಾಲಿನ ಬಜೆಟ್ನಲ್ಲಿ ಶೇ 25ರಷ್ಟು ಅನುದಾನ ಕಡಿತಗೊಳಿಸಲಾಗಿದೆ. ಬಾಕಿ ಇರುವ ವೇತನ ಸೇರಿ ಒಟ್ಟು 54,650 ಕೋಟಿ ರೂ. ಅನುದಾನ ಲಭ್ಯವಿದೆ ಎಂದು ಹೇಳಿದೆ.
"ಪ್ರತಿ ವರ್ಷ ಶೇ 80-90ರಷ್ಟು ಬಜೆಟ್ ಅನುದಾನ ಮೊದಲ ಆರು ತಿಂಗಳ ಅವಧಿಯಲ್ಲಿ ಖರ್ಚಾಗದೇ ಉಳಿಯುತ್ತಿದೆ. ಯೋಜನೆ ವಿಳಂಬವಾಗುತ್ತದೆ. ಸಕ್ರಿಯ ಜಾಬ್ ಕಾರ್ಡ್ಗಳನ್ನು ಹೊಂದಿರುವ ಸದಸ್ಯರಿಗೆ ಸಹ ಉದ್ಯೋಗ ನೀಡಲು ಸಾಧ್ಯವಾಗುತ್ತಿಲ್ಲ" ಎಂದು ನರೇಗಾ ಸಂಘರ್ಷ ಮೋರ್ಚಾ ಹೇಳಿದೆ.
ಯೋಜನೆಯಡಿ ಪ್ರತಿ ವ್ಯಕ್ತಿಗೆ 334 ರೂ. ವೇತನ ನೀಡಲಾಗುತ್ತದೆ. ಸಕ್ರಿಯ ಜಾಬ್ ಕಾರ್ಡ್ ಹೊಂದಿದರುವವರಿಗೆ 100 ದಿನಗಳ ಉದ್ಯೋಗ ನೀಡಬೇಕು. ಆದರೆ 16 ದಿನಗಳ ಉದ್ಯೋಗ ನೀಡಲು ಸಾಧ್ಯವಾಗುವುದಿಲ್ಲ ಎಂದು ವಿಶ್ಲೇಷಿಸಿದೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅತ್ಯಂತ ಬೇಡಿಕೆ ಇರುವ ಉದ್ಯೋಗ ಕಾರ್ಯಕ್ರಮವಾಗಿದೆ. ಯೋಜನೆ ಅನ್ವಯ ಪ್ರತಿ ಗ್ರಾಮೀಣ ಕುಟುಂಬಕ್ಕೆ ಪ್ರತಿ ಹಣಕಾಸು ವರ್ಷದಲ್ಲಿ ಕನಿಷ್ಠ 100 ದಿನಗಳ ಖಾತರಿಯನ್ನು ಒದಗಿಸುವ ಮೂಲಕ ಜೀವನ ಭದ್ರತೆಯನ್ನು ಒದಗಿಸುತ್ತದೆ.
ಹಿಂದಿನ ಹಣಕಾಸು ವರ್ಷದಲ್ಲಿ 2020-21ರಲ್ಲಿ, 11.19 ಕೋಟಿ ಜನರಿಗೆ ಉದ್ಯೋಗ ಒದಗಿಸಲಾಗಿದೆ ಮತ್ತು 389.23 ಕೋಟಿಗೂ ಹೆಚ್ಚು ವ್ಯಕ್ತಿ ದಿನಗಳನ್ನು ಸೃಷ್ಟಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ 2021-22ರಲ್ಲಿ 6.51 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸಲಾಗಿದೆ.
ಭೂಮಿ, ನೀರು ಮತ್ತು ಮರಗಳ ಅಭಿವೃದ್ಧಿಯ ಮೂಲಕ ನೇರವಾಗಿ ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಸಂಬಂಧಿಸಿದ ಆಸ್ತಿಗಳ ಸೃಷ್ಟಿಗೆ ಯೋಜನೆಯನ್ನು ಆದ್ಯತೆ ನೀಡಲಾಗಿದೆ. 2021-22 ರಲ್ಲಿ ಶೇ 73% ವೆಚ್ಚವನ್ನು ಕೃಷಿ ಮತ್ತು ಸಂಬಂಧಿತ ಕೆಲಸಗಳಿಗೆ ಖರ್ಚು ಮಾಡಲಾಗಿದೆ.