ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂದಿನಿಂದ ಸಂಸತ್ ಅಧಿವೇಶನ: ಮಂಡನೆಯಾಗಲಿರುವ ಮಸೂದೆಗಳು ಯಾವುವು?

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಸೋಮವಾರದಿಂದ ಆರಂಭವಾಗುತ್ತಿರುವ ಸಂಸತ್ ಮುಂಗಾರು ಅಧಿವೇಶನದಲ್ಲಿ ಒಟ್ಟು 47 ಅಂಶಗಳನ್ನು ಚರ್ಚೆಗೆ ಬರುವಂತೆ ಗುರುತಿಸಲಾಗಿದೆ ಎಂದು ಸಂಸದೀಯ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಸೆ. 14ರಿಂದ ಆರಂಭವಾಗಲಿರುವ ಮಳೆಗಾಲದ ಅಧಿವೇಶ ಅಕ್ಟೋಬರ್ 1ರಂದು ಅಂತ್ಯವಾಗಲಿದೆ. ಕೊರೊನಾ ವೈರಸ್ ಸಂಕಷ್ಟ ಆರಂಭವಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ನಡುವೆ ಆರ್ಥಿಕ ಕುಸಿತ, ಚೀನಾ ಗಡಿ ವಿವಾದ, ಉದ್ಯೋಗ ನಷ್ಟ ಮುಂತಾದ ಅನೇಕ ಘಟನೆಗಳು ಸಂಭವಿಸಿವೆ. ಮುಖ್ಯವಾಗಿ ಜಿಡಿಪಿ ಕುಸಿತ, ರಾಜ್ಯಗಳಿಗೆ ಜಿಎಸ್‌ಟಿ ಹಂಚಿಕೆಯ ವಿವಾದ ಹಾಗೂ ಕೊರೊನಾ ವೈರಸ್ ಸಂಕಷ್ಟವನ್ನು ನಿಭಾಯಿಸಿದ ರೀತಿ ಚರ್ಚೆಗೆ ಬರಲಿದ್ದು, ವಿರೋಧಪಕ್ಷ ಹಾಗೂ ಆಡಳಿತ ಪಕ್ಷಗಳ ನಡುವೆ ಕಾವೇರಿದ ಚರ್ಚೆ ನಡೆಯುವ ನಿರೀಕ್ಷೆಯಿದೆ.

ಸಂಸತ್ ಮಂಗಾರು ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಓಂ ಬಿರ್ಲಾಸಂಸತ್ ಮಂಗಾರು ಅಧಿವೇಶನದ ಸಿದ್ಧತೆ ಪರಿಶೀಲಿಸಿದ ಸ್ಪೀಕರ್ ಓಂ ಬಿರ್ಲಾ

ಈ ಬಾರಿ ಶನಿವಾರ ಮತ್ತು ಭಾನುವಾರ ಕೂಡ ಅಧಿವೇಶನ ನಡೆಯಲಿದೆ. ಹೀಗಾಗಿ 18 ದಿನಗಳ ಕಾಲ 18 ಕಲಾಪಗಳು ನಡೆಯಲಿದೆ. ಈ ಅವಧಿಯಲ್ಲಿ 45 ಮಸೂದೆಗಳು ಹಾಗೂ 2 ಹಣಕಾಸು ವಿಧೇಯಕಗಳು ಒಳಗೊಂಡಂತೆ ಒಟ್ಟು 47 ಸಂಗತಿಗಳನ್ನು ಮಂಡಿಸಲು ಪಟ್ಟಿ ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಮುಂದೆ ಓದಿ.

