ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Parliament Winter session : ಡಿಸೆಂಬರ್ 7 ರಿಂದ 29ರ ವರೆಗೆ ಸಂಸತ್ತಿನ ಚಳಿಗಾಲದ ಅಧಿವೇಶನ

|
Google Oneindia Kannada News

ನವದೆಹಲಿ, ನವೆಂಬರ್ 19: ಸಂಸತ್ತಿನ ಚಳಿಗಾಲದ ಅಧಿವೇಶನ ಈ ವರ್ಷ ಡಿಸೆಂಬರ್ 7 ರಿಂದ ಡಿಸೆಂಬರ್ 29 ರವರೆಗೆ ನಡೆಯಲಿದೆ. ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಈ ಮಾಹಿತಿ ನೀಡಿದ್ದಾರೆ. ಸಂಸತ್ತಿನ ಚಳಿಗಾಲದ ಅಧಿವೇಶನ 7 ಡಿಸೆಂಬರ್ 2022 ರಂದು ಪ್ರಾರಂಭವಾಗಲಿದೆ ಮತ್ತು ಡಿಸೆಂಬರ್ 29 ರವರೆಗೆ ನಡೆಯಲಿದೆ. 23 ದಿನಗಳಲ್ಲಿ 17 ಸಭೆಗಳು ನಡೆಯಲಿವೆ ಎಂದು ಪ್ರಹ್ಲಾದ್ ಜೋಶಿ ಟ್ವೀಟ್ ಮಾಡಿದ್ದಾರೆ. ಅಧಿವೇಶನದಲ್ಲಿ ಶಾಸಕಾಂಗ ವ್ಯವಹಾರ ಮತ್ತು ಇತರ ವಿಷಯಗಳ ಕುರಿತು ಚರ್ಚೆಗಳನ್ನು ನಿರೀಕ್ಷಿಸಲಾಗಿದೆ. ರಚನಾತ್ಮಕ ಚರ್ಚೆಗೆ ನಾವು ಸಿದ್ಧರಿದ್ದೇವೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಹಾಲಿ ಸಂಸದರ ನಿಧನವನ್ನು ಗಮನದಲ್ಲಿಟ್ಟುಕೊಂಡು ಮುಂಬರುವ ಅಧಿವೇಶನದ ಮೊದಲ ದಿನವನ್ನು ಮುಂದೂಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಇತ್ತೀಚೆಗೆ ನಿಧನರಾದ ಹಾಲಿ ಸಂಸದರಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಕೂಡ ಸೇರಿದ್ದಾರೆ.

ಕೊರೊನಾ ನಿರ್ಬಂಧಗಳಿಲ್ಲದೆ ಅಧಿವೇಶನ ನಡೆಸುವ ಸಾಧ್ಯತೆ

ಕೊರೊನಾ ನಿರ್ಬಂಧಗಳಿಲ್ಲದೆ ಅಧಿವೇಶನ ನಡೆಸುವ ಸಾಧ್ಯತೆ

ಮಾಧ್ಯಮ ವರದಿಗಳ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಕೋವಿಡ್ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ. ಲೋಕಸಭೆ ಮತ್ತು ರಾಜ್ಯಸಭಾ ಸಚಿವಾಲಯದ ಬಹುತೇಕ ಸದಸ್ಯರು ಮತ್ತು ನೌಕರರು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿದ್ದಾರೆ. ಹಾಗಾಗಿ ಈ ಬಾರಿ ಸಂಸತ್ತಿನ ಚಳಿಗಾಲದ ಅಧಿವೇಶನವು ಯಾವುದೇ ಪ್ರಮುಖ ಕೋವಿಡ್-ಪ್ರೇರಿತ ನಿರ್ಬಂಧಗಳಿಲ್ಲದೆ ನಡೆಯುವ ಸಾಧ್ಯತೆಯಿದೆ.

ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಅಂಗೀಕಾರಗೊಳ್ಳುವ ಮಸೂದೆಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸಲಿದೆ. ಈ ವೇಳೆ ಪ್ರತಿಪಕ್ಷಗಳು ತುರ್ತು ವಿಷಯಗಳ ಬಗ್ಗೆ ಚರ್ಚೆ ನಡೆಸಲಿವೆ. ರಾಜ್ಯಸಭೆಯ ಅಧ್ಯಕ್ಷರಾಗಿರುವ ಉಪಾಧ್ಯಕ್ಷ ಜಗದೀಪ್ ಧಂಖರ್ ಅವರು ರಾಜ್ಯಸಭೆಯ ಕಲಾಪಗಳನ್ನು ನಡೆಸುವ ಸಂಸತ್ತಿನ ಮೊದಲ ಅಧಿವೇಶನ ಇದಾಗಿದೆ.

