ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Parliament Winter Session Live : 14ನೇ ದಿನದ ಅಧಿವೇಶನ: ಯಾವ್ಯಾವ ವಿಷಯಗಳ ಕುರಿತು ಚರ್ಚೆ?

|
Google Oneindia Kannada News

ನವದೆಹಲಿ, ಡಿಸೆಂಬರ್ 16:ಸಂಸತ್ತಿನ ಚಳಿಗಾಲದ ಅಧಿವೇಶನ ಇಂದು (ನವೆಂಬರ್ 29) ಶುರುವಾಗಲಿದ್ದು ಡಿಸೆಂಬರ್ 23ರವರೆಗೆ ನಡೆಯಲಿದೆ.

ಮೊದಲ ದಿನವೇ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವ ಮಸೂದೆಯನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಹಿನ್ನೆಲೆಯಲ್ಲಿ ಈಗಾಗಲೇ ಆಡಳಿತರೂಢ ಬಿಜೆಪಿ ತನ್ನ ಎಲ್ಲಾ ಸದಸ್ಯರಿಗೆ ಇಂದು ಕಡ್ಡಾಯವಾಗಿ ಸದನದಲ್ಲಿ ಹಾಜರಿರುವಂತೆ ವಿಪ್ ಜಾರಿ ಮಾಡಿದೆ. ಇದರ ಜೊತೆಗೆ ಕಾಂಗ್ರೆಸ್ ಕೂಡ ತನ್ನ ಸದಸ್ಯರಿಗೆ ವಿಪ್ ಜಾರಿ ಮಾಡಿದೆ.

Parliament Winter Session 2021 Live Updates, News and Highlights in Kannada

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಉಭಯ ಸದನಗಳಲ್ಲಿ ಕೃಷಿ ಕಾಯ್ದೆಯನ್ನು ಮಂಡಿಸಿ ಕಾನೂನಾತ್ಮಕವಾಗಿ ಅದನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ.

ರೈತರಿಗೆ ಮಾರಕವಾಗುವ ಮೂರು ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ರೈತರು ದೆಹಲಿಯ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಂಸತ್ನಲ್ಲಿ ಕಾಯ್ದೆಯನ್ನು ಮಂಡಿಸಿ ಸಂಪೂರ್ಣವಾಗಿ ವಾಪಸ್ ಪಡೆಯುವ ತನಕ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ರೈತರು ಬಿಗಿಪಟ್ಟಿ ಪಟ್ಟುಹಿಡಿದಿದ್ದಾರೆ.

ಸಂಸತ್ ಅಧಿವೇಶನ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಸರ್ವ ಪಕ್ಷಗಳ ನಾಯಕರ ಸಭೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಿತು.

ಡಿಸೆಂಬರ್ 23 ತನಕ ನಡೆಯಲಿರುವ ಅಧಿವೇಶನದಲ್ಲಿ ಸುಗಮ ಕಲಾಪಕ್ಕೆ ಸಹಕಾರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ವಿವಿಧ ಪಕ್ಷಗಳ ರಾಜಕೀಯ ನಾಯಕರಿಗೆ ಮನವಿ ಮಾಡಿದ್ದಾರೆ.

ಕೃಷಿ ಕಾಯ್ದೆಗಳನ್ನು ಅಧಿಕೃತವಾಗಿ ಸಂಸತ್ತಿನ ಎರಡೂ ಸದನಗಳಲ್ಲಿ ಮಂಡಿಸಿ ವಾಪಸ್ ಪಡೆಯುವ ಕಾನೂನು ಪ್ರಕ್ರಿಯೆಗಳನ್ನು ಪೂರ್ಣ ಮಾಡಲಾಗುವುದು ಇದಕ್ಕೆ ಎಲ್ಲ ಪಕ್ಷಗಳ ಸಹಕಾರ ಇರಲಿ ಎಂದು ಮನವಿ ಮಾಡಿದ ಅವರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದ್ದು ಅದರಲ್ಲೂ ಕನಿಷ್ಠ ಬೆಂಬಲ ಬೆಲೆ ನೀಡುವ ಸಂಬಂಧ ಕೇಂದ್ರ ಸರ್ಕಾರ ಪರಿಶೀಲನೆ ನಡೆಸುತ್ತಿದೆ ಎನ್ನುವ ವಿಷಯವನ್ನು ಅವರು ರಾಜಕೀಯ ಪಕ್ಷಗಳ ನಾಯಕರ ಗಮನಕ್ಕೆ ತಂದಿದ್ದಾರೆ

