ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಂತಕುಮಾರ್ ಹೆಗಡೆ ಸೇರಿ 17 ಸಂಸದರಿಗೆ ಕೊರೊನಾ ವೈರಸ್ ಪಾಸಿಟಿವ್

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 14: ಉಭಯ ಸದನಗಳ ಮುಂಗಾರು ಅಧಿವೇಶನ ಸೋಮವಾರ ಆರಂಭವಾದ ಬೆನ್ನಲ್ಲೇ, ಸಂಸತ್‌ನಲ್ಲಿ ಕೊರನಾ ವೈರಸ್ ಭೀತಿ ಶುರುವಾಗಿದೆ. ಅಧಿವೇಶನ ಆರಂಭಕ್ಕೂ ಮುನ್ನ ನಡೆದ ಕಡ್ಡಾಯ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಸಂಸತ್‌ನ 17 ಸಂಸದರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಸೆ. 13 ಮತ್ತು 14ರಂದು ಲೋಕಸಭೆ ಸದಸ್ಯರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಸೋಂಕಿಗೆ ಒಳಗಾಗಿರುವ ಸಂಸದರಲ್ಲಿ ಪೈಕಿ ಬಿಜೆಪಿಯವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಿಜೆಪಿಯ 12 ಸಂಸದರು, ಕಾಂಗ್ರೆಸ್‌ನ ಇಬ್ಬರು, ಶಿವಸೇನಾ, ಡಿಎಂಕೆ ಮತ್ತು ಆರ್‌ಎಲ್‌ಪಿ ತಲಾ ಒಂದು ಸಂಸದರು ಸೋಂಕಿಗೆ ಒಳಗಾಗಿದ್ದಾರೆ.

ಲಾಕ್‌ಡೌನ್‌ನಿಂದಾಗಿ 37-78 ಸಾವಿರ ಜನರ ಮರಣ ನಿಯಂತ್ರಣ: ಆರೋಗ್ಯ ಸಚಿವಲಾಕ್‌ಡೌನ್‌ನಿಂದಾಗಿ 37-78 ಸಾವಿರ ಜನರ ಮರಣ ನಿಯಂತ್ರಣ: ಆರೋಗ್ಯ ಸಚಿವ

ಅನಂತಕುಮಾರ್ ಹೆಗಡೆ, ಮೀನಾಕ್ಷಿ ಲೇಖಿ, ಸರ್ವೇಶ್ ಸಾಹಿಬ್ ಸಿಂಗ್‌ಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದಾಗಿ ಗೊತ್ತಾಗಿದೆ. ಬಿಜೆಪಿ ಸಂಸದ ಸುಕಾಂತ ಮಜುಂದಾರ್ ತಮಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿರುವುದಾಗಿ ತಿಳಿಸಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ 65 ವರ್ಷ ಮೇಲ್ಪಟ್ಟ ಸುಮಾರು 200 ಸಂಸದರಿಗೆ ಅಧಿವೇಶನಕ್ಕೆ ಹಾಜರಾಗುವುದರಿಂದ ವಿನಾಯಿತಿ ನೀಡಲಾಗಿದೆ.

Parliament Monsoon Session: 17 MPs Tests Positive For Covid-19 On Day Session Begins

ದೇಶದಲ್ಲಿ ಕೊರೊನಾ ವೈರಸ್‌ ಪ್ರಕರಣಗಳ ಸಂಖ್ಯೆ 48,46,428ಕ್ಕೆ ತಲುಪಿದೆ. ಸೋಮವಾರ 92,071 ಪ್ರಕರಣಗಳು ವರದಿಯಾಗಿವೆ. ಸಾವಿನ ಸಂಖ್ಯೆ 79,722ಕ್ಕೆ ತಲುಪಿದೆ.

ಕೋವಿಡ್ ಭೀತಿಯ ನಡುವೆ ಲೋಕಸಭೆ ಅಧಿವೇಶನದ ಮೊದಲ ದಿನ ಹೇಗಿತ್ತು?ಕೋವಿಡ್ ಭೀತಿಯ ನಡುವೆ ಲೋಕಸಭೆ ಅಧಿವೇಶನದ ಮೊದಲ ದಿನ ಹೇಗಿತ್ತು?

Recommended Video

European Guide Vision ಸಂಸ್ಥೆ Infosys ತೆಕ್ಕೆಗೆ | Oneindia Kannada

ರಾಷ್ಟ್ರವ್ಯಾಪಿ ಲಾಕ್‌ಡೌನ್ ಬಹಳ ಗಟ್ಟಿತನ ನಿರ್ಧಾರ. ಲಾಕ್‌ಡೌನ್‌ನಿಂದಾಗಿ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ತಗ್ಗಿದೆ. ಕೋವಿಡ್ 19 ನಿಯಂತ್ರಣಕ್ಕೆ ಜಾರಿ ಮಾಡಿದ ನಾಲ್ಕು ತಿಂಗಳ ಲಾಕ್‌ಡೌನ್‌ನಿಂದ 14-29 ಲಕ್ಷ ಪ್ರಕರಣಗಳು ಮತ್ತು 37-78,000 ಮರಣಗಳನ್ನು ತಡೆದಿವೆ. ಈ ನಾಲ್ಕು ತಿಂಗಳನ್ನು ಆರೋಗ್ಯ ಮೂಲಸೌಕರ್ಯ, ಮಾನವ ಸಂಪನ್ಮೂಲ ವೃದ್ಧಿ ಮತ್ತು ದೇಶದೊಳಗೆ ಪಿಪಿಇ, ಎನ್ 95 ಮಾಸ್ಕ್ ಮತ್ತು ವೆಂಟಿಲೇಟರ್‌ಗಳಂತಹ ಪ್ರಮುಖ ವಸ್ತುಗಳ ಉತ್ಪಾದನೆ ಮಾಡಲು ಬಳಸಲಾಗಿದೆ ಎಂದು ಆರೋಗ್ಯ ಸಚಿವ ಹರ್ಷವರ್ಧನ್ ಲೋಕಸಭೆಗೆ ತಿಳಿಸಿದ್ದಾರೆ.

English summary
Parliament Monsoon Session: Including Anant Kumar Hagde, 17 MPs Tests Positive for Covid-19 on day session begins.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X