ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಪತ್ರೊಡೆಗೂ ಸಿಕ್ತು ಸ್ಥಾನ

|
Google Oneindia Kannada News

ಕೆಸುವಿನ ಸೊಪ್ಪಿನ ಪತ್ರೊಡೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ, ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇದು ಫೇಮಸ್.

ಆಷಾಡ ಮಾಸ ಆರಂಭವಾಗುತ್ತಿದ್ದಂತೆಯೇ ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಪತ್ರೊಡೆ ಘಮ ಇದ್ದೇ ಇರುತ್ತದೆ. ಆಯುಷ್ ಸಚಿವಾಲಯ ಪ್ರಕಟಿಸಿರುವ ಆಯುಷ್ ವೈದ್ಯ ಪದ್ಧತಿಯ ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಪತ್ರೊಡೆ ಕೂಡ ಸ್ಥಾನ ಗಿಟ್ಟಿಕೊಂಡಿದೆ.

ಆಯುಷ್ ಸಚಿವಾಲಯ ಪ್ರಕಟಿಸಿರುವ ಆಯುಷ್ ವೈದ್ಯ ಪದ್ಧತಿಯ ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಪತ್ರೊಡೆ ಸ್ಥಾನ ಪಡೆದಿದೆ.

Patrode Identified As Traditional Food Recipe From AYUSH System Of Medicine From Union Ministry Of Ayush

ಆಯುಷ್ ಇಲಾಖೆ ಇಂತಹ 26 ಸಾಂಪ್ರದಾಯಿಕ ಖಾದ್ಯಗಳಿಗೆ ಸ್ಥಾನವನ್ನು ಪ್ರಕಟಿಸಿದೆ. ಇದು ಅದರ ವೆಬ್‌ಸೈಟ್‌ನಲ್ಲೂ ಇ-ನಮೂನೆಯಲ್ಲಿ ಲಭ್ಯವಿದೆ. ಫೋಟೊಗಳು, ವಿವರಣೆ, ಬೇಕಾದ ಪದಾರ್ಥಗಳು, ತಯಾರಿ ವಿಧಾನ, ಆರೋಗ್ಯಕ್ಕೆ ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಲಾಗಿದೆ.

ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಈ ಪತ್ರೊಡೆ ಪ್ರಸಿದ್ಧಿ ಪಡೆದಿದೆ. ಕೇರಳ, ಗುಜರಾತ್, ಹಿಮಾಚಲಪ್ರದೇಶ, ಗೋವಾದಲ್ಲೂ ತಯಾರಿಸಲಾಗುತ್ತದೆ.
ಕಬ್ಬಿಣಾಂಶ ಹೆಚ್ಚಿರುವ ಕೆಸವಿನ ಎಲೆಗಳು ದೇಹದಲ್ಲಿ ಹಿಮೋಗ್ಲೋಬಿನ್ ಅಂಶವನ್ನು ಅಧಿಕಗೊಳಿಸುತ್ತದೆ.

ದೇಹಕ್ಕೆ ಉಪಯುಕ್ತ ಅಂಶಗಳು ಇದರಲ್ಲಿದೆ, ಪೆನಾಲ್ಸ್, ಟ್ಯಾನಿನ್, ಫ್ಲೇವನಾಯ್ಡ್ , ಗೈಕೋಸೈಡ್ಸ್, ಸ್ಟೆರಾಲ್ಸ್ ಇತ್ಯಾದಿ ಉರಿಯೂತ ಉಪಶಮನಕ್ಕೂ ನೆರವಾಗುತ್ತದೆ. ವಿಟಮಿನ್ ಸಿ ಹಾಗೂ ಬೀಟಾ ಕೆರೊಟಿನ್ ಕೂಡ ಇದರಲ್ಲಿದೆ.

ಪತ್ರೊಡೆ ತಯಾರಿಸುವ ವಿಧಾನ

ಬೇಕಾಗುವ ಸಾಮಗ್ರಿಗಳು:ಕೆಸುವಿನ ಎಲೆ-15, ಅಕ್ಕಿ2 ಕಪ್, ಕೆಸುವಿನ ಎಲೆ-15, ಅಕ್ಕಿ- 2 ಕಪ್,ಉದ್ದಿನ ಬೇಳೆ-4 ಟೇಬಲ್ ಚಮಚ,ತೆಂಗಿನಕಾಯಿ ತುರಿ-1.5 ಕಪ್, ಕೊತ್ತಂಬರಿ-2 ಟೀ ಚಮಚ, ಜೀರಿಗೆ-2 ಟೀ ಚಮಚ, ಮೆಂತೆ- 1/2 ಟೀ ಚಮಚ, ಅರಿಶಿಣ-1/4 ಟೀ ಚಮಚ, ಬೆಲ್ಲ-1 ಕಪ್.ಲಿಂಬೆಹಣ್ಣಿನ ಗಾತ್ರದ ಹುಣಸೆಹುಳಿ, ಕೆಂಪು ಮೆಣಸು-10, ಬಾಳೆ ಎಲೆ- 4, ರುಚಿಗೆ ತಕ್ಕಷ್ಟು ಉಪ್ಪು.

ಒಗ್ಗರಣೆ:ಎಣ್ಣೆ -2 ಟೇಬಲ್ ಚಮಚ, ಸಾಸಿವೆ- 1 ಟೀ ಚಮಚ, ಉದ್ದಿನಬೇಳೆ-1 ಟೀ ಚಮಚ, ಕಡಲೆಬೇಳೆ-1 ಟೀ ಚಮಚ, ಕರಿಬೇವು, ತೆಂಗಿನ ತುರಿ 1/2 ಕಪ್, ಬೆಲ್ಲ- ಸ್ವಲ್ಪ.