Newest FirstOldest First
9:47 AM, 16 Dec

ಇನ್ನೊಂದು ಕಡೆ ರಾಜ್ಯಸಭೆಯ 12 ಸಂಸದರ ಅಮಾನತು ಆದೇಶವನ್ನು ವಿರೋಧಿಸಿ ವಿರೋಧ ಪಕ್ಷದ ಸದಸ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಈ ಕ್ಷಣವೇ ಸಂಸದರ ಅಮಾನತು ಆದೇಶವನ್ನು ವಾಪಸ್ ಪಡೆಯುವಂತೆ ಪ್ರತಿಪಕ್ಷ ನಾಯಕರು ಆಗ್ರಹಿಸುತ್ತಿದ್ದಾರೆ.
9:47 AM, 16 Dec

ಸಂಸತ್ ಚಳಿಗಾಲ ಅಧಿವೇಶನ ಗುರುವಾರ 14ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಸಭೆಯು ಬುಧವಾರ ಕೇಂದ್ರೀಯ ಜಾಗೃತ ಆಯೋಗವನ್ನು ಅಂಗೀಕರಿಸಿದೆ. ಈ ತಿದ್ದುಪಡಿ ಮಸೂದೆಯು ಐದು ವರ್ಷಗಳ ಜೊತೆಗೆ ಒಂದು ವರ್ಷ ಅವಧಿಯನ್ನು ವಿಸ್ತರಿಸುವುದಕ್ಕೆ ಅನುಮತಿ ನೀಡುತ್ತದೆ.
11:57 AM, 13 Dec

12 ಮಂದಿ ಸಂಸದರ ಅಮಾನತು ಕುರಿತು ಮುಂದುವರೆದ ಪ್ರತಿಭಟನೆ ರಾಜ್ಯಸಭೆ ಕಲಾಪ ಮಧ್ಯಾಹ್ನ 12ರವರೆಗೆ ಮುಂದೂಡಿಕೆ
11:23 AM, 13 Dec

ರಾಜ್ಯಸಭೆಯಿಂದ 12 ಸಂಸದರನ್ನು ಅಮಾನತುಗೊಳಿಸಿದ ಆದೇಶವನ್ನು ಮರುಪರಿಶೀಲಿಸುವಂತೆ ಕೆಲವು ಪ್ರತಿಪಕ್ಷ ಸದಸ್ಯರು ಬೇಡಿಕೆಯನ್ನು ಮುಂದುವರಿಸಿದರು. ಈ ಹಂತದಲ್ಲಿ ಕಲಾಪಕ್ಕೆ ಅಡೆತಡೆ ಉಂಟಾಗಿದ್ದು, ಸದನವನ್ನು ಮುಂದೂಡಲಾಗಿತ್ತು. ಎರಡನೇ ವಾರದಲ್ಲಿ ರಾಜ್ಯಸಭೆಯ ಕಲಾಪದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಿಂದಿನ ವಾರಕ್ಕಿಂತ ಶೇ.5.6ರಷ್ಟು ಹೆಚ್ಚಳವಾಗಿದೆ.
11:17 AM, 13 Dec

10ನೇ ದಿನದ ಅಧಿವೇಶನ: ಉಭಯ ಸದನಗಳಲ್ಲಿ ಯಾವ-ಯಾವ ಮಸೂದೆ ಮಂಡನೆ?