ಕೃಷಿ, ಆರ್ಥಿಕ, ತೆರಿಗೆ ಮಸೂದೆಗಳು

ಕೃಷಿ, ಆರ್ಥಿಕ, ತೆರಿಗೆ ಮಸೂದೆಗಳು

ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಉತ್ತೇಜನ ಹಾಗೂ ಸೌಲಭ್ಯ) ಮಸೂದೆ 2020, ರೈತರ (ಸಬಲೀಕರಣ ಮತ್ತು ರಕ್ಷಣೆ) ದರ ಭರವಸೆ ಹಾಗೂ ಕೃಷಿ ಸೇವೆಗಳ ಒಪ್ಪಂದದ ಮಸೂದೆ, ಹೋಮಿಯೋಪಥಿ ಕೇಂದ್ರ ಸಮಿತಿ (ತಿದ್ದುಪಡಿ) ಮಸೂದೆ, ಭಾರತೀಯ ವೈದ್ಯಕೀಯ ಕೇಂದ್ರ ಮಂಡಳಿ (ತಿದ್ದುಪಡಿ) ಮಸೂದೆ, ಅಗತ್ಯ ವಸ್ತುಗಳ (ತಿದ್ದುಪಡಿ) ಮಸೂದೆ, ಆರ್ಥಿಕ ಸಂಕಷ್ಟ ಮತ್ತು ದಿವಾಳಿತನ (ದ್ವಿತೀಯ) ತಿದ್ದುಪಡಿ ಮಸೂದೆ, ಬ್ಯಾಂಕಿಂಗ್ ನಿಯಂತ್ರಣ (ತಿದ್ದುಪಡಿ) ಮಸೂದೆ, ತೆರಿಗೆ ವಿಧಿಸುವ ಹಾಗೂ ಇತರೆ ಕಾನೂನುಗಳು (ಕೆಲವು ನಿಯಮಗಳ ಸಡಿಲಿಕೆ) ಮಸೂದೆ, ಸಾಂಕ್ರಾಮಿಕ ಕಾಯಿಲೆಗಳ (ತಿದ್ದುಪಡಿ) ಮಸೂದೆ 2020, ಸಚಿವರ ವೇತನ ಹಾಗೂ ಭತ್ಯೆ (ತಿದ್ದುಪಡಿ) ಮಸೂದೆ, ಸಂಸತ್ ಸದಸ್ಯರ ವೇತನ, ಭತ್ಯೆ ಹಾಗೂ ಪಿಂಚಣಿ (ತಿದ್ದುಪಡಿ) ಮಸೂದೆಗಳು ಈ ಅಧಿವೇಶನದಲ್ಲಿ ಅನುಮೋದನೆಗೊಳ್ಳಬೇಕಿವೆ.

ಗರ್ಭಪಾತ ತಿದ್ದುಪಡಿ ಮಸೂದೆ

ಗರ್ಭಪಾತ ತಿದ್ದುಪಡಿ ಮಸೂದೆ

ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿರುವ ಕೀಟನಾಶಕ ನಿರ್ವಹಣೆ ಮಸೂದೆ 2020, ಭಾರತೀಯ ಔಷಧೀಯ ಪದ್ಧತಿಯ ರಾಷ್ಟ್ರೀಯ ಆಯೋಗ ಮಸೂದೆ 2019, ಹೋಮಿಯೋಪಥಿ ರಾಷ್ಟ್ರೀಯ ಆಯೋಗ (ಎನ್‌ಸಿಎಚ್) ಮಸೂದೆ 2019, ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ಆಯುರ್ವೇದದಲ್ಲಿ ಬೋಧನೆ ಮತ್ತು ಸಂಶೋಧನಾ ಸಂಸ್ಥೆ ಮಸೂದೆ, ದಿ ಏರ್‌ಕ್ರಾಫ್ಟ್ (ತಿದ್ದುಪಡಿ) ಮಸೂದೆ, ಕಂಪೆನಿಗಳ (ತಿದ್ದುಪಡಿ) ಮಸೂದೆ ಮತ್ತು ಗರ್ಭಪಾತ (ತಿದ್ದುಪಡಿ) ಮಸೂದೆ 2020 ಚರ್ಚೆಗೆ ಬರಲಿವೆ.

ಮುಂಗಾರು ಅಧಿವೇಶನ; ಸಂಸತ್ ಭವನ ಸ್ಯಾನಿಟೈಸ್‌ಗೆ ವಿಶೇಷ ತಂಡಮುಂಗಾರು ಅಧಿವೇಶನ; ಸಂಸತ್ ಭವನ ಸ್ಯಾನಿಟೈಸ್‌ಗೆ ವಿಶೇಷ ತಂಡ

ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ

ಬಾಡಿಗೆ ತಾಯ್ತನ ನಿಯಂತ್ರಣ ಮಸೂದೆ

ಲೋಕಸಭೆಯಲ್ಲಿ ಅನುಮೋದನೆಗೊಂಡಿರುವ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ಮಸೂದೆ, ರಾಷ್ಟ್ರೀಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಮಸೂದೆ, ಭಾರತೀಯ ಮಾಹಿತಿ ತಂತ್ರಜ್ಞಾನ ಕಾನೂನುಗಳ ಸಂಸ್ಥೆ (ತಿದ್ದುಪಡಿ), ಅಂತರ್ ರಾಜ್ಯ ನದಿ ನೀರು ವಿವಾದ (ತಿದ್ದುಪಡಿ) ಮಸೂದೆ 2019, ಅಣೆಕಟ್ಟು ಸುರಕ್ಷತೆ ಮಸೂದೆ 2019, ಪ್ರಮುಖ ಬಂದರು ಪ್ರಾಧಿಕಾರ ಮಸೂದೆ, ಸಾಮಾಜಿಕ ಭದ್ರತೆ ಹಾಗೂ ಕಲ್ಯಾಣ ಸಂಹಿತೆ 2019, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕಾರ್ಯ ಪರಿಸ್ಥಿತಿ ಸಂಹಿತೆ 2019 ಮತ್ತು ಕೈಗಾರಿಕಾ ಸಂಬಂಧಗಳ ಸಂಹಿತೆ 2019 ಮಸೂದೆಗಳ ಬಗ್ಗೆ ಚರ್ಚೆ ನಡೆಯಲಿದೆ.

