ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸತ್‌ನಲ್ಲಿ ಇಂದು: CVC ಹಾಗೂ ಪೊಲೀಸ್ ವಿಶೇಷ ಕಾಯ್ದೆಯ ತಿದ್ದುಪಡಿ ಮಸೂದೆ ಮಂಡನೆ

|
Google Oneindia Kannada News

ನವದೆಹಲಿ, ಡಿಸೆಂಬರ್ 03: ಅಣೆಕಟ್ಟು ಸುರಕ್ಷತಾ ಮಸೂದೆಯನ್ನು ಪರಿಶೀಲನೆಗಾಗಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂದು ಪ್ರತಿಪಕ್ಷಗಳು ಗುರುವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿವೆ.

2019ರಲ್ಲಿ ಲೋಕಸಭೆಯಲ್ಲಿ ಪಾಸ್​​​ ಆಗಿದ್ದ ಅಣೆಕಟ್ಟು ಸುರಕ್ಷತಾ ಮಸೂದೆ ಇಂದು ರಾಜ್ಯಸಭೆಯಲ್ಲೂ ಪಾಸ್​​​​ ಆಗಿದೆ. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ವಿಪಕ್ಷಗಳು ರಾಜ್ಯಸಭೆಯ ಆಯ್ಕೆ ಸಮಿತಿಗೆ ಕಳುಹಿಸಿಕೊಡುವಂತೆ ಪಟ್ಟು ಹಿಡಿದಿವೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ರಾಜ್ಯಸಭೆಯಲ್ಲಿ ಅಣೆಕಟ್ಟು ಸುರಕ್ಷತಾ ಮಸೂದೆ 2019ಯನ್ನು ಹೆಚ್ಚಿನ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಮಂಡಿಸಿದರು. ಇದರ ಬೆನ್ನಲ್ಲೇ ಪ್ರತಿಪಕ್ಷಗಳು ಗದ್ದಲ ಮಾಡಿದ್ದು, ಸುರಕ್ಷತೆ ದೃಷ್ಟಿಯಿಂದ ಈ ಬಿಲ್​​ ಆಯ್ಕೆ ಸಮಿತಿ ಶಿಪಾರಸಿಗೆ ಕಳುಹಿಸುವಂತೆ ಪಟ್ಟು ಹಿಡಿದವು.

Parliament Winter Session Day 5: Bill To Amend CVC And Delhi Police Special Act To Be Tabled

ಅಣೆಕಟ್ಟು ವೈಫಲ್ಯ ಸಂಬಂಧಿತ ಸಮಸ್ಯೆ ತಡೆಗಟ್ಟಲು ಮತ್ತು ಅವುಗಳ ಸುರಕ್ಷಿತ ಕಾರ್ಯನಿರ್ವಹಣೆ ಖಚಿತಪಡಿಸಿಕೊಳ್ಳಲು ಜೊತೆಗೆ ಕಣ್ಗಾವಲು, ತಪಾಸಣೆಮ ಕಾರ್ಯಚರಣೆ ಮತ್ತು ನಿರ್ವಹಣೆಗಾಗಿ ಈ ನಿರ್ಧಾರ ಕೈಗೊಳ್ಳುವಂತ ಪಟ್ಟು ಹಿಡಿದವು.

ಕಾಂಗ್ರೆಸ್​​, ಟಿಎಂಸಿ ಮತ್ತು ಡಿಎಂಕೆ ಸೇರಿದಂತೆ ವಿವಿಧ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ಒತ್ತಾಯ ಮಾಡಿದ್ದು, ಕೇಂದ್ರ ಸರ್ಕಾರದ ನಿರ್ಧಾರ ಅಸಂವಿಧಾನಿಕವಾಗಿದೆ ಎಂದು ಹೇಳಿದರು.

ರಾಜ್ಯಸಭೆಯಲ್ಲಿ ಬಿಲ್​ ಮಂಡನೆಯಾಗುತ್ತಿದ್ದಂತೆ ಡಿಎಂಕೆ ಸಂಸದ ಟಿ. ಶಿವ, ಆಯ್ಕೆ ಸಮಿತಿಗೆ ಕಳುಹಿಸುವಂತೆ ನೋಟಿಸ್​​ ನೀಡಿದರು. ಕೇಂದ್ರ ಸರ್ಕಾರದ ಈ ಮಸೂದೆ ಅನೇಕ ರಾಜ್ಯಗಳ ಅಧಿಕಾರ ಉಲ್ಲಂಘನೆ ಮಾಡ್ತಿದೆ ಎಂದರು.

ಇದು ಅಸಂವಿಧಾನಿಕ ಹಾಗೂ ರಾಜ್ಯಗಳ ಹಕ್ಕುಗಳನ್ನು ಅತಿಕ್ರಮಿಸುವ ಕಾರಣ ಪರಿಶೀಲನೆಯ ಅಗತ್ಯವಿದೆ ಎಂದು ಪ್ರತಿಪಕ್ಷಗಳು ಸರ್ಕಾರಕ್ಕೆ ತಿಳಿಸಿವೆ.

