ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲಾರ್ ಹಗರಣ: ಸರಿತಾ ಹಾಕಿದ 'ಬಾಂಬ್' ಗೆ ಪುಢಾರಿಗಳು ಶಾಕ್

By Mahesh
|
Google Oneindia Kannada News

ತಿರುವನಂತಪುರಂ, ಜೂ.20: ಬಹುಕೋಟಿ ಸೋಲಾರ್ ಹಗರಣದ ಪ್ರಮುಖ ಆರೊಪಿಗಳಾದ ಸರಿತಾ ಎಸ್ ನಾಯರ್ ಹಾಗೂ ಬಿಜು ರಾಧಕೃಷ್ಣನ್ ಇಬ್ಬರನ್ನು ದೋಷಿಗಳೆಂದು ನ್ಯಾಯಾಲಯ ಘೋಷಿಸಿದೆ. ಅದರೆ, ಜಾಮೀನಿನ ಮೇಲೆ ಹೊರಗಿರುವ ಸರಿತಾ ಜೈಲುವಾಸದಿಂದ ತಪ್ಪಿಸಿಕೊಂಡಿದ್ದಲ್ಲದೆ, ಅನೇಕ ರಾಜಕೀಯ ಮುಖಂಡರಿಗೆ ಶಾಕ್ ನೀಡುವ ಬೆದರಿಕೆ ಒಡ್ಡಿದ್ದಾರೆ.

ಸೋಲಾರ್ ಹಗರಣದಲ್ಲಿ ತನ್ನನ್ನು ವಂಚಿಸಿರುವ ರಾಜಕೀಯ ನಾಯಕರ ಹೆಸರುಗಳನ್ನು ಬಹಿರಂಗಪಡಿಸುವುದಾಗಿ ಸರಿತಾ ಎಸ್.ನಾಯರ್ ಬೆದರಿಕೆ ಹಾಕಿದ್ದಾರೆ. ತಿರುವನಂತಪುರದಲ್ಲಿ ಮಾತನಾಡಿದ ಸರಿತಾ, ತನಗೆ ವಂಚಿಸಿದ ರಾಜಕೀಯ ನಾಯಕರ ಪಟ್ಟಿಯೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸುವುದಾಗಿ ಹೇಳಿದರು.

ಸೋಲಾರ್ ಪ್ಯಾನೆಲ್ ಹಗರಣದಲ್ಲಿ ಉಮ್ಮನ್ ಚಾಂಡಿ ಅವರ ಕಾಂಗ್ರೆಸ್ ಸರ್ಕಾರದ ಸುಮಾರು ಮೂರನೇ ಒಂದು ಭಾಗದಷ್ಟು ಕ್ಯಾಬಿನೆಟ್ ಸಚಿವರು ಭಾಗಿಯಾಗಿರುವುದು ಪತ್ತೆಯಾಗಿದೆ. ['ನನಗೆ ಗಲ್ಲು ಶಿಕ್ಷೆ ಕೊಡಿ' ಎಂದ 'ಸೋಲಾರ್' ಅಪರಾಧಿ]

ಸಿಎಂ ಉಮ್ಮನ್ ಚಾಂಡಿ ಪದಚ್ಯುತಿಗೆ ಯುನೈಟೆಡ್ ಡೆಮಾಕ್ರಾಟಿಕ್ ಫ್ರಂಟ್ ಸೇರಿ ವಿಪಕ್ಷಗಳು ಎಡಬಿಡದೆ ಪ್ರತಿಭಟನೆ, ಹಿಂಸಾಚಾರ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು. [ಹಗರಣದ ಗಣಿಯಲ್ಲಿ 'ಸೋಲಾರ್' ಸುಂದರಿಯರು]

ಸೋಲಾರ್ ಹಗರಣದ ರೂವಾರಿ ಬಿಜು ರಾಧಾಕೃಷ್ಣನ್ ಅವರು ಪತ್ನಿ ಹತ್ಯೆ ಮಾಡಿದ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಪಡೆದುಕೊಂಡಿದ್ದಾರೆ. ವರದಕ್ಷಿಣೆ ಕಿರುಕುಳ ಆರೋಪದ ಮೇಲೆ ಬಿಜು ಅವರ ತಾಯಿ ರಾಜಾಮ್ಮಲ್ ಅವರಿಗೆ ಮೂರು ವರ್ಷ ಜೈಲುಶಿಕ್ಷೆ ಹಾಗೂ 50 ಸಾವಿರ ರು ದಂಡ ಹಾಕಿದೆ.

