ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್ ಕೋಟ್ ದಾಳಿ: ಮೌಲಾನಾ ಮಸೂದ್ ವಿರುದ್ಧ ಚಾರ್ಜ್ ಶೀಟ್

ಪಾಕಿಸ್ತಾನ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ನನ್ನು ಪ್ರಮುಖ ಆರೋಪಿ ಎಂದು ಎನ್ ಐಎ ತನ್ನ ಚಾರ್ಜ್ ಶೀಟ್ ನಲ್ಲಿ ದಾಖಲಿಸಿದೆ.

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 19: ಪಂಜಾಬಿನ ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪಾಕಿಸ್ತಾನ ಜೈಷ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ ನನ್ನು ಪ್ರಮುಖ ಆರೋಪಿ ಎಂದು ಎನ್ ಐಎ ತನ್ನ ಚಾರ್ಜ್ ಶೀಟ್ ನಲ್ಲಿ ದಾಖಲಿಸಿದೆ.

ಮೌಲಾನಾ ಮಸೂದ್‌ ಅಜರ್ ಆರಂಭಿಸಿದ ಜೈಷ್-ಏ-ಮೊಹಮದ್ ಉಗ್ರ ಸಂಘಟನೆ 2001ರಲ್ಲಿ ದೆಹಲಿಯಲ್ಲಿ ಸಂಸತ್ ಭವನದ ಮೇಲೆ ದಾಳಿ ನಡೆದಿದ ಆರೋಪ ಕೂಡಾ ಹೊಂದಿದೆ. [ಮೌಲಾನಾ ಮಸೂದ್‌ ಅಜರ್ ಯಾರು?]

Pathankot: NIA files chargesheet, names Maulana Masood Azhar as prime accused

ಮಸೂದ್ ಅಜರ್ ಸೇರಿದಂತೆ ಐವರ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಚಾರ್ಜ್ ಶೀಟ್ ಹಾಕಿದೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್, ಶಹೀದ್ ಲತಿಫ್ ಹೆಸರು ಕೂಡಾ ದೋಷಾರೋಪಣ ಪಟ್ಟಿಯಲ್ಲಿದೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ ಸೇರಿದಂತೆ ಅನೇಕ ಸೆಕ್ಷನ್ ಗಳಡಿಯಲ್ಲಿ ಇವರ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ನಾಸೀರ್ ಹುಸೇನ್, ಹಫೀಜ್ ಅಬು ಬಾಕರ್, ಉಮರ್ ಫರೂಕ್ ಹಾಗೂ ಅಬ್ದುಲ್ ಖಯ್ಯಾಮ್ ಅವರು ಪಠಾಣ್ ಕೋಟ್ ದಾಳಿ ನಡೆಸಿದ ಆರೋಪವನ್ನು ಹೊಂದಿದ್ದಾರೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

English summary
The National Investigation Agency on Monday filed a chargesheet in connection with the Pathankot attack. The NIA has named five persons including Jaish-e-Mohammad chief, Maulana Masood Azhar who has been named as the prime accused.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X