ಸಂಸದರ ಮನೆ ಮೇಲೆ ದಾಳಿಯನ್ನು ಖಂಡಿಸಿದ ಜೋಶಿ

ಸಂಸದರ ಮನೆ ಮೇಲೆ ದಾಳಿಯನ್ನು ಖಂಡಿಸಿದ ಜೋಶಿ

ಭಾರತೀಯ ಜನತಾ ಪಕ್ಷದ 'ಸಂಸತ್ ಪ್ರವಾಸ ಯೋಜನೆ' ಅಂಗವಾಗಿ ಶುಕ್ರವಾರ ಹೈದರಾಬಾದ್‌ಗೆ ಆಗಮಿಸಿದ್ದ ಜೋಶಿ, ಹೈದರಾಬಾದ್‌ನಲ್ಲಿರುವ ಬಿಜೆಪಿ ಸಂಸದ ಧರ್ಮಪುರಿ ಅರವಿಂದ್ ಅವರ ನಿವಾಸದ ಮೇಲೆ ನಡೆದ ದಾಳಿಯನ್ನು ಖಂಡಿಸಿದರು. "... ಟಿಆರ್‌ಎಸ್‌ನ ಈ ಧೋರಣೆ ಮತ್ತು ಅದರ ಗೂಂಡಾಗಿರಿ, ಜನಪ್ರತಿನಿಧಿಗಳಿಗೆ ಮತ್ತು ಬಿಜೆಪಿಯನ್ನು ಬೆಂಬಲಿಸುವವರಿಗೆ ಬೆದರಿಕೆ ಹಾಕುವುದನ್ನು ನಾನು ಬಲವಾಗಿ ಖಂಡಿಸುತ್ತೇನೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಹೊಸ ಸಂಸತ್ ಕಟ್ಟಡ ಪೂರ್ಣಗೊಳ್ಳುವುದು ಯಾವಾಗ?

ಹೊಸ ಸಂಸತ್ ಕಟ್ಟಡ ಪೂರ್ಣಗೊಳ್ಳುವುದು ಯಾವಾಗ?

2022ರ ಡಿಸೆಂಬರ್ ತಿಂಗಳಿನಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೂ ಪೂರ್ವದಲ್ಲಿ ಹೊಸ ಸಂಸತ್ ಕಟ್ಟಡ ಕಾಮಗಾರಿ ಪೂರ್ಣಗೊಳಿಸುವ ಗುರಿಯನ್ನು ಕೇಂದ್ರ ಸರ್ಕಾರವು ಇಟ್ಟುಕೊಂಡಿತ್ತು. ಆದರೆ ಅಂದುಕೊಂಡಂತೆ ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ. ಕೆಲವು ನಿರ್ಮಾಣ ಕಾಮಗಾರಿಗಳು ಇನ್ನೂ ಬಾಕಿ ಇರುವುದರ ಹಿನ್ನೆಲೆ ಹಳೆ ಕಟ್ಟಡದಲ್ಲಿ ಚಳಿಗಾಲ ಅಧಿವೇಶನ ನಡೆಸುವುದಕ್ಕೆ ನಿರ್ಧರಿಸುವ ನಿರೀಕ್ಷೆಯಿದೆ. ಸಂಸತ್ತಿನ ಹೊಸ ಕಟ್ಟಡವು ಸಂಪೂರ್ಣವಾಗಿ ನಿರ್ಮಾಣಗೊಂಡ ನಂತರವೂ, ಆ ಕಟ್ಟಡದಲ್ಲಿ ಸಂಸದರಿಗೆ ಎಲ್ಲಾ ನೆರವು ನೀಡಲು ಮತ್ತು ಸಿಬ್ಬಂದಿಗೆ ಕಟ್ಟಡದ ಪರಿಚಯ ಹಾಗೂ ತರಬೇತಿ ನೀಡಲು ಸುಮಾರು 15 ರಿಂದ 20 ದಿನಗಳೇ ಬೇಕಾಗುತ್ತವೆ ಎಂದು ಮೂಲಗಳು ತಿಳಿಸಿವೆ.

2023ರ ಬಜೆಟ್ ಅಧಿವೇಶಕ್ಕೆ ಹೊಸ ಕಟ್ಟಡ

2023ರ ಬಜೆಟ್ ಅಧಿವೇಶಕ್ಕೆ ಹೊಸ ಕಟ್ಟಡ

ಮುಂದಿನ 2023ರ ಬಜೆಟ್ ಅಧಿವೇಶನವನ್ನು ಹೊಸ ಕಟ್ಟಡದಲ್ಲಿ ನಡೆಸಬಹುದು ಎಂದು ಹೇಳಲಾಗುತ್ತಿದೆ. ಇನ್ನೊಂದು ಮಗ್ಗಲಿನಲ್ಲಿ ಚಳಿಗಾಲದ ಅಧಿವೇಶನಕ್ಕಾಗಿ ಹಳೆಯ ಕಟ್ಟಡದಲ್ಲಿ ಈಗಾಗಲೇ ವ್ಯವಸ್ಥೆಗಳನ್ನು ಪ್ರಾರಂಭಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ಕೇಂದ್ರ ಸರ್ಕಾರವು 1,500ಕ್ಕೂ ಹೆಚ್ಚು ಬಳಕೆಯಲ್ಲಿಲ್ಲದ ಮತ್ತು ಹಳೆ ಕಾನೂನುಗಳನ್ನು ರದ್ದುಗೊಳಿಸಲಿದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಹೇಳಿದ್ದಾರೆ.

English summary
Winter session of Parliament will be held from December 7 to December 29 this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X