ನಾನು ಬಲಿಪಶುವಾಗಿದ್ದೇನೆ, ಸುಮ್ಮನೆ ಬಿಡಲ್ಲ

ನಾನು ಬಲಿಪಶುವಾಗಿದ್ದೇನೆ, ಸುಮ್ಮನೆ ಬಿಡಲ್ಲ

ಈ ವಿವಾದದಲ್ಲಿ ಹಲವು ಸಚಿವರು ಹಾಗೂ ಆಡಳಿತಾರೂಢ ಯುಡಿಎಫ್ ಶಾಸಕರು ಶಾಮೀಲಾಗಿದ್ದು, ನನ್ನನ್ನು ಮಾತ್ರ ಬಲಿಪಶುವನ್ನಾಗಿ ಮಾಡಲಾಗಿದೆ.ರಕ್ಷಣೆ ನೀಡುವುದಾಗಿ ಭರವಸೆ ಕೊಟ್ಟವರಿ ಈಗ ಕೈಕೊಟ್ಟಿದ್ದಾರೆ. ನಾನು ರಹಸ್ಯವನ್ನು ಬಯಲು ಮಾಡಲಿದ್ದೇನೆ. ಇದರಿಂದ ಮುಂಬರುವ ಉಪಚುನಾವಣೆಯ ಫಲಿತಾಂಶದ ಮೇಲೆ ಪರಿಣಾಮವಾದರೂ ನನಗೆ ಚಿಂತೆಯಿಲ್ಲ'' ಎಂದು ಸರಿತಾ ನಾಯರ್ ಹೇಳಿದ್ದಾರೆ.

ಸರಿತಾ ನಾಯರ್ ಬಂಧನವಾಗಿಲ್ಲ

ಸರಿತಾ ನಾಯರ್ ಬಂಧನವಾಗಿಲ್ಲ

ಸೋಲಾರ್ ವಂಚನೆ ಹಗರಣಕ್ಕೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಸರಿತಾ ಎಸ್.ನಾಯರ್‌ಗೆ ಪಟ್ಟಣಂತಿಟ್ಟಂನ ಪ್ರಥಮದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಉನ್ನತ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ನ್ಯಾಯಾಧೀಶರು ಕಾಲಾವಕಾಶ ನೀಡಿರುವ ಹಿನ್ನೆಲೆಯಲ್ಲಿ, ಆಕೆಯನ್ನು ಇನ್ನೂ ಬಂಧಿಸಬೇಕಾಗಿಲ್ಲ. ಈಗಾಗಲೇ ಜಾಮೀನು ಪಡೆದುಕೊಂಡಿರುವ ಸರಿತಾ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಲೈಂಗಿಕ ಶೋಷಣೆಯ ಆರೋಪಗಳು

ಲೈಂಗಿಕ ಶೋಷಣೆಯ ಆರೋಪಗಳು

ಕೇರಳ ಕಾಂಗ್ರೆಸ್ (ಎಂ)ನ ಸಂಸದ ಜೋಸ್ ಕೆ.ಮಣಿ, ತನ್ನನ್ನು ಲೈಂಗಿಕವಾಗಿ ಶೋಷಿಸಿದ್ದಾರೆಂದು ಎಂದು ಆರೋಪಿಸಿರುವ ಸರಿತಾ, ಪ್ರಕರಣ ಮುಚ್ಚಿ ಹಾಕಲು ಕಾಂಗ್ರೆಸ್ ಸಚಿವ ಆಡೂರ್ ಪ್ರಕಾಶ್, ಮಾಜಿ ಕೇಂದ್ರ ಸಚಿವ ಕೆ.ಸಿ.ವೇಣುಗೋಪಾಲ್ ಹಾಗೂ ಕಾಂಗ್ರೆಸ್ ಶಾಸಕ ಎ.ಪಿ.ಅಬ್ದುಲ್ಲಾ ಕುಟ್ಟಿ ಎಲ್ಲರಿಗೂ ಭಾರಿ ಮೊತ್ತದ ಆಮಿಷ ಒಡ್ಡಿದ್ದರು ಎಂದಿದ್ದಾರೆ.