ಸಂಸತ್ ಚಳಿಗಾಲ ಅಧಿವೇಶನ ಸೋಮವಾರ 10ನೇ ದಿನಕ್ಕೆ ಕಾಲಿಟ್ಟಿದೆ. ರಾಜ್ಯಸಭೆಯ 12 ಸಂಸದರ ಅಮಾನತು ಕುರಿತು ವಿರೋಧದ ಮಧ್ಯೆ ರಾಜ್ಯಸಭೆಯು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತು) ತಿದ್ದುಪಡಿ ಮಸೂದೆ, 2021 ಅನ್ನು ಪರಿಗಣಿಸಿದೆ. ಇದೇ ವೇಳೆ ಲೋಕಸಭೆಯಲ್ಲಿ ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ (ತಿದ್ದುಪಡಿ) ಮಸೂದೆ, 2021 ಅನ್ನು ಅಂಗೀಕರಿಸಿದೆ.
11:17 AM, 9 Dec

ಹೆಲಿಕಾಪ್ಟರ್ ದುರಂತದ ಬಗ್ಗೆ ರಾಜನಾಥ್ ಸಿಂಗ್ ಹೇಳಿಕೆ
11:12 AM, 9 Dec

ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ, ಮಿಲಿಟರಿ ಗೌರವದೊಂದಿಗೆ ನಡೆಸಲಾಗುತ್ತದೆ ಎಂದು ರಾಜನಾಥ್ ಸಿಂಗ್ ಹೇಳಿದರು.
Advertisement
11:08 AM, 9 Dec

ಗ್ರೂಪ್ ಕ್ಯಾಪ್ಟನ್ ವುರಣ್ ಸಿಂಗ್ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಅತ್ಯುನ್ನತ ಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಅವರು ಬೇಗ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದರು.
11:06 AM, 9 Dec

ಹೆಲಿಕಾಪ್ಟರ್ ಲ್ಯಾಂಡ್ ಆಗುವ 7 ನಿಮಿಷಗಳ ಮೊದಲು ಪತನಗೊಂಡಿದೆ ಎಂದು ರಾಜನಾಥ್ ಸಿಂಗ್ ಹೇಳಿಕೆ ನೀಡಿದರು.
11:05 AM, 9 Dec

ಸುಲೂರು ವಾಯುನೆಯಿಂದ 11.48ಕ್ಕೆ ಹೆಲಿಕಾಪ್ಟರ್ ಟೇಕಾಫ್ ಆಗಿತ್ತು.
11:04 AM, 9 Dec

12.08ಕ್ಕೆ ಹೆಲಿಕಾಪ್ಟರ್ ಸಂಪೂರ್ಣ ಸಂಪರ್ಕ ಕಳೆದುಕೊಂಡಿತು ಎಂದು ರಾಜನಾಥ್ ಸಿಂಗ್ ಲೋಕಸಭೆಗೆ ಹೇಳಿದರು.
11:03 AM, 9 Dec

ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಹೆಲಿಕಾಪ್ಟರ್ ದುರಂತದ ಬಗ್ಗೆ ಹೇಳಿಕೆ ನೀಡಲು ಆರಂಭಿಸಿದ್ದಾರೆ.
Advertisement
10:31 AM, 9 Dec

11 ಗಂಟೆಗೆ ಲೋಕಸಭೆಯಲ್ಲಿ ರಾಜನಾಥ್ ಸಿಂಗ್ ಹೇಳಿಕೆ ನೀಡಲಿದ್ದಾರೆ.
10:23 AM, 9 Dec

ತಮಿಳುನಾಡಿನಲ್ಲಿ ನಡೆದ ಹೆಲಿಕಾಪ್ಟರ್ ದುರಂತದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್‌ನಲ್ಲಿ ಹೇಳಿಕೆ ನೀಡಲಿದ್ದಾರೆ.
2:22 PM, 8 Dec

ತಮಿಳುನಾಡಿನಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಇದ್ದ ಸೇನಾ ಹೆಲಿಕಾಪ್ಟರ್ ಪತನಗೊಂಡಿದೆ. ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿಕೆ ನೀಡಲಿದ್ದಾರೆ.
1:15 PM, 8 Dec

