ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್, ಟ್ವಿಟ್ಟರ್‌ಗೆ ಸಂಸದೀಯ ಸಮಿತಿ ಸಮನ್ಸ್

|
Google Oneindia Kannada News

ನವದೆಹಲಿ, ಜನವರಿ 18: ಸಾಮಾಜಿಕ ಜಾಲತಾಣಗಳ ದುರುಪಯೋಗ ತಡೆಗೆ ಸಂಬಂಧಿಸಿದಂತೆ ಮಾಹಿತಿ ತಂತ್ರಜ್ಞಾನದ ಸಂಸದೀಯ ಸ್ಥಾಯಿ ಸಮಿತಿಯು ಫೇಸ್‌ಬುಕ್ ಮತ್ತು ಟ್ವಿಟ್ಟರ್ ಸಂಸ್ಥೆಗಳ ಅಧಿಕಾರಿಗಳಿಗೆ ಸಮನ್ಸ್ ನೀಡಿದ್ದಾರೆ. ಜನವರಿ 21ರಂದು ಸಮಿತಿ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ.

'ನಾಗರಿಕರ ಹಕ್ಕುಗಳ ಸುರಕ್ಷತೆ ಹಾಗೂ ವಿಶೇಷವಾಗಿ ಡಿಜಿಟಲ್ ತಾಣಗಳಲ್ಲಿನ ಮಹಿಳಾ ಭದ್ರತೆ ಒಳಗೊಂಡಂತೆ ಸಾಮಾಜಿಕ/ಆನ್‌ಲೈನ್ ಸುದ್ದಿ ಮಾಧ್ಯಮ ವೇದಿಕೆಗಳ ದುರ್ಬಳಕೆ ತಡೆ ವಿಚಾರದಲ್ಲಿ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಪ್ರತಿನಿಧಿಗಳು ಮತ್ತು ಫೇಸ್‌ಬುಕ್ ಹಾಗೂ ಟ್ವಿಟ್ಟರ್‌ ಪ್ರತಿನಿಧಿಗಳ ಅಭಿಪ್ರಾಯ ಕೇಳಲು ಬಯಸಲಾಗಿದೆ' ಎಂದು ಮಾಹಿತಿ ತಂತ್ರಜ್ಞಾನ ಸ್ಥಾಯಿ ಸಮಿತಿ ಸದಸ್ಯರು ಮತ್ತು ಅಧ್ಯಕ್ಷರಿಗೆ ಮುಂದಿನ ಸಮಿತಿ ಸಭೆಯ ಕಾರ್ಯಸೂಚಿಯನ್ನು ತಿಳಿಸಲಾಗಿದೆ.

ಎಲ್ಲ ಮಾಹಿತಿಯೂ ಫೇಸ್‌ಬುಕ್‌ಗೆ ಸೋರಿಕೆಯಾಗುತ್ತದೆಯೇ?: ವಾಟ್ಸಾಪ್ ನೀಡಿದ ಸ್ಪಷ್ಟನೆ ಏನು?ಎಲ್ಲ ಮಾಹಿತಿಯೂ ಫೇಸ್‌ಬುಕ್‌ಗೆ ಸೋರಿಕೆಯಾಗುತ್ತದೆಯೇ?: ವಾಟ್ಸಾಪ್ ನೀಡಿದ ಸ್ಪಷ್ಟನೆ ಏನು?

ವಾಟ್ಸಾಪ್‌ನಲ್ಲಿನ ಖಾಸಗಿತನದ ಸಮಸ್ಯೆಗೆ ಸಂಬಂಧಿಸಿದಂತೆ ಇತ್ತೀಚಿನ ಬೆಳವಣಿಗೆಗಳು ವಿವಾದ ಸೃಷ್ಟಿಸಿರುವ ನಡುವೆಯೇ ಈ ಸಮನ್ಸ್ ನೀಡಲಾಗಿದೆ. ತನ್ನ ಗೋಪ್ಯತೆ ನೀತಿಯನ್ನು ಬದಲಿಸಿಕೊಳ್ಳುತ್ತಿರುವುದಾಗಿ ಘೋಷಿಸಿದ್ದ ವಾಟ್ಸಾಪ್, ತನ್ನ ನಿಯಮ ಹಾಗೂ ನೀತಿಗಳಿಗೆ ಬಳಕೆದಾರರು ಒಪ್ಪಿಕೊಳ್ಳುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ಫೆ. 8ರ ಬಳಿಕ ಅವರು ವಾಟ್ಸಾಪ್ ಬಳಕೆ ಮಾಡದಂತೆ ಬ್ಲಾಕ್ ಮಾಡಲಾಗುವುದು ಎಂದು ಹೇಳಿತ್ತು.

 Parliamentary Committee On IT Summons Facebook, Twitter Over Social Media Abuse

ಇದಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ತನ್ನ ಪರಿಷ್ಕೃತ ಖಾಸಗಿತನದ ನೀತಿಯ ಜಾರಿಯನ್ನು ಮೇ ತಿಂಗಳವರೆಗೂ ವಿಳಂಬ ಮಾಡಲು ವಾಟ್ಸಾಪ್ ನಿರ್ಧರಿಸಿದೆ.

English summary
Parliamentary Committee on Information Technology has summoned Twitter and Facebook officials over prevention of misuse of social media.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X