ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಜರಾತ್‌ನಲ್ಲಿ ಅರೆಸೇನಾ ಸಿಬ್ಬಂದಿ ಸಿಡಿಸಿದ ಗುಂಡಿಗೆ ಇಬ್ಬರು ಸಹೋದ್ಯೋಗಿಗಳು ಸಾವು

|
Google Oneindia Kannada News

ಅಹ್ಮದಾಬಾದ್, ನವೆಂಬರ್ 27: ಗುಜರಾತ್‌ನಲ್ಲಿ ಮುಂದಿನ ತಿಂಗಳು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನ ಚುನಾವಣಾ ಕರ್ತವ್ಯದಲ್ಲಿದ್ದ ಅರೆಸೇನಾ ಪಡೆಯ ಸಿಬ್ಬಂದಿ ಹಾರಿಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಸಹೋದ್ಯೋಗಿಗಳು ಮೃತಪಟ್ಟಿರುವ ಘಟನೆ ಪೋರಬಂದರ್ ಬಳಿ ನಡೆದಿದೆ.

ಸಂಜೆ ವೇಳೆ ನಡೆದ ಗಲಾಟೆಯಲ್ಲಿ ಈ ಸಿಬ್ಬಂದಿಯು ಕರ್ತವ್ಯದಲ್ಲಿ ಸಕ್ರಿಯರಾಗಿರಲಿಲ್ಲ. ಈ ಸಂದರ್ಭದಲ್ಲೇ ಎಕೆ -47 ರೈಫಲ್‌ನಿಂದ ಗುಂಡು ಹಾರಿಸಲಾಗಿದೆ ಎಂದು ತಿಳಿದುಬಂದಿದೆ.

ಗುಜರಾತ್ ಚುನಾವಣೆ: ಸೂರತ್‌ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್‌ಗೆ ಬೆಂಬಲಗುಜರಾತ್ ಚುನಾವಣೆ: ಸೂರತ್‌ನಲ್ಲಿ ಬಿಜೆಪಿ ಬಗ್ಗೆ ಅಸಮಾಧಾನ, ಆಪ್‌ಗೆ ಬೆಂಬಲ

ಅವರು ಮಣಿಪುರದ ಇಂಡಿಯಾ ರಿಸರ್ವ್ ಬೆಟಾಲಿಯನ್ (IRB) ನ ಭಾಗವಾಗಿದ್ದರು ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಜೊತೆಗೆ ಗುಜರಾತ್‌ನಲ್ಲಿ ನಿಯೋಜಿಸಲ್ಪಟ್ಟಿದ್ದರು ಎಂದು ಪೋರಬಂದರ್ ಕಲೆಕ್ಟರ್ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಎ. ಎಂ. ಶರ್