ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೆ.ಕರ್ನಲ್ ನಿರಂಜನ್ ಹೆಸರು ಶೌರ್ಯ ಪ್ರಶಸ್ತಿಗೆ ಶಿಫಾರಸು!

By Mahesh
|
Google Oneindia Kannada News

ನವದೆಹಲಿ, ಏಪ್ರಿಲ್ 24: ಎನ್​ಎಸ್​ಜಿ ಪಡೆಯ ಬಾಂಬ್ ನಿಷ್ಕ್ರಿಯ ದಳದ ಕಮಾಂಡಿಂಗ್ ಆಫಿಸರ್ ಆಗಿದ್ದ ಹುತಾತ್ಮ ಲೆಫ್ಟಿನಂಟ್ ಕರ್ನಲ್ ನಿರಂಜನ್ ಹಾಗೂ ಮತ್ತಿಬ್ಬರು ಅಧಿಕಾರಿಗಳನ್ನು ಮಿಲಿಟರಿ 'ಶೌರ್ಯ ಪ್ರಶಸ್ತಿ' ಗೆ ಶಿಫಾರಸು ಮಾಡಲಾಗಿದೆ.

ಪಠಾಣ್​ಕೋಟ್ ವಾಯುನೆಲೆಯಲ್ಲಿ ಉಗ್ರರೊಂದಿಗೆ ದಿಟ್ಟತನದಿಂದ ಹೋರಾಡಿದ್ದ ಬೆಂಗಳೂರು ಮೂಲದ ಲೆ. ಕರ್ನಲ್ ನಿರಂಜನ್ ಅವರು ವೀರಮರಣವನ್ನಪ್ಪಿದ್ದರು. ನಿರಂಜನ್ ಅವರು ಗುಂಡಿನ ದಾಳಿಗೆ ಸಿಲುಕಿ ಮೃತನಾದ ಯೋಧನೊಬ್ಬನ ಶವವನ್ನು ತಪಾಸಣೆಗೆ ಒಳಪಡಿಸುವ ಸಂದರ್ಭದಲ್ಲಿ ಗ್ರೆನೇಡ್ ಸ್ಪೋಟಗೊಂಡು ಹುತಾತ್ಮರಾಗಿದ್ದರು.[ಎಂಥಾ ಘೋರ ವಿಧಿ ಲಿಖಿತ,ನಿರಂಜನ್ ಸಾವಿನ ಆಘಾತ]

ಎನ್​ಎಸ್​ಜಿ ಪಡೆಯ ಬಾಂಬ್ ನಿಷ್ಕ್ರಿಯ ದಳದ ಕಮಾಂಡಿಂಗ್ ಆಫಿಸರ್ ನಿರಂಜನ್ ಜೊತೆಗೆ ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ (ಎನ್ ಎಸ್ ಜಿ) ಪಡೆಯ ನಾಯಿ 'ರಾಕೆಟ್' ಕೂಡಾ ಮೊದಲ ಬಾರಿಗೆ ಶೌರ್ಯ ಪ್ರಶಸ್ತಿಗೆ ನಾಮಾಂಕಿತಗೊಂಡಿದೆ. ಮುಂದಿನ ಸ್ವಾತಂತ್ರ್ಯ ದಿನಾಚರಣೆಯ ದಿನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.[ಪಠಾಣ್ ಕೋಟ್ ಉಗ್ರರ ದಾಳಿ ಟೈಮ್ ಲೈನ್]

Lt Col Niranjan to get gallantry award

ಬೆಂಗಳೂರಿನ ಬಿಇಎಲ್ ನ ಉದ್ಯೋಗಿ ಕೇರಳ ಮೂಲದ ಶಿವರಂಜನ್ ಇ.ಕೆ ಅವರ ಪುತ್ರ ನಿರಂಜನ್ ಕುಮಾರ್ ಅವರು ಬೆಂಗಳೂರಿನ ಶಾಲೆಯಲ್ಲಿ ಓದಿದರು. ನಂತರ ಇಸ್ಲಾಮಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಓದಿದರು. [ವೀರಯೋಧ ಸಂದೀಪ್ ಅವರಿಗೆ ಅಂತಿಮ ನಮನ]

1999 ರಿಂದ 2002ರ ತನಕ ಈ ಕಾಲೇಜಿನಲ್ಲಿ ಓದಿದ ಬಳಿಕ ಅಂತಿಮ ವರ್ಷ ಎಂವಿ ಜಯರಾಮ್ ಕಾಲೇಜಿಗೆ ಶಿಫ್ಟ್ ಆದರು. ಇಂಜಿನಿಯರಿಂಗ್ ಮುಗಿಯುವಷ್ಟರಲ್ಲೇ ಭಾರತೀಯ ಸೇನೆ ಬಗ್ಗೆ ಆಸಕ್ತಿ ಬೆಳೆಸಿಕೊಂಡ ನಿರಂಜನ್ ಅವರು ನಿರಂಜನ್ ಅವರು ಬಾಂಬ್ ನಿಷ್ಕ್ರಿಯ ದಳದ ಕಮಾಂಡಿಂಗ್ ಆಫೀಸರ್ ಆಗಿ ಹಲವಾರು ಯಶಸ್ವಿ ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ್ದರು.

ಎರಡೂವರೆ ವರ್ಷ ವಯಸ್ಸಿನ ಬೆಲ್ಜಿಯನ್ ಮಲಿನೊಯಿಸ್ ತಳಿಯ ನಾಯಿ, ತನ್ನ ಮಾರ್ಗದರ್ಶಿ ನೀಡಿದ ನಿರ್ದೇಶನದಂತೆ ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿದೆ. 1984ರಲ್ಲಿ ಸ್ಥಾಪನೆಯಾದ ಎನ್ ಎಸ್ ಜಿ ಪಡೆಯಲ್ಲಿ ಇದೇ ಮೊದಲ ಬಾರಿಗೆ ಕೆ 9 ಗುಂಪಿನಲ್ಲಿರುವ ಈ ಶ್ವಾನಕ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಲೆ. ಕರ್ನಲ್ ನಿರಂಜನ್ ಅವರಿಗೆ ಅಂತಿಮ ನಮನ ಸಲ್ಲಿಸಿ ಸ್ಮರಿಸಿಕೊಂಡ ಬೆಂಗಳೂರಿನ ಪರಿಚಯಸ್ಥರು:


(ಪಿಟಿಐ)

English summary
In probably a first, the elite commando force Nation Security Guard (NSG) has recommended its dog ‘Rocket’ along with slain officer Lt Col Niranjan and two others for military gallantry medals for their role in eliminating terrorists who attacked the Pathankot air base earlier this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X