ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

543 ಸಂಸದೀಯ ಕ್ಷೇತ್ರಗಳಲ್ಲಿ ಪಾಸ್ ಪೋರ್ಟ್ ಸೇವಾ ಕೇಂದ್ರ

|
Google Oneindia Kannada News

ನ್ಯೂಯಾರ್ಕ್/ ನವದೆಹಲಿ, ನವೆಂಬರ್ 23: ಪಾಸ್ಪೋರ್ಟ್ ಪಡೆಯಲು ಯೋಚಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇಲ್ಲಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪಾಸ್ ಪೋರ್ಟ್ ಸೇವಾ ಕೇಂದ್ರಗಳನ್ನು ವಿಸ್ತರಿಸುತ್ತಿದೆ. ಭಾರತದ ಎಲ್ಲಾ 543 ಸಂಸದೀಯ ಕ್ಷೇತ್ರಗಳಲ್ಲಿ ಮಾರ್ಚ್ 2019 ರೊಳಗೆ ಪಾಸ್ಪೋರ್ಟ್ ಸೇವಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ ಎಂದು ವಿದೇಶಾಂಗ ಸಚಿವ ವಿ.ಕೆ. ಸಿಂಗ್ ಅವರು ಹೇಳಿದ್ದಾರೆ.

ಚಿತ್ರದುರ್ಗಕ್ಕೆ ಸಿಕ್ಕಿತು ಪಾಸ್‌ಪೋರ್ಟ್ ಸೇವಾಕೇಂದ್ರ ಚಿತ್ರದುರ್ಗಕ್ಕೆ ಸಿಕ್ಕಿತು ಪಾಸ್‌ಪೋರ್ಟ್ ಸೇವಾಕೇಂದ್ರ

ಪಾಸ್‌ಪೋರ್ಟ್ ಪಡೆಯುವ ಪ್ರಕ್ರಿಯೆಯನ್ನು ಸರಳ ಹಾಗೂ ಸುಲಭಗೊಳಿಸಲು ಕೇಂದ್ರ ಸರಕಾರ ನಿರ್ಧರಿಸಿದೆ ಎಂದು
ನ್ಯೂಯಾರ್ಕ್‌ನ ಭಾರತೀಯ ದೂತಾವಾಸದಲ್ಲಿ 'ಪಾಸ್‌ಪೋರ್ಟ್ ಸೇವಾ' ಕಾರ್ಯಕ್ರಮದಲ್ಲಿ ಹೇಳಿದರು.

ಪಾಸ್ಪೋರ್ಟ್ ಸೇವಾ ಆ್ಯಪ್ ಸೂಪರ್ ಹಿಟ್, 2 ದಿನದಲ್ಲಿ 10 ಲಕ್ಷ ಡೌನ್ಲೋಡ್ ಪಾಸ್ಪೋರ್ಟ್ ಸೇವಾ ಆ್ಯಪ್ ಸೂಪರ್ ಹಿಟ್, 2 ದಿನದಲ್ಲಿ 10 ಲಕ್ಷ ಡೌನ್ಲೋಡ್

ದೇಶದ ಪ್ರತಿಯೊಂದು ಪ್ರಧಾನ ಅಂಚೆಕಚೇರಿಯಲ್ಲೂ ಪಾಸ್‌ಪೋರ್ಟ್ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ನಾಗರಿಕರು ಪಾಸ್‌ಪೋರ್ಟ್ ಪಡೆಯಲು 50-60 ಕಿ.ಮೀ. ದೂರ ಪ್ರಯಾಣಿಸುವ ತೊಂದರೆ ಇಲ್ಲವಾಗುತ್ತದೆ . 2017ರಲ್ಲಿ ಪಾಸ್‌ಪೋರ್ಟ್ ಸಂಬಂಧಿತ ಕಾರ್ಯಗಳಲ್ಲಿ ಶೇ.19ರಷ್ಟು ಬೆಳವಣಿಗೆಯಾಗಿದೆ ಎಂದು ಹೇಳಿದರು.

ಪಾಸ್‌ಪೋರ್ಟ್: ಇನ್ನುಮುಂದೆ ಪೊಲೀಸ್ ಪರಿಶೀಲನೆ ಅಗತ್ಯ ಇಲ್ಲ ಪಾಸ್‌ಪೋರ್ಟ್: ಇನ್ನುಮುಂದೆ ಪೊಲೀಸ್ ಪರಿಶೀಲನೆ ಅಗತ್ಯ ಇಲ್ಲ

Passport Seva Kendras to come up in all Lok Sabha constituencies

ಪಾಸ್‌ಪೋರ್ಟ್ ಸೇವಾ ವ್ಯವಸ್ಥೆಯ ಮೂಲಕ 6 ಕೋಟಿಗೂ ಹೆಚ್ಚಿನ ಪಾಸ್‌ಪೋಟ್‌ಗಳನ್ನು ನೀಡಲಾಗಿದೆ ಎಂದರು. ಭಾರತದಲ್ಲಿ ಸದ್ಯ 365ಕ್ಕೂ ಅಧಿಕ ಪಾಸ್ ಪೋರ್ಟ್ ಸೇವಾ ಕೇಂದ್ರಗಳು ಸಕ್ರಿಯವಾಗಿವೆ.

English summary
The government plans to open a 'Passport Seva Kendra' in each of the 543 parliamentary constituencies across the country by March next year to ensure convenient passport services to its people, minister of state for external affairs VK Singh said in New York.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X