ತಯಾರಿಸುವ ವಿಧಾನ: -ಒಂದು ಪಾತ್ರೆಯಲ್ಲಿ ಅಕ್ಕಿ, ಉದ್ದಿನ ಬೇಳೆ ಹಾಗೂ ಮೆಂತೆಯನ್ನು 3 -4 ಗಂಟೆಗಳ ಕಾಲ ನೆನೆ ಹಾಕಿ
- ನೆನೆ ಹಾಕಿದ ಅಕ್ಕಿ ಮತ್ತಿತರ ಸಾಮಗ್ರಿಯನ್ನು ತೊಳೆದು ಮಿಕ್ಸಿ ಜಾರಿಗೆ ಹಾಕಿ, ಅದಕ್ಕೆ ತೆಂಗಿನ ತುರಿ, ಕೊತ್ತಂಬರಿ, ಜೀರಿಗೆ, ಕೆಂಪು ಮೆಣಸು, ಅರಿಶಿಣ, ಹುಣಸೆಹುಳಿ, ಬೆಲ್ಲ ಹಾಗೂ ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಹಿಟ್ಟು ಗಟ್ಟಿಯಾಗಿರಲಿ ಜಾಸ್ತಿ ನೀರು ಸೇರಿಸಬೇಡಿ.
-ಈಗ ಕೆಸವಿನ ಎಲೆಗಳನ್ನು ಚೆನ್ನಾಗಿ ತೊಳೆದು ಹಿಂಭಾಗದ ದಂಟು ತೆಗೆದು ಸಣ್ಣಗೆ ಹಚ್ಚಿಕೊಳ್ಳಿ.
-ಸಣ್ಣಗೆ ಹಚ್ಚಿದ ಕೆಸವಿನ ಎಲೆಗಳನ್ನು ಈಗಾಗಲೇ ರುಬ್ಬಿಕೊಂಡಿರುವ ಮಸಾಲಕ್ಕೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
-ಬಾಳೆ ಎಲೆ ತೊಳೆದು ಬಟ್ಟೆಯಿಂದ ಒರೆಸಿ. ಸ್ಟೌವ್ ಆನ್ ಮಾಡಿ ಅದರ ಮೇಲೆ ಬೆಂಕಿಗೆ ತಾಗದಂತೆ ಬಾಳೆಎಲೆ ಹಿಡಿದು ಬಾಡಿಸಿ.
ಈಗ ಇದಕ್ಕೆ ಕೆಸವಿನ ಎಲೆ ಸೇರಿಸಿದ ಹಿಟ್ಟನ್ನು ಹಾಕಿ ಕೈಯಿಂದ ದಪ್ಪಗೆ ಹರಡಿ. ಈಗ ಬಾಳೆಎಲೆಯನ್ನು ಹಿಟ್ಟು ಹೊರಗೆ . ಬಾರದಂತೆ ನಿಧಾನವಾಗಿ ಮಡಚಿ. ಬೇಕಿದ್ದರೆ ಮಡಚಿದ ಬಳಿಕ ಒಂದು ದಾರವನ್ನು ಕಟ್ಟಿ. ಹೀಗೆ ಮಾಡೋದ್ರಿಂದ ಬಾಳೆಎಲೆ ಬಿಚ್ಚಿಕೊಳ್ಳುತ್ತೆ ಎಂಬ ಭಯ ಇರೋದಿಲ್ಲ.
-ಮಡಚಿದ ಬಾಳೆಎಲೆಗಳನ್ನು ಇಡ್ಲಿ ಪಾತ್ರೆಯಲ್ಲಿಟ್ಟು ಹಬೆಯಲ್ಲಿ 30 ನಿಮಿಷಗಳ ಕಾಲ ಬೇಯಿಸಿ.
-ಈಗ ಬಾಳೆಎಲೆ ಬಿಡಿಸಿ ಅದರೊಳಗಿರುವ ಪತ್ರೊಡೆ ಕಡುಬನ್ನು ನಿಧಾನಕ್ಕೆ ಹೊರತೆಗೆದು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.
-ಈಗ ಬಾಳೆಎಲೆ ಬಿಡಿಸಿ ಅದರೊಳಗಿರುವ ಪತ್ರೊಡೆ ಕಡುಬನ್ನು ನಿಧಾನಕ್ಕೆ ಹೊರತೆಗೆದು ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ.
-ಒಂದು ಪಾತ್ರೆಯನ್ನು ಸ್ಟೌವ್ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಸಾಸಿವೆ, ಕಡಲೆ ಬೇಳೆ, ಉದ್ದಿನ ಬೇಳೆ, ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿ. ಇದಕ್ಕೆ ಈಗಾಗಲೇ ಕತ್ತರಿಸಿರುವ ಕಡುಬಿನ ತುಂಡುಗಳು, ಕಾಯಿತುರಿ ಹಾಗೂ ಬೆಲ್ಲ ಸೇರಿಸಿ ಮಿಕ್ಸ್ ಮಾಡಿದ್ರೆ ಪತ್ರೊಡೆ ಸವಿಯಲು ರೆಡಿ

English summary
Patrode, a delicacy made with colocasia leaves that is popular in Malnad, coastal Karnataka and some other parts of the country, has been identified as one of the ‘traditional food recipes from the AYUSH system of medicine’ by the Union Ministry of AYUSH.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X