ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಡಾಕ್ಟರ್ ಸರಿಯಾಗಿ ಚಿಕಿತ್ಸೆ ನೀಡಿಲ್ಲ ಎನ್ನುವ ಕೋಪಕ್ಕೆ ರೋಗಿ ಮಾಡಿದ್ದೇನು?

|
Google Oneindia Kannada News

ಇಂದೋರ್​, ಜೂನ್ 7: ವೈದ್ಯರು ಚಿಕಿತ್ಸೆ ಸರಿಯಾಗಿ ನೀಡಿಲ್ಲ ಎನ್ನುವ ಕೋಪಕ್ಕೆ ರೋಗಿಯೊಬ್ಬ ವೈದ್ಯರ ಪತ್ನಿಯನ್ನೇ ಕೊಲೆ ಮಾಡಿರುವ ಘಟನೆ ಇಂದೋರ್‌ನಲ್ಲಿ ನಡೆದಿದೆ.

ಇಂದೋರ್​ನ ಮಾಲ್ವಾ ಮಿಲ್ಸ್​ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಈ ಘಟನೆ ನಡೆದಿದೆ. ಚರ್ಮರೋಗ ಸಮಸ್ಯೆಯಿಂದ ಬಳಲುತ್ತಿದ್ದ ಆರೋಪಿ ರಫೀಕ್​ ರಶೀದ್​ ಎಂಬಾತ ಡಾ. ರಾಮಕೃಷ್ಣ ವರ್ಮಾ ಅವರ ಕ್ಲಿನಿಕ್​ನಲ್ಲಿ ಚಿಕಿತ್ಸೆ ಪಡೆದಿದ್ದ.

ಮನೆ ಮುಂದೆ ಶೌಚ ಮಾಡಬೇಡಿ ಎಂದಿದ್ದಕ್ಕೆ ಮಾಲೀಕನ ಕೊಲೆ ಮನೆ ಮುಂದೆ ಶೌಚ ಮಾಡಬೇಡಿ ಎಂದಿದ್ದಕ್ಕೆ ಮಾಲೀಕನ ಕೊಲೆ

6 ತಿಂಗಳು ನಿರಂತರವಾಗಿ ಚಿಕಿತ್ಸೆ ಪಡೆದರೂ ಚರ್ಮರೋಗ ವಾಸಿಯಾಗಿರಲಿಲ್ಲ. ಈ ಕುರಿತು ವೈದ್ಯರೊಂದಿಗೆ ಮಾತನಾಡಲು ಆರೋಪಿ ಕ್ಲಿನಿಕ್​ಗೆ ತೆರಳಿದ್ದ. ಈ ವೇಳೆ ವೈದ್ಯರು ಕ್ಲಿನಿಕ್​ನಲ್ಲಿ ಇರಲಿಲ್ಲ. ಡಾಕ್ಟರ್ ಆಸ್ಪತ್ರೆಯಲ್ಲಿ ಇಲ್ಲ ಎಂದಿದ್ದಾರೆ, ಅವರಿಬ್ಬರ ಮಧ್ಯೆ ವಾಗ್ವಾದ ನಡೆದು ಕೊನೆಗೆ ವ್ಯಕ್ತಿ ಆಕೆಗೆ ಚಾಕುವಿನಿಂದ ತಿವಿದು ಕೊಲೆ ಮಾಡಿದ್ದಾನೆ.

Patient kills doctors wife in Indore

ಬಳಿಕ ಆಕೆಯ ಮಗನಿಗೂ ಚಾಕುವಿಂದ ಇರಿದಿದ್ದಾನೆ, ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ನೆರೆಹೊರೆಯವರು ಕರೆತಂದಿದ್ದಾರೆ. ದಾರಿ ಮಧ್ಯದಲ್ಲೇ ತಾಯಿ ಮೃತಪಟ್ಟರೆ, ಪುತ್ರನಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಈ ವೇಳೆ ಸಾರ್ವಜನಿಕರು ಆರೋಪಿಯನ್ನು ರೆಡ್​ ಹ್ಯಾಂಡ್​ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.ಲತಾ ಮತ್ತು ಅವರ ಪುತ್ರ ಅಭಿಷೇಕ್​ ಕೂಗಾಟ ಕೇಳಿ ಸಾರ್ವಜನಿಕರ ಅವರ ರಕ್ಷಣೆಗೆ ಧಾವಿಸಿದ್ದಾರೆ.

ಆರೋಪಿ ರಫೀಕ್​ 2015ರಲ್ಲಿ ಕೊಲೆ ಪ್ರಕರಣವೊಂದರಲ್ಲಿ ಜೈಲು ಸೇರಿದ್ದ. ಆ ನಂತರ ಆತ ಜಾಮೀನಿನ ಮೇಲೆ ಹೊರಬಂದಿದ್ದ ಎನ್ನುವ ವಿಷಯ ಬಹಿರಂಗವಾಗಿದೆ.

English summary
Patient killed doctor's wife because of not satisfied with doctors treatment .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X