2018-2020ರ ತನಕ ನಡೆದ ಗಲಭೆ ಪ್ರಕರಣಗಳಲ್ಲಿ 101 ಜನರು ಮೃತಪಟ್ಟಿದ್ದಾರೆ. 3,366 ಜನರು ಗಾಯಗೊಂಡಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ರಾಜ್ಯಸಭೆಗೆ ಲಿಖಿತ ಉತ್ತರ ನೀಡಿದೆ.
11:31 AM, 8 Dec

ರಾಜ್ಯಸಭೆಯ ಕಲಾಪದಲ್ಲಿ 12 ಸದಸ್ಯರ ಅಮಾನತು ವಿಚಾರದಲ್ಲಿ ಗದ್ದಲ ಉಂಟಾಗಿದೆ. ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿದೆ.
10:59 AM, 8 Dec

ಪ್ರಧಾನಿ ನರೇಂದ್ರ ಮೋದಿ ಸಂಸತ್‌ನಲ್ಲಿ ಹಿರಿಯ ಸಚಿವರ ಜೊತೆ ಸಭೆ ನಡೆಸುತ್ತಿದ್ದಾರೆ.
10:26 AM, 8 Dec

ಲೋಕಸಭೆಯಲ್ಲಿ ಗಡಿ ವಿಚಾರದ ಕುರಿತು ಸಂಪೂರ್ಣ ಚರ್ಚೆ ನಡೆಸಲು ನಾವು ಆಗ್ರಹಿಸುತ್ತೇವೆ ಎಂದು ಕಾಂಗ್ರೆಸ್ ಸಂಸದೀಯ ಮಂಡಳಿ ಸಭೆಯಲ್ಲಿ ಎಐಸಿಸಿ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಹೇಳಿದ್ದಾರೆ.
11:49 AM, 7 Dec

12 ಸದಸ್ಯರನ್ನು ಅಮಾನತು ಮಾಡಿರುವ ವಿಚಾರದಲ್ಲಿ ರಾಜ್ಯಸಭೆಯಲ್ಲಿ ಗದ್ದಲ ನಡೆದಿದೆ. ಇದರಿಂದಾಗಿ ಕಲಾಪವನ್ನು 12 ಗಂಟೆಗೆ ಮುಂದೂಡಲಾಗಿದೆ.
10:16 AM, 7 Dec

ಕೃಷಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸುವಾಗ ಮೃತಪಟ್ಟ ರೈತರಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದ್ದಾರೆ.
2:11 PM, 6 Dec

ಲೋಕಸಭೆ, ರಾಜ್ಯಸಭೆ ಕಲಾಪ ಮಧ್ಯಾಹ್ನ 3ಗಂಟೆಗೆ ಮುಂದೂಡಿಕೆ
6:04 PM, 3 Dec

ಲೋಕಸಭೆ ಕಲಾಪವನ್ನು ಡಿಸೆಂಬರ್ 6ರ ಸೋಮವಾರಕ್ಕೆ ಮುಂದೂಡಲಾಗಿದೆ.
1:07 PM, 3 Dec

ಕೇಂದ್ರ ವಿಚಕ್ಷಣ ಆಯೋಗ ತಿದ್ದುಪಡಿ ಮಸೂದೆ 2021 ಹಾಗೂ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ತಿದ್ದುಪಡಿ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.
12:39 PM, 3 Dec

ಬಿಜೆಪಿ ಸಚಿವರೊಬ್ಬರು ಸಂಸತ್ತಿನಲ್ಲಿ ಎನ್‌ಆರ್‌ಸಿಯನ್ನು ಭಾರತದಾದ್ಯಂತ ಜಾರಿಗೆ ತರುವುದಿಲ್ಲ ಎಂದು ಹೇಳಿದ್ದಾರೆ, ಕೃಷಿ ಕಾನೂನುಗಳನ್ನು ರದ್ದುಗೊಳಿಸಿದ್ದಾರೆ, ಎನ್‌ಆರ್‌ಸಿಯನ್ನು ಕೂಡ ರದ್ದುಗೊಳಿಸುತ್ತಾರೆ. ಡೋಲಾ ಸೇನೆ, ಟಿಎಂಸಿ ಸಂಸದ
11:32 AM, 3 Dec