ಮಂಡನೆಯಾಗುವ ಹೊಸ ಮಸೂದೆಗಳು

ಮಂಡನೆಯಾಗುವ ಹೊಸ ಮಸೂದೆಗಳು

ದ್ವಿಪಕ್ಷೀಯ ಹಣಕಾಸು ಒಪ್ಪಂದಗಳ ಮಸೂದೆ 2020, ಪಿಂಚಣಿ ನಿಧಿ ಮತ್ತು ಅಭಿವೃದ್ಧಿ ಪ್ರಾಧಿಕಾರ (ತಿದ್ದುಪಡಿ) ಮಸೂದೆ, ಫ್ಯಾಕ್ಟರಿಂಗ್ ರೆಗ್ಯುಲೇಷನ್ (ತಿದ್ದುಪಡಿ) ಮಸೂದೆ, ರಾಷ್ಟ್ರೀಯ ಆರೋಗ್ಯ ವೃತ್ತಿಗಳ ಆಯೋಗ ಮಸೂದೆ, ಸಹಾಯಕ ಸಂತಾನೋತ್ಪತ್ತಿ ತಂತ್ರಜ್ಞಾನ (ನಿಯಂತ್ರಣ) ಮಸೂದೆ, ರಾಷ್ಟ್ರೀಯ ರಾಜಧಾನಿ ಪ್ರದೇಶ ದೆಹಲಿ ಸರ್ಕಾರ (ತಿದ್ದುಪಡಿ) ಮಸೂದೆಗಳನ್ನು ಹೊಸದಾಗಿ ಮಂಡಿಸಲಾಗುತ್ತದೆ.

ಉಳಿದ ಮಸೂದೆಗಳು

ಉಳಿದ ಮಸೂದೆಗಳು

ವಿದೇಶಿ ದೇಣಿಗೆ (ನಿಯಂತ್ರಣ) ತಿದ್ದುಪಡಿ ಮಸೂದೆ, ಜನಪ್ರತಿನಿಧಿ (ತಿದ್ದುಪಡಿ) ಮಸೂದೆ, ಜಾಡಮಾಲಿಗಳ ದೈಹಿಕ ನೇಮಕಾತಿಯ ತಡೆ ಮತ್ತು ಅವರ ಪುನರ್ವಸತಿ (ತಿದ್ದುಪಡಿ) ಮಸೂದೆ, ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಹಾಗೂ ಸಂರಕ್ಷಣೆ) ತಿದ್ದುಪಡಿ ಮಸೂದೆ, ಬಹು ರಾಜ್ಯ ಸಹಕಾರ ಸೊಸೈಟಿಗಳ (ತಿದ್ದುಪಡಿ) ಮಸೂದೆ ಹಾಗೂ ಜಮ್ಮು ಮತ್ತು ಕಾಶ್ಮೀರ ಅಧಿಕೃತ ಭಾಷೆ ಮಸೂದೆಗಳನ್ನು ಸಹ ಮಂಡನೆ ಮಾಡಲಾಗುತ್ತದೆ.

ಈ ಮಸೂದೆಗಳು ಹಿಂದಕ್ಕೆ

ಈ ಮಸೂದೆಗಳು ಹಿಂದಕ್ಕೆ

ಸಂಬಂಧಿತ ಸೇವೆಗಳು ಆರೋಗ್ಯ ಆರೈಕೆ ವೃತ್ತಿ ಮಸೂದೆ 2018, ಗಣಿಗಳು (ತಿದ್ದುಪಡಿ) ಮಸೂದೆ 2011, ಅಂತರ್ ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ನಿಯಂತ್ರಣ ಮತ್ತು ಸೇವಾ ಸ್ಥಿತಿಗತಿಗಳು) ತಿದ್ದುಪಡಿ ಮಸೂದೆ 2011, ಕಟ್ಟಡ ಮತ್ತು ಇತರೆ ನಿರ್ಮಾಣ ಕೆಲಸಗಾರರಿಗೆ ಸಂಬಂಧಿಸಿದ ಕಾನೂನು (ತಿದ್ದುಪಡಿ) ಮಸೂದೆ 2013 ಹಾಗೂ ಉದ್ಯೋಗ ವಿನಿಮಯ (ಖಾಲಿ ಹುದ್ದೆಗಳ ಕಡ್ಡಾಯ ಅಧಿಸೂಚನೆ) ತಿದ್ದುಪಡಿ ಮಸೂದೆ 2013 ಮಸೂದೆಗಳನ್ನು ಅಧಿವೇಶನದಲ್ಲಿ ಹಿಂದಕ್ಕೆ ಪಡೆದುಕೊಳ್ಳಲಾಗುತ್ತದೆ.

English summary
Parliament Monsoon Session 2020 to resume from Monday. 45 bills and 2 financial items have been identified for being taken up during session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X