ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲ್ವೆ ಟಿಕೆಟ್ ಮೇಲೆ ಶೇ 20ರ ರಿಯಾಯಿತಿ: ಯಾರಿಗೆ ಸಿಗಲಿದೆ ಈ ಆಫರ್?

|
Google Oneindia Kannada News

ಚೆನ್ನೈ, ನವೆಂಬರ್ 12: ರಾಜಧಾನಿ, ಶತಾಬ್ದಿ ಮತ್ತು ದುರಂತೋ ಸ್ಪೆಷಲ್‌ನಂತಹ ಪ್ರಮುಖ ರೈಲುಗಳಲ್ಲಿ ಪ್ರಯಾಣಿಕರಿಗೆ ಟಿಕೆಟ್‌ನ ಮೂಲ ದರದ ಮೇಲೆ ಶೇ 20ರವರೆಗೂ ರಿಯಾಯಿತಿ ಸಿಗಲಿದೆ ಎಂದು ಭಾರತೀಯ ರೈಲ್ವೆ ಪ್ರಕಟಿಸಿದೆ. ವಿಮಾನಯಾನ ಸಂಸ್ಥೆಗಳ ರೀತಿಯಲ್ಲಿಯೇ ರೈಲ್ವೇ ಕೂಡ ಟಿಕೆಟ್ ದರದ ಮೇಲಿನ ರಿಯಾಯಿತಿ ನೀಡಲು ಮುಂದಾಗಿದೆ. ಇದು ಸೀಟುಗಳ ಭರ್ತಿಯಾಗುವಿಕೆಯ ಮಟ್ಟವನ್ನು ಅವಲಂಬಿಸಿರುತ್ತದೆ.

ಲಾಕ್‌ಡೌನ್ ಸಂದರ್ಭದಲ್ಲಿ ಪ್ರೀಮಿಯರ್ ಟ್ರೈನುಗಳಲ್ಲಿನ ಓಡಾಟಕ್ಕೆ ಜನರು ಹೆಚ್ಚಿನ ಆದ್ಯತೆ ನೀಡುವ ಉದ್ದೇಶದೊಂದಿಗೆ ರೈಲ್ವೇಸ್ ಈ ರಿಯಾಯಿತಿ ಯೋಜನೆಯನ್ನು ಆರಂಭಿಸಿದೆ.

ರಾಜ್ಯದ 13 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ: ಎಲ್ಲೆಲ್ಲಿ ಬೆಲೆ ಏರಿಕೆ?ರಾಜ್ಯದ 13 ರೈಲ್ವೆ ನಿಲ್ದಾಣಗಳಲ್ಲಿ ಪ್ಲಾಟ್‌ಫಾರ್ಮ್ ಟಿಕೆಟ್ ದರ ಹೆಚ್ಚಳ: ಎಲ್ಲೆಲ್ಲಿ ಬೆಲೆ ಏರಿಕೆ?

ರೈಲ್ವೆ ಟಿಕೆಟ್ ಕಾಯ್ದಿರಿಸುವ ಸಂದರ್ಭದಲ್ಲಿ ಶೇ 60ರಷ್ಟು ಸೀಟುಗಳು ಭರ್ತಿಯಾಗಿದ್ದರೆ ಪ್ರಯಾಣಿಕರಿಗೆ ಮೂಲ ದರದ ಮೇಲೆ ಶೇ 20ರಷ್ಟು ರಿಯಾಯಿತಿಯ ಆಫರ್ ಸಿಗಲಿದೆ. ಹಾಗೆಯೇ ಶೇ 70-80ರಷ್ಟು ಸೀಟುಗಳು ಭರ್ತಿಯಾಗಿದ್ದರೆ ಪ್ರಯಾಣಿಕರು ಶೇ 10ರಷ್ಟು ರಿಯಾಯಿತಿ ಪಡೆಯಲಿದ್ದಾರೆ. ಶೇ 80ಕ್ಕಿಂತ ಹೆಚ್ಚಿನ ಸೀಟುಗಳು ಭರ್ತಿಯಾಗಿದ್ದರೆ ಯಾವುದೇ ರಿಯಾಯಿತಿಯ ಆಫರ್ ಸಿಗುವುದಿಲ್ಲ.

 Passengers Can Avail Up To 20 Percent Discount On Tickets For Premier Trains

ಆದರೆ ಈ ದರದಲ್ಲಿನ ವಿನಾಯಿತಿಯು ಥರ್ಡ್ ಟೈರ್ ಎಸಿ ಕ್ಲಾಸ್ ಮತ್ತು ಎಸಿ ಚೇರ್ ಕಾರ್‌ನಲ್ಲಿನ ಟಿಕೆಟ್ ಬುಕ್ಕಿಂಗ್‌ಗೆ ಮಾತ್ರ ಅನ್ವಯಿಸುತ್ತದೆ. ಕಾಯ್ದಿರಿಸುವಿಕೆಯ ಶುಲ್ಕ, ಸುಪರ್ ಫಾಸ್ಟ್ ಮತ್ತು ಜಿಎಸ್‌ಟಿಗಳಂತಹ ಇತರೆ ದರಗಳಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ.

ರೈಲುಗಳು ಹೊರಡುವ ನಿಗದಿತ ಸಮಯದ ನಾಲ್ಕು ದಿನಗಳಿಗೂ ಮುಂಚಿನವರೆಗೆ ಟಿಕೆಟ್‌ಗಳನ್ನು ಕಾಯ್ದಿರಿಸುವ ಎಲ್ಲ ಪ್ರಯಾಣಿಕರಿಗೂ ಈ ರಿಯಾಯಿತಿ ಸಿಗಲಿದೆ. ಆದರೆ ಪ್ರಯಾಣದ ದಿನ ಟಿಕೆಟ್ ಬುಕ್ ಮಾಡಿದರೆ ದರದಲ್ಲಿ ಯಾವುದೇ ಕಡಿತವಾಗುವುದಿಲ್ಲ.

ಹೈಪರ್ ಲೂಪ್ : ಮೊದಲ ಪ್ರಯಾಣಿಕರ ಟ್ರಯಲ್ ಪ್ರಯಾಣ ಯಶಸ್ವಿಹೈಪರ್ ಲೂಪ್ : ಮೊದಲ ಪ್ರಯಾಣಿಕರ ಟ್ರಯಲ್ ಪ್ರಯಾಣ ಯಶಸ್ವಿ

ಉದಾಹರಣೆಗೆ ಪ್ರಯಾಣಿಕರು ನವೆಂಬರ್ 15ರಂದು ಟ್ರೈನಿನಲ್ಲಿ ಪ್ರಯಾಣಿಸಬೇಕಿದ್ದರೆ, ನವೆಂಬರ್ 11ರಿಂದ 14ರವರೆಗೆ ಟಿಕೆಟ್‌ಗಳನ್ನು ಕಾಯ್ದಿರಿಸಿದರೆ ಈ ಯೋಜನೆಯಡಿ ರಿಯಾಯತಿ ಸಿಗುತ್ತದೆ.

English summary
Indian Railways has announced that the passengers can get up to 20 percent discount on tickets for premier trains.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X