ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ವೈರಸ್‌ಗೆ ಪತಂಜಲಿಯಿಂದ ಆಯುರ್ವೇದ ಔಷಧ ಬಿಡುಗಡೆ

|
Google Oneindia Kannada News

ಡೆಹ್ರಾಡೂನ್ , ಜೂನ್ 23: ಪತಂಜಲಿಯು ಕೊರೊನಾ ವೈರಸ್ ವಿರುದ್ಧ ಹೋರಾಡಲು 'ಕೊರೊನಿಲ್' ಎನ್ನುವ ಔಷಧವನ್ನು ಬಿಡುಗಡೆ ಮಾಡಿದೆ.

Recommended Video

ಗ್ರಹಣದ ದಿನ ಕಾವೇರಿ ನದಿಯಲ್ಲಿ ಮಿಂದು ತಂದೆಯನ್ನು ಸ್ಮರಿಸಿದ ಡಿಕೆಶಿ | DK ShivaKumar | Oneindia Kannada

ವಿಶ್ವದಾದ್ಯಂತ ಕೊರೊನಾ ವೈರಸ್ ಅಟ್ಟಹಾಸ ಮುಂದುವರೆದಿದ್ದು, ಕೊರೊನಾ ವೈರಸ್ ಗೆ ವಿಶ್ವದ ಹಲವು ರಾಷ್ಟ್ರಗಳು ಔಷಧ ಕಂಡುಹಿಡಿಯಲು ಪ್ರಯತ್ನ ನಡೆಸುತ್ತಿರುವ ಹೊತ್ತಲ್ಲೇ ಪತಂಜಲಿ ಯೋಗಪೀಠ ಮೊದಲ ಆಯುರ್ವೇದಿಕ್ ಕೊರೊನಾ ಔಷಧ ಕೊರೊನಿಲ್ ನ್ನು ಇಂದು ಬಿಡುಗಡೆ ಮಾಡಿದೆ

"ಕೊರೊನಾ ಸೋಂಕಿನಿಂದ ಗುಣಮುಖವಾಗಲು ಆಯುರ್ವೇದ ಕಾರಣವಾಯಿತು"

ಈ ಕುರಿತು ಮಾಹಿತಿ ನೀಡಿರುವ ಪತಂಜಲಿ ಆಯುರ್ವೇದ ಮುಖ್ಯಸ್ಥ ಆಚಾರ್ಯ ಬಾಲಕೃಷ್ಣ, ಕೊರೊನಾ ಸೋಂಕಿಗೆ ಮೊದಲ ಔಷಧ ಕೊರೊನಿಲ್ ಅನ್ನು ಸಂಪೂರ್ಣ ವೈಜ್ಞಾನಿಕ ದಾಖಲೆಗಳೊಂದಿಗೆ ಇಂದು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದ್ದಾರೆ.

Coronil Patanjali Medicine: Patanjali Launches Ayurvedic Medicine To Treat Coronavirus Infection Today

ಕೊರೊನಾ ಸೋಂಕು ನಿಯಂತ್ರಣ ಕ್ಲಿನಿಕಲ್ ಪ್ರಯೋಗದ ಫಲಿತಾಂಶಗಳು ಸಕಾರಾತ್ಮಕ ಬಂದಿದೆ. ಕೊರೊನಿಲ್ ಔಷಧ ಸಂಪೂರ್ಣವಾಗಿ ಕ್ಲಿನಿಕಲ್ ಸಂಶೋಧನೆಯ ಆಧಾರವಾಗಿಟ್ಟುಕೊಂಡು ತಯಾರಿಸಲಾಗಿದೆ ಎಂದು ಪತಂಜಲಿ ಆಯುರ್ವೇದ ಹೇಳಿದೆ.

ಕೊವಿಡ್ 19 ರೋಗದ ವಿರುದ್ಧ ಹೋರಾಡಲು ಮೊದಲ ಭಾರಿಗೆ ಆಯುರ್ವೇದದಲ್ಲಿ ಔಷಧಿ ಕಂಡುಹಿಡಿದಿದ್ದೇವೆ. ಮೂರು ದಿನಗಳಲ್ಲಿ ಶೇ.69ರಷ್ಟು ಗುಣಮುಖರಾಗುತ್ತಾರೆ. 7 ದಿನಗಳಲ್ಲಿ ಶೇ.100ರಷ್ಟು ರೋಗಿಗಳು ಗುಣಮುಖರಾಗಲಿದ್ದಾರೆ ಎಂದು ಯೋಗ ಗುರು ಬಾಬಾ ರಾಮ್‌ದೇವ್ ತಿಳಿಸಿದ್ದಾರೆ.

ಈ ಔಷಧದಿಂದ 1 ಸಾವಿರ ರೋಗಿಗಳನ್ನು 5-14 ದಿನಗಳಲ್ಲಿ ಗುಣಮುಖರನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ.

English summary
Yoga guru Ramdev-run Patanjali Ayurved on Tuesday launched Coronil, an Ayurvedic medicine, to help treat the novel coronavirus or covid-19 infection on Tuesday at Patanjali Yogpeeth in Haridwar, Uttarakhand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X