ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆತ ಸ್ಯಾಕ್ಸೋಫೋನ್ ನುಡಿಸುವಾಗಲೇ ಆಯ್ತು ಬ್ರೈನ್ ಆಪರೇಷನ್!

ಸ್ಯಾಕ್ಸೋಫೋನ್ ನುಡಿಸುತ್ತಲೇ ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾದ ವ್ಯಕ್ತಿ. ರೋಂಚೆಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದಲ್ಲಿರುವ ಡೆಲ್ ಮೊಂಟೆ ನ್ಯೂರೋ ಸೈನ್ಸ್ ಸಂಸ್ಥೆಯ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ.

|
Google Oneindia Kannada News

ನ್ಯೂಯಾರ್ಕ್, ಸೆಪ್ಟಂಬರ್ 4: ಇತ್ತೀಚೆಗಷ್ಟೇ, ಬೆಂಗಳೂರು ಮೂಲದ ರೋಗಿಯೊಬ್ಬ ಆಸ್ಪತ್ರೆಯೊಂದರ ಆಪರೇಷನ್ ಥಿಯೇಟರಿನಲ್ಲಿ ಗಿಟಾರ್ ನುಡಿಸುತ್ತಿದ್ದಾಗಲೇ ಆತನ ಮೆದುಳಿನಲ್ಲಿನ ಕೆಲವು ಲೋಪಗಳನ್ನು ಆಪರೇಷನ್ ಮೂಲಕ ವೈದ್ಯರು ಸರಿಪಡಿಸಿದ್ದ ಸುದ್ದಿ ಹರಿದಾಡಿತ್ತು. ಇದೀಗ, ಅಂಥದ್ದೇ ಮತ್ತೊಂದು ಸುದ್ದಿ ಸದ್ದು ಮಾಡಿದೆ.

ಡ್ಯಾನ್ ಫ್ಯಾಬಿಯೋ ಎಂಬ 27 ವರ್ಷದ ಸಂಗೀತ ಮಾಸ್ಟರ್ ಒಬ್ಬ ಆಪರೇಷನ್ ಥಿಯೇಟರಿನಲ್ಲೇ ಸ್ಯಾಕ್ಸೋಫೋನ್ ನುಡಿಸುತ್ತಾ ತನ್ನ ಮೆದುಳಿನಲ್ಲಿರುವ ಗಡ್ಡೆಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಪ್ರಕರಣ ನಡೆದಿದೆ.

Patient Plays Saxophone As Surgeons Remove Brain Tumour

ಎರಡು ವರ್ಷಗಳ ಹಿಂದೆಯೇ, ಆತನ ಪರೀಕ್ಷೆ ಮಾಡಿದ್ದ ರೋಂಚೆಸ್ಟರ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದಲ್ಲಿರುವ ಡೆಲ್ ಮೊಂಟೆ ನ್ಯೂರೋ ಸೈನ್ಸ್ ಸಂಸ್ಥೆಯ ಆಸ್ಪತ್ರೆಯ ವೈದ್ಯರು, ಶಸ್ತ್ರಚಿಕಿತ್ಸೆ ಅನಿವಾರ್ಯವೆಂದು ಹೇಳಿದ್ದರು.

ಆದರೆ, ಇದೊಂದು ಸಂಕೀರ್ಣವಾದ ಆಪರೇಷನ್ ಆಗಿತ್ತು. ಆ ಟ್ಯೂಮರ್ ತೆಗೆದ ಕೂಡಲೇ ಆಗುವ ಮೆದುಳಿನ ಒಂದು ಭಾಗದಿಂದ ಮತ್ತೊಂದು ಭಾಗದ ನಡುವೆ ಸಂಪರ್ಕ ನಿಂತು ಹೋಗುವ ಅಪಾಯವಿತ್ತು. ಹಾಗಾಗಿ, ಡ್ಯಾನ್ ಫ್ಯಾಬಿಯೋ ಅವರನ್ನು ಶಸ್ತ್ರಚಿಕಿತ್ಸೆ ನಡೆಯುವ ವೇಳೆಯಲ್ಲಿ ಚಟುವಟಿಕೆಯಿಂದ ಇರುವಂತೆ ಮಾಡಲು ವೈದ್ಯರು ನಿಶ್ಚಯಿಸಿದ್ದರು.

ಸುಮಾರು ದಿನಗಳ ಕಾಲ, ಡ್ಯಾನ್ ಅವರಿಗೆ ತಮ್ಮಿಷ್ಟದ ಸಂಗೀತ ವಾದ್ಯಗಳನ್ನು ನುಡಿಸಲು ಹೇಳಿ ಅವರು ಹಾಗೆ ಅದನ್ನು ನುಡಿಸುವಾಗ ಅವರ ಮೆದುಳನ್ನು ಸ್ಕ್ಯಾನ್ ಮಾಡಲಾಯಿತು. ಆಗ, ಸ್ಯಾಕ್ಸೋಫೋನ್ ನುಡಿಸಿದಾಗ ಮಾತ್ರ ಡ್ಯಾನ್ ಅವರ ಮೆದುಳು ಹೆಚ್ಚು ಸಕ್ರಿಯವಾಗುವುದನ್ನು ಗಮನಿಸಿದ ವೈದ್ಯರು, ಶಸ್ತ್ರ ಚಿಕಿತ್ಸೆ ವೇಳೆ ಅದೇ ವಾದ್ಯವನ್ನು ನುಡಿಸಲು ಸೂಚಿಸಿದ್ದರು.

ಸತತ ಅಧ್ಯಯನದ ನಂತರ, ಇತ್ತೀಚೆಗೆ ನಡೆದ ಶಸ್ತ್ರಚಿಕಿತ್ಸೆಯ ವೇಳೆ, ಹಾಸಿಗೆ ಮೇಲೆ ಮಲಗಿ ತನ್ನ ಎಡಕ್ಕೆ ತಿರುಗಿಕೊಂಡ ಡ್ಯಾನ್ ಅವರು, ಸ್ಯಾಕ್ಸೋಫೋನ್ ನುಡಿಸುತ್ತಿದ್ದರೆ, ಅತ್ತ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.

English summary
In an unusual surgery, a team of doctors in the US successfully removed a brain tumour from a patient while he played the saxophone in the operating room.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X