ಮತ್ತೊಂದೆಡೆ, ಟಿಎಂಸಿ ಹಾಗೂ ಎನ್‌ಸಿಪಿ ಕೋವಿಡ್ 19 ವಿರುದ್ಧ ಬೂಸ್ಟರ್ ಡೋಸ್ ಕುರಿತು ಸರ್ಕಾರದ ನಿಲುವನ್ನು ತಿಳಿಯಲು ಪ್ರಯತ್ನ ನಡೆಸಿದವು.

ಲೋಕಸಭೆಯಲ್ಲಿ ಇಂದು ನಡೆಯುವುದೇನು?

ಡಾ. ಜಿತೇಂದ್ರ ಸಿಂಗ್ ಅವರು ಕೇಂದ್ರ ವಿಚಕ್ಷಣ ಆಯೋಗದ ಕಾಯ್ದೆ 2003 ಅನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಮಂಡಿಸಲು ಅವಕಾಶ ಕೋರಲಿದ್ದಾರೆ.
ಡಾ. ಜಿತೇಂದ್ರ ಸಿಂಗ್ ಅವರು ದೆಹಲಿ ಪೊಲೀಸ್ ವಿಶೇಷ ಸ್ಥಾಪನೆ ಕಾಯ್ದೆ 1946 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಲಿದ್ದಾರೆ.
ಡಾ. ಮನ್ಸುಖ್ ಮಾಂಡವೀಯ ಅವರು ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಕಾಯ್ದೆ 1998ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಲಿದ್ದಾರೆ.
ಕೋವಿಡ್ 19 ಹಾಗೂ ಅದಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಸಂವಿಧಾನವನ್ನು ಮತ್ತಷ್ಟು ತಿದ್ದುಪಡಿ ಮಾಡಲು ಕೆಲವು ವಿರೋಧಪಕ್ಷಗಳು ಮಸೂದೆಯನ್ನು ಪರಿಚಯಿಸಲು ಪ್ರಯತ್ನಿಸುತ್ತಿವೆ.

ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಪಠ್ಯದ ಭಾಗವಾಗಿ ಕಲಿಕೆಗೆ ಸಂಬಂಧಿಸಿದಂತೆ ವಿಧೇಯಕವನ್ನು ರಮೇಶ್ ಬಿಧುರಿ ಮಂಡಿಲಿದ್ದಾರೆ.

ರಾಜ್ಯಸಭೆಯಲ್ಲಿ ಏನೇನು ಚರ್ಚೆ?
ಕೋವಿಡ್ 19ಗೆ ಸಂಬಂಧಿಸಿದಂತೆ ವರದಿ ಇರಲಿದೆ. 2021-22ರ ಅನುದಾನ ಬೇಡಿಕೆ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಲಿದ್ದಾರೆ.

ಜನರಿಗೆ ಉಚಿತ ಮತ್ತು ಕಡ್ಡಾಯ ಆರೋಗ್ಯ ಸೇವೆಗಳು ಹಾಗೂ ಸಾರ್ವತ್ರಿಕ ಆರೋಗ್ಯದ ಹಕ್ಕನ್ನು ಒದಗಿಸುವ ಮಸೂದೆಯನ್ನು ಡಾ. ಅಭಿಷೇಕ್ ಮನು ಸಿಂಗ್ವಿ ಮಂಡಿಸಲಿದ್ದಾರೆ.

