ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇನ್ಮುಂದೆ ಆನ್ಲೈನ್ ನಲ್ಲೇ ಪಾಸ್ ಪೋರ್ಟ್ ವೇರಿಫಿಕೇಷನ್

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಆಗಸ್ಟ್ 22: ಪಾಸ್ ಪೋರ್ಟ್ ವೆರಿಫಿಕೇಷನ್ ಈಗ ಆನ್ ಲೈನ್ ಮೂಲಕವೇ ನಡೆಯಲಿದ್ದು, 10 ದಿನದೊಳಗೆ ಪಾಸ್ ಪೋರ್ಟ್ ಕೈ ಸೇರುವ ವ್ಯವಸ್ಥೆ ಜಾರಿಗೆ ಬರಲಿದೆ.

ಪಾಸ್ ಪೋರ್ಟ್ ಗಾಗಿ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ವ್ಯವಸ್ಥೆಪಾಸ್ ಪೋರ್ಟ್ ಗಾಗಿ ಅಂಚೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ವ್ಯವಸ್ಥೆ

ಕರ್ನಾಟಕದಲ್ಲಿ ಈಗಾಗಲೇ ಈ ವ್ಯವಸ್ಥೆ ಜಾರಿಯಲ್ಲಿದ್ದು, ದೇಶದೆಲ್ಲೆಡೆ ಶೀಘ್ರದಲ್ಲೇ ಜಾರಿಗೆ ಬರಲಿದೆ. ರಾಷ್ಟ್ರೀಯ ಕ್ರಿಮಿನಲ್ ಹಾಗೂ ಕ್ರೈಂ ಡೇಟಾ ಬೇಸ್ ಜತೆಗೆ ಈ ಪ್ರಕ್ರಿಯೆಯನ್ನು ಜೋಡಿಸಲಾಗುತ್ತಿದ್ದು, ಪಾಸ್ ಪೋರ್ಟ್ ಪರಿಶೀಲನೆ, ವಿತರಣೆ ಸರಳ, ಸುಲಭವಾಗಲಿದೆ.

Passport: Police verification to be online now

ರಾಷ್ಟ್ರೀಯ ಡಿಜಿಟಲ್ ಪೊಲೀಸ್ ಪೋರ್ಟಲ್ ಜತೆಗೆ ರಾಜ್ಯಗಳ ಪೊಲೀಸ್ ನಾಗರಿಕ ಪೋರ್ಟಲ್ ಗಳನ್ನು ಜೋಡಣೆಯಾಗಿದ್ದು, ಇದರಿಂದ ಪಾಸ್ ಪೋರ್ಟ್ ಸೇರಿದಂತೆ ನಾಗರಿಕರ ಹಿನ್ನಲೆ ಪತ್ತೆ, ಪರಿಶೀಲನೆ ಕಾರ್ಯ ಸುಲಭವಾಗಿ ಆನ್ ಲೈನ್ ನಲ್ಲೇ ಆಗಲಿದೆ. ಎಲ್ಲಾ ಕ್ರೈಂ ಅಂಕಿ ಅಂಶಗಳು ಸುಲಭವಾಗಿ ದಕ್ಕಲಿದೆ.

ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?ಪಾಸ್ ಪೋರ್ಟ್ ನವೀಕರಣ ಮಾಡಿಕೊಳ್ಳುವುದು ಹೇಗೆ?

ಆನ್ ಲೈನ್ ಮೂಲಕ ವೆರಿಫಿಕೇಶನ್ ಮಾಡಲು ಮುಂದಾಗಿದ್ದು, ವಿದೇಶಾಂಗ ಸಚಿವಾಲಯ ಅಭಿವೃದ್ಧಿಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮೂಲಕ ಅಭ್ಯರ್ಥಿಯ ವಿವರಗಳನ್ನು ಆನ್ ಲೈನ್ ಗೆ ಸೇರಿಸಲಾಗುತ್ತದೆ.

ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?ಆನ್ಲೈನ್ ನಲ್ಲಿ ಪಾಸ್ ಪೋರ್ಟ್ ಗಾಗಿ ಅರ್ಜಿ ಹಾಕುವುದು ಹೇಗೆ?

ಅರ್ಜಿ ಸಲ್ಲಿಕೆ ವೇಳೆ ನೀವು ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತು ಯಾವುದೇ ಕ್ರಿಮಿನಲ್ ಕೇಸು ಬಾಕಿ ಇಲ್ಲ ಎಂದು ಬರೆದು ಅಫಿಡವಿಟ್ ನೀಡಬೇಕಾಗುತ್ತದೆ. ನಿಮ್ಮ ಆಧಾರ್ ಸಂಖ್ಯೆ ಆನ್ ಲೈನ್ ನಲ್ಲಿ ಸರಿಯಾಗಿ ನಮೂದಾಗಿದ್ದರೆ ಪೊಲೀಸರ ಪರಿಶೀಲನೆ ನಂತರ ಅಫಿಡವಿಟ್ ನ್ನು ಆದ್ಯತೆ ಮೇರೆಗೆ ಪರಿಶೀಲನೆ ಮಾಡಲಾಗುತ್ತದೆ.

ಎಂಥಾ ಅರ್ಜಿಯಾದರೂ 21 ದಿನದೊಳಗೆ ಎಲ್ಲಾ ರೀತಿ ವೆರಿಫಿಕೇಷನ್ ಮುಗಿಸಿರಬೇಕಾಗುತ್ತದೆ. ಆನ್ಲೈನ್ ಮೂಲಕವೇ ದೂರು ಕೂಡಾ ದಾಖಲಿಸಬಹುದು. ಇನ್ಮುಂದೆ ಇ ಕೋರ್ಟ್, ಇ ಬಂದಿಖಾನೆ ತಂತ್ರಾಂಶಗಳನ್ನು ಹೊರ ತರಲಾಗುತ್ತಿದ್ದು, ಪೊಲೀಸರಿಗೆ ಮಾಹಿತಿ ಕಣಜ ಸಿಗಲಿದೆ.

English summary
The delays in issuing passports due to lack of timely verification by the police will have a solution soon. The police verification would soon be done through an online process.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X