12 ಮಂದಿ ರಾಜ್ಯಸಭಾ ಸಂಸದರ ಅಮಾನತು ಹಿಂಪಡೆಯುವಂತೆ ಒತ್ತಾಯಿಸಿ ವಿಪಕ್ಷ ನಾಯಕರಿಂದ ಪ್ರತಿಭಟನೆ ಮುಂದುವರಿಕೆ.
10:56 AM, 3 Dec

ಕೋವಿಡ್ 19ಗೆ ಸಂಬಂಧಿಸಿದಂತೆ ವರದಿ ಇರಲಿದೆ. 2021-22ರ ಅನುದಾನ ಬೇಡಿಕೆ ಕುರಿತು ನಿರ್ಮಲಾ ಸೀತಾರಾಮನ್ ಮಾತನಾಡಲಿದ್ದಾರೆ. ಜನರಿಗೆ ಉಚಿತ ಮತ್ತು ಕಡ್ಡಾಯ ಆರೋಗ್ಯ ಸೇವೆಗಳು ಹಾಗೂ ಸಾರ್ವತ್ರಿಕ ಆರೋಗ್ಯದ ಹಕ್ಕನ್ನು ಒದಗಿಸುವ ಮಸೂದೆಯನ್ನು ಡಾ. ಅಭಿಷೇಕ್ ಮನು ಸಿಂಗ್ವಿ ಮಂಡಿಸಲಿದ್ದಾರೆ.
10:56 AM, 3 Dec

ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಪಠ್ಯದ ಭಾಗವಾಗಿ ಕಲಿಕೆಗೆ ಸಂಬಂಧಿಸಿದಂತೆ ವಿಧೇಯಕವನ್ನು ರಮೇಶ್ ಬಿಧುರಿ ಮಂಡಿಲಿದ್ದಾರೆ.
10:55 AM, 3 Dec

ಕೋವಿಡ್ 19 ಹಾಗೂ ಅದಕ್ಕೆ ಸಂಬಂಧಿಸಿದ ಅಂಶಗಳ ಕುರಿತು ಚರ್ಚೆ ನಡೆಯಲಿದೆ. ಸಂವಿಧಾನವನ್ನು ಮತ್ತಷ್ಟು ತಿದ್ದುಪಡಿ ಮಾಡಲು ಕೆಲವು ವಿರೋಧಪಕ್ಷಗಳು ಮಸೂದೆಯನ್ನು ಪರಿಚಯಿಸಲು ಪ್ರಯತ್ನಿಸುತ್ತಿವೆ.
10:55 AM, 3 Dec

ಡಾ. ಜಿತೇಂದ್ರ ಸಿಂಗ್ ಅವರು ಕೇಂದ್ರ ವಿಚಕ್ಷಣ ಆಯೋಗದ ಕಾಯ್ದೆ 2003 ಅನ್ನು ತಿದ್ದುಪಡಿ ಮಾಡಲು ಮಸೂದೆಯನ್ನು ಮಂಡಿಸಲು ಅವಕಾಶ ಕೋರಲಿದ್ದಾರೆ. ಡಾ. ಜಿತೇಂದ್ರ ಸಿಂಗ್ ಅವರು ದೆಹಲಿ ಪೊಲೀಸ್ ವಿಶೇಷ ಸ್ಥಾಪನೆ ಕಾಯ್ದೆ 1946 ಅನ್ನು ಮತ್ತಷ್ಟು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಲಿದ್ದಾರೆ. ಡಾ. ಮನ್ಸುಖ್ ಮಾಂಡವೀಯ ಅವರು ರಾಷ್ಟ್ರೀಯ ಔಷಧೀಯ ಶಿಕ್ಷಣ ಮತ್ತು ಸಂಶೋಧನಾ ಕಾಯ್ದೆ 1998ಅನ್ನು ತಿದ್ದುಪಡಿ ಮಾಡುವ ಮಸೂದೆಯನ್ನು ಮಂಡಿಸಲಿದ್ದಾರೆ.
READ MORE

English summary
Parliament Winter Session 2021 Live Updates in Kannada: The Winter session of Parliament will be held from November 29 till December 23. Stay tuned for live updates, latest news and highlights in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X