ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಬಜೆಟ್ ಮಂಡಿಸಿದ ಪರಿಕ್ಕರ್!

|
Google Oneindia Kannada News

ಪಣಜಿ, ಫೆಬ್ರವರಿ 22: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ, ಬಜೆಟ್ ಮಂಡನೆ ಮಾಡುತ್ತಿದ್ದಾರೆ.

ಕಳೆದ ವಾರ ತೀವ್ರ ಅನಾರೋಗ್ಯದಿಂದ ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದ ಅವರನ್ನು ಇಂದು(ಫೆ.22) ಬೆಳಿಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದಂತೆಯೇ ಅವರು ವಿಧಾನಸಭೆಗೆ ತೆರಳಿ ಬಜೆಟ್ ಮಂಡಿಸಿದರು!

ಫೆಬ್ರವರಿ 15 ರಂದು ತೀವ್ರ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮನೋಹರ್ ಪರಿಕ್ಕರ್ ಅವರು ನಾಲ್ಕನೆ ಹಂತದ ಪ್ಯಾನ್ ಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ ಈ ಕುರಿತು ಆಸ್ಪತ್ರೆಯಿಂದಾಗಲೀ, ಪರಿಕ್ಕರ್ ಅವರ ಆಪ್ತ ಮೂಲದಿಂದಾಗಲೀ ಯಾವುದೇ ನಿಖರ ಮಾಹಿತಿ ದೊರಕಿಲ್ಲ. ಅವರು ಕೇವಲ ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಹೇಳಲಾಗಿದ್ದು, ಯಾವುದೇ ಗಂಭೀರ ಸಮಸ್ಯೆಯಿಲ್ಲ ಎನ್ನಲಾಗುತ್ತಿದೆ.

English summary
After being hospitalised for a week due to health issues, Goa Chief Minister Manohar Parrikar on Thursday reached the state Assembly to present the budget. The Budget session of the Goa Legislative Assembly, which began on February 19, is expected to be out today by the Chief Minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X