ಸಂಸತ್ ಚಳಿಗಾಲದ ಅಧಿವೇಶನದಲ್ಲಿ ಮಂಡನೆಯಾಗಲಿರುವ ಮಸೂದೆಗಳು

1) ಕ್ರಿಪ್ಟೋಕರೆನ್ಸಿ ಮತ್ತು ಅಧಿಕೃತ ಡಿಜಿಟಲ್ ಕರೆನ್ಸಿ ನಿಯಂತ್ರಣ ಮಸೂದೆ 2021
2) ದಿವಾಳಿ ಮತ್ತು ದಿವಾಳಿತನ ನೀತಿ (ಎರಡನೇ ತಿದ್ದುಪಡಿ) ಮಸೂದೆ
3) ಬ್ಯಾಂಕಿಂಗ್‌ ಕಾನೂನು (ತಿದ್ದುಪಡಿ) ಮಸೂದೆ 2021
4) ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಅನುಕೂಲ) ಕಾಯಿದೆ, 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ಬೆಲೆ ಭರವಸೆ, ಕೃಷಿ ಸೇವೆಗಳ ಕಾಯಿದೆ, 2020; ಅಗತ್ಯ ಸರಕುಗಳ (ತಿದ್ದುಪಡಿ) ಕಾಯಿದೆ, 2020- ಈ ಕಾಯ್ದೆಗಳನ್ನು ರದ್ದುಪಡಿಸುವ ಮಸೂದೆ 2021
5) ವ್ಯಾಜ್ಯಪೂರ್ವ ಮಧ್ಯಸ್ಥಿಕೆ, ತುರ್ತು ಪರಿಹಾರ ಕೋರಿದರೆ ಸಮರ್ಥ ನ್ಯಾಯಾಧಿಕರಣ ವೇದಿಕೆಗಳು/ನ್ಯಾಯಾಲಯಗಳನ್ನು ಸಂಪರ್ಕಿಸಲು ದಾವೆದಾರರ ಹಿತಾಸಕ್ತಿ ಕಾಪಾಡುವ ಮಧ್ಯಸ್ಥಿಕೆ ಮಸೂದೆ, 2021
6) ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, 2021
7) ಪ್ಯಾರಿಸ್ ಒಪ್ಪಂದವನ್ನು ಕಾರ್ಯಗತಗೊಳಿಸುವ ನಿಟ್ಟಿನಲ್ಲಿ ಹಣಕಾಸು, ತಾಂತ್ರಿಕ ಮತ್ತು ಸಾಮರ್ಥ್ಯ ನಿರ್ಮಾಣ ಮಾಡುವ ಇಂಧನ ಸಂರಕ್ಷಣೆ (ತಿದ್ದುಪಡಿ) ಮಸೂದೆ, 2021
8) ಚಾರ್ಟರ್ಡ್ ಅಕೌಂಟೆಂಟ್ಸ್, ಕಾಸ್ಟ್ ಅಂಡ್ ವರ್ಕ್ಸ್ ಅಕೌಂಟೆಂಟ್ಸ್ ಮತ್ತು ಕಂಪನಿ ಸೆಕ್ರೆಟರಿಗಳ (ತಿದ್ದುಪಡಿ) ಮಸೂದೆ
9) ವಿದ್ಯುಚ್ಛಕ್ತಿ ವಿತರಣಾ ವ್ಯವಹಾರಗಳಿಗೆ ಪರವಾನಗಿ ನೀಡುವುದು, ವಿದ್ಯುತ್ ದಂಡಕ್ಕಾಗಿ ಮೇಲ್ಮನವಿ ನ್ಯಾಯಾಧಿಕರಣ ಬಲಪಡಿಸುವ ವಿದ್ಯುಚ್ಛಕ್ತಿ (ತಿದ್ದುಪಡಿ) ಮಸೂದೆ, 2021
10) ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟಿಕ್ ಸಬ್ಸ್ಟೆನ್ಸ್ (ತಿದ್ದುಪಡಿ) ಮಸೂದೆ
11) ಕೇಂದ್ರ ಜಾಗೃತ ಆಯೋಗ (ತಿದ್ದುಪಡಿ) ಮಸೂದೆ
12) ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಮಸೂದೆ
13) ಕಂಟೋನ್ಮೆಂಟ್ ಮಸೂದೆ
14) ಅಂತರ-ಸೇವೆಗಳ ಸಂಸ್ಥೆಗಳು (ಕಮಾಂಡ್, ನಿಯಂತ್ರಣ ಮತ್ತು ಶಿಸ್ತು) ಮಸೂದೆ
15) ಭಾರತೀಯ ಅಂಟಾರ್ಟಿಕಾ ಮಸೂದೆ
16_ ಎಮಿಗ್ರೇಷನ್ ಮಸೂದೆ
17) ಭಾರತೀಯ ಸಮುದ್ರ ಮೀನುಗಾರಿಕೆ ಮಸೂದೆ
18) ರಾಷ್ಟ್ರೀಯ ದಂತ ಆಯೋಗದ ಮಸೂದೆ
19) ರಾಷ್ಟ್ರೀಯ ನರ್ಸಿಂಗ್ ಮಿಡ್‌ವೈಫರಿ ಕಮಿಷನ್ ಬಿಲ್
20) ಮೆಟ್ರೋ ರೈಲು (ನಿರ್ಮಾಣ, ಕಾರ್ಯಾಚರಣೆ ಮತ್ತು ನಿರ್ವಹಣೆ) ಮಸೂದೆ
21) ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರು (ಸಂಬಳ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ
22) ರಾಷ್ಟ್ರೀಯ ಸಾರಿಗೆ ವಿಶ್ವವಿದ್ಯಾಲಯದ ಮಸೂದೆ
23) ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ
24) ಸಂವಿಧಾನ (ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳು) ಆದೇಶ (ತಿದ್ದುಪಡಿ) ಮಸೂದೆ 25. ಮಾನವ ಕಳ್ಳಸಾಗಣೆ (ತಡೆಗಟ್ಟುವಿಕೆ, ರಕ್ಷಣೆ ಮತ್ತು ಪುನರ್ವಸತಿ) ಮಸೂದೆ
26) ರಾಷ್ಟ್ರೀಯ ಡೋಪಿಂಗ್ ವಿರೋಧಿ ಮಸೂದೆ.

English summary
On Thursday, the Opposition urged the Centre to send the Dam Safety Bill to a select committee for scrutiny. It needs scrutiny as it is unconstitutional and encroaches upon the rights of the states, the Opposition told the Government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X