ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರತಿಪಕ್ಷಗಳ ಬಹಿಷ್ಕಾರವೇ ಬಂಡವಾಳ: ಒಂದೇ ದಿನ 7 ಮಸೂದೆ ಪಾಸ್

|
Google Oneindia Kannada News

ನವದೆಹಲಿ, ಸೆ 22: ಪ್ರತಿಪಕ್ಷಗಳ ಬಹಿಷ್ಕಾರವನ್ನೇ ಬಂಡವಾಳ ಮಾಡಿಕೊಂಡ ಕೇಂದ್ರ ಸರಕಾರ, ಬರೋಬ್ಬರಿ ಏಳು ಮಸೂದೆಗಳನ್ನು ಆಂಗೀಕರಿಸಿದೆ, ಅದೂ ಮೂರು ಗಂಟೆಯ ಅವಧಿಯಲ್ಲಿ.

ವಿರೋಧ ಪಕ್ಷಗಳ ಅನುಪಸ್ಥಿತಿಯಲ್ಲಿ, ಅಧಿವೇಶನದ ಒಂಬತ್ತನೇ ದಿನ, ರಾಜ್ಯಸಭೆಯಲ್ಲಿ ಅನುಮೋದನೆ ಪಡೆದುಕೊಂಡಿರುವ ಏಳು ಮಸೂದೆಗಳು ಹೀಗಿವೆ, ಈ ಎಲ್ಲಾ ಬಿಲ್ ಗಳನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿದೆ:

ರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತುರಾಜ್ಯಸಭೆಯಲ್ಲಿ ಅನುಚಿತ ವರ್ತನೆ: ಸಂಸದರ ಅಮಾನತು

1. ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ 2020
2. ಅಗತ್ಯ ಸರಕುಗಳ(ತಿದ್ದುಪಡಿ) ಮಸೂದೆ 2020
3. ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಿದ್ದುಪಡಿ (ತಿದ್ದುಪಡಿ) ಮಸೂದೆ 2020
4. ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯದ ಮಸೂದೆ 2020
5. ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ 2020
6. ಕಂಪನಿಗಳ (ತಿದ್ದುಪಡಿ) ಮಸೂದೆ 2020
7. ಐಐಐಟಿ ತಿದ್ದುಪಡೆ ಮಸೂದೆ 2020

Parliament Monsoon Session: 7 Crucial Bills Passed By Rajya Sabha On 9th Day

ಪ್ರತಿಪಕ್ಷಗಳ ತೀವ್ರ ವಿರೋಧ ಮತ್ತು ಗದ್ದಲದ ನಡುವೆ ಕೃಷಿ ಸಂಬಂಧಿತ ಮೂರು ಮಸೂದೆಗಳ ಪೈಕಿ ಎರಡು ಮಸೂದೆಗಳನ್ನು ರಾಜ್ಯಸಭೆಯಲ್ಲಿ ಧ್ವನಿ ಮತದ ಮೂಲಕ ಭಾನುವಾರ (ಸೆ 20) ಅಂಗೀಕರಿಸಲಾಗಿತ್ತು.

ಈ ವೇಳೆ, ವಿರೋಧ ಪಕ್ಷದ ನಾಯಕರು ಕಲಾಪದಲ್ಲಿ ಹಾಜರಾಗಿದ್ದ ಹಿನ್ನೆಲೆ ಭೌತಿಕ ಮತದಾನ ನಡೆಸುವಂತೆ ಪಟ್ಟು ಹಿಡಿದರು. ಈ ಮನವಿ ತಿರಸ್ಕರಿಸುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ಹೋಯಿತು. ಸದನದ ಬಾವಿಗಿಳಿದು ಸಂಸದರು ಪ್ರತಿಭಟನೆ ನಡೆಸಿದ್ದು, ಕೆಲವರು ಉಪಾಧ್ಯಕ್ಷರ ಮುಂದಿದ್ದ ಪುಸ್ತಕವನ್ನು ಹರಿದು, ಮೈಕ್ರೋಫೋನ್ ಕಳೆದುಕೊಳ್ಳುವುದಕ್ಕೆ ಪ್ರಯತ್ನಿಸಿದ್ದರು.

'ಒಂದು ದೇಶ ಒಂದೇ ಪಕ್ಷ' ಮಾಡಬೇಡಿ: ಗುಲಾಂ ನಬಿ ಆಜಾದ್'ಒಂದು ದೇಶ ಒಂದೇ ಪಕ್ಷ' ಮಾಡಬೇಡಿ: ಗುಲಾಂ ನಬಿ ಆಜಾದ್

ಹಾಗಾಗಿ, ಡೆರೆಕ್ ಒಬ್ರಿಯಾನ್, ಸಯ್ಯದ್ ನಸೀರ್ ಹುಸೇನ್, ಸಂಜಯ್ ಸಿಂಗ್, ಕೆಕೆ ರಾಜೇಶ್, ರಿಪುನ್ ಬೋರಾ, ರಾಜೀವ್ ಸಟವ್, ಡೋಲಾ ಸೇನ್, ಎಲಮಾರಮ್ ಕರೀಮ್ ಅವರನ್ನು ಒಂದು ವಾರದವರೆಗೆ ಅಮಾನತುಗೊಳಿಸಿದ್ದಾಗಿ ವೆಂಕಯ್ಯ ನಾಯ್ಡು ಘೋಷಿಸಿದ್ದರು.

ಈ ನಿರ್ಧಾರ ಖಂಡಿಸಿ ಅಮಾನತುಗೊಂಡ ಸದಸ್ಯರು ಆಹೋರಾತ್ರಿ ಧರಣಿ ನಡೆಸಿದ್ದರು. ಈಗ ತಮ್ಮ ಧರಣಿ ಅಂತ್ಯಗೊಳಿಸಿದ್ದು, ವಿಪಕ್ಷ ನಾಯಕರು ಆರಂಭಿಸಿರುವ ಅಧಿವೇಶನ ಬಹಿಷ್ಕಾರ ಪ್ರತಿಭಟನೆಗೆ ಕೈ ಜೋಡಿಸಿದ್ದಾರೆ.

English summary
Parliament Monsoon Session: 7 Crucial Bills Passed By Rajya Sabha On 9th Day,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X