ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.19-ಆ. 13 ರವರೆಗೆ ಸಂಸತ್ತಿನ ಮಾನ್ಸೂನ್ ಅಧಿವೇಶನ ಸಾಧ್ಯತೆ

|
Google Oneindia Kannada News

ನವದೆಹಲಿ, ಜೂ.29: ಮುಂಬರುವ ಸಂಸತ್ತಿನ ಮುಂಗಾರು ಅಧಿವೇಶನ ಈ ವರ್ಷ ಜುಲೈ 19 ರಿಂದ ಆಗಸ್ಟ್ 13 ರವರೆಗೆ ನಡೆಸಬೇಕೆಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ ಶಿಫಾರಸು ಮಾಡಿದೆ. ದಿನಾಂಕಗಳನ್ನು ರೂಪಿಸಲು ಸಿಸಿಪಿಎ ಕಳೆದ ವಾರ ಸಭೆ ಸೇರಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿಯ ಅಂತಿಮ ಅನುಮೋದನೆ ನಿರೀಕ್ಷಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಮುಂಬರುವ ಅಧಿವೇಶನದಲ್ಲಿ ಕೆಲವು ಸುಗ್ರೀವಾಜ್ಞೆಗಳನ್ನು ಅಂಗೀಕರಿಸುವುದು ಸೇರಿದಂತೆ ಹಲವಾರು ಮಸೂದೆಗಳನ್ನು ಸರ್ಕಾರ ಜಾರಿಗೆ ತರುವ ಸಾಧ್ಯತೆಯಿದೆ. ಒಟ್ಟು 20 ದಿನ ಅಧಿವೇಶನ ನಡೆಯಲಿದೆ. ಈ ಸಂದರ್ಭದಲ್ಲಿ ಕೋವಿಡ್‌ ನಿರ್ವಹಣೆ, ಲಸಿಕೆ ಕೊರತೆ, ಆಮ್ಲಜನಕ ಕೊರತೆ ವಿಚಾರವನ್ನು ವಿಪಕ್ಷಗಳು ಚರ್ಚೆಗೆ ತರುವ ಸಾಧ್ಯತೆ ಅಧಿಕವಾಗಿದೆ. ಹಾಗೆಯೇ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳ ರದ್ದತಿಗೆ ಒತ್ತಾಯ ಮಾಡಲಿದೆ.

ವಿಪಕ್ಷಗಳ ಬಹಿಷ್ಕಾರದ ನಡುವೆ ರಾಜ್ಯಸಭೆ ಕಲಾಪ ಅಂತ್ಯ: 3 ಕಾರ್ಮಿಕ ಮಸೂದೆಗಳ ಅಂಗೀಕಾರವಿಪಕ್ಷಗಳ ಬಹಿಷ್ಕಾರದ ನಡುವೆ ರಾಜ್ಯಸಭೆ ಕಲಾಪ ಅಂತ್ಯ: 3 ಕಾರ್ಮಿಕ ಮಸೂದೆಗಳ ಅಂಗೀಕಾರ

ಭಾರತವು ಕೋವಿಡ್ -19 ರ ಎರಡನೇ ಅಲೆಯನ್ನು ಎದುರಿಸುವ ಬಗ್ಗೆ ಕಳೆದ ಬಜೆಟ್ ಅಧಿವೇಶನದವರೆಗೆ ಸಂಸತ್ತಿನಲ್ಲಿ ಸಾಕ್ಷಿಯಾಗಿದ್ದ, ಅಸ್ತಿತ್ವದಲ್ಲಿರುವ ಮಾರ್ಗಸೂಚಿಗಳು ಮುಂದುವರಿಯುವ ಸಾಧ್ಯತೆಯಿದೆ. ಈ ಮಾರ್ಗಸೂಚಿಯಲ್ಲಿ ಸಂಸತ್ತಿನ ಆವರಣಕ್ಕೆ ಸಂದರ್ಶಕರ ನಿರ್ಬಂಧವೂ ಮುಂದುವರಿಯಲಿದೆ ಎಂದು ಹೇಳಲಾಗಿದೆ.

Parliaments Monsoon Session Likely from July 19 to Aug 13 amid Covid

ಅನೇಕ ಸಂಸದರಿಗೆ ಸಂಪೂರ್ಣವಾಗಿ ಲಸಿಕೆ ನೀಡಲಾಗುತ್ತಿರುವುದರಿಂದ ಮತ್ತು ಸಚಿವಾಲಯದ ಹೆಚ್ಚಿನ ಸಿಬ್ಬಂದಿಗಳು ಒಂದು ಅಥವಾ ಎರಡೂ ಡೋಸ್‌ ಲಸಿಕೆ ತೆಗೆದುಕೊಂಡಿರುವುದರಿಂದ, ಸಂಸತ್ತಿನೊಳಗೆ ಕೋವಿಡ್ ಆತಂಕ ಕಡಿಮೆಯಾಗಿದೆ ಎಂದು ವರದಿಯಾಗಿದೆ.

ಮಾಧ್ಯಮಗಳಿಗೆ ಸೇರಿದಂತೆ ಸಂಸತ್ತಿಗೆ ಬರುವವರಿಗೆ ಕಡ್ಡಾಯವಾಗಿ ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣಪತ್ರ ಇರಬೇಕೋ ಬೇಡವೋ ಎಂಬ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. ಅಧಿವೇಶನವು ಕೆಳ ಮನೆ, ಮೇಲ್ಪನೆಯಲ್ಲಿ ಏಕಕಾಲಕ್ಕೆ ನಡೆಯಬಹುದೇ? ತಲಾ ನಾಲ್ಕು ಗಂಟೆಗಳ ಕಾಲ ಅಧಿವೇಶನ ನಡೆಯಬಹುದೇ? ಎಂಬುದು ಇನ್ನೂ ತಿಳಿದು ಬಂದಿಲ್ಲ.

ರಾಜ್ಯಸಭೆ ಮುಂಗಾರು ಅಧಿವೇಶನ: 1952ರಿಂದ ಮೂರನೇ ಬಾರಿ ಅತಿ ಕಡಿಮೆ ಅವಧಿ ಕಲಾಪ ರಾಜ್ಯಸಭೆ ಮುಂಗಾರು ಅಧಿವೇಶನ: 1952ರಿಂದ ಮೂರನೇ ಬಾರಿ ಅತಿ ಕಡಿಮೆ ಅವಧಿ ಕಲಾಪ

ಸಂಸತ್ತಿನಲ್ಲಿ ಶಾಸಕರು, ಅವರ ಕುಟುಂಬಕ್ಕೆ ಮತ್ತು ಸಂಸದೀಯ ಸಿಬ್ಬಂದಿಗೆ ಲಸಿಕೆ ನೀಡುವಿಕೆ ಜಾರಿಯಲ್ಲಿದೆ.

(ಒನ್‌ಇಂಡಿಯಾ ಸುದ್ದಿ)

English summary
The Cabinet Committee for Parliamentary Affairs, led by Union Defence Minister Rajnath Singh, has recommended that the upcoming monsoon session of Parliament be held from July 19 to August 13 this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X