ಸರಿತಾ ಅವರ ವಕೀಲ ಫೆನ್ನಿ ಬಾಲಕೃಷ್ಣನ್ ಹೇಳಿಕೆ

ಸರಿತಾ ಅವರ ವಕೀಲ ಫೆನ್ನಿ ಬಾಲಕೃಷ್ಣನ್ ಹೇಳಿಕೆ

ಸೋಲಾರ್ ಪ್ರಕರಣದಲ್ಲಿ ವಂಚನೆಗೊಳಗಾದ ಹೂಡಿಕೆದಾರರು ದಾಖಲಿಸಿರುವ ಪ್ರಕರಣಗಳನ್ನು ಸಂಧಾನದ ಮೂಲಕ ಇತ್ಯರ್ಥಗೊಳಿಸಲು ಮುಖ್ಯಮಂತ್ರಿ ಉಮ್ಮನ್ ಚಾಂಡಿ ಯತ್ನಿಸುತ್ತಿದ್ದಾರೆ. ಸರಿತಾ ಎಸ್. ನಾಯರ್‌ಗೆ ಹಣಕಾಸು ನೆರವು ನೀಡಲು ಚಾಂಡಿ ನಿಷ್ಠಾವಂತರಾದ ಬೆನ್ನಿ ಬೆಹನಾನ್ ಹಾಗೂ ತಂಪನ್ನೂರ್ ರವಿ, ನಾಯರ್‌ರಿಂದ ಹಣದ ಆಮಿಷ ಒಡ್ಡಲಾಗಿದೆ ಎಂದಿದ್ದಾರೆ.

ಆರೋಪ ತಳ್ಳಿ ಹಾಕಿದ ಚಾಂಡಿ

ಆರೋಪ ತಳ್ಳಿ ಹಾಕಿದ ಚಾಂಡಿ

ಸೋಲಾರ್ ಹಗರಣದಲ್ಲಿ ವಂಚಿಸಲ್ಪಟ್ಟ ಹೂಡಿಕೆದಾರರೊಂದಿಗೆ ಪ್ರಕರಣವನ್ನು ಇತ್ಯರ್ಥಪಡಿಸಲು ತಾನು ಸರಿತಾಗೆ ನೆರವಾಗಿದ್ದರುವ ಆರೋಪವನ್ನು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಶುಕ್ರವಾರ ತಳ್ಳಿ ಹಾಕಿದ್ದಾರೆ.

''ಸರಿತಾ ಹಾಗೂ ಸಹ ಆರೋಪಿ ಬಿಜು ರಾಧಾಕೃಷ್ಣನ್ ಅವರಿಗೆ ಜೈಲು ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿರುವುದು ರಾಜ್ಯ ಸರಕಾರದ ನಿಲುವನ್ನು ಸಮರ್ಥಿಸಿದಂತಾಗಿದೆ. ತಾನು ಯಾವುದೇ ರೀತಿಯಲ್ಲೂ ಸೋಲಾರ್ ಹಗರಣದ ಆರೋಪಿಗೆ ನೆರವಾಗಿಲ್ಲ. ನ್ಯಾಯಾಲಯದ ತೀರ್ಪು ಕೂಡಾ ಮುಖ್ಯಮಂತ್ರಿ ವಿರುದ್ಧದ ಆರೋಪಗಳು ಆಧಾರರಹಿತ.

33 ಕೇಸುಗಳು ಬಾಕಿ ಇವೆ

33 ಕೇಸುಗಳು ಬಾಕಿ ಇವೆ

ಪಟ್ಟಣಮಿತ್ರದ ಬಾಬುರಾಜ್ ಎಂಬುವವನಿಂದ 1ಕೋಟಿ 19 ಲಕ್ಷ ರುಗೆ ಸೋಲಾರ್ ಪ್ಯಾನೆಲ್ ಖರೀದಿಸಿದ ಸರಿತಾ -ಬಿಜು ಅವರ ಅವ್ಯವಹಾರ ಸಾಬೀತಾದರೂ 33 ಕೇಸು ಬಾಕಿ ಇವೆ. 7 ಕೋಟಿ ಅವ್ಯವಹಾರ ಉಮ್ಮನ್ ಚಾಂಡಿ ಸರ್ಕಾರಕ್ಕೆ ಸವಾಲಾಗಿದೆ. ಶಾಲು ಮೆನನ್, ಉತ್ತರಾ ಸೇರಿದಂತೆ ಹಲವು ಸೆಲೆಬ್ರಿಟಿ, ರಾಜಕೀಯ ಮುಖಂಡರ ಹೆಸರುಗಳು ಕೇಳಿ ಬಂದಿವೆ. ಸಿಎಂ ಕಚೇರಿ ಕಂಪ್ಯೂಟರ್ ಕೂಡಾ ತನಿಖೆಗೊಳಪಟ್ಟಿದೆ.

English summary
Pattanamthitta magistrate court in Kerala has found Saritha Nair and partner Biju Radhakrishnan guilty for fraud in one case relating to the solar scam.However, Saritha will not need to go to prison as she has been given bail. She is threatening to expose the alleged role of Ministers and ruling UDF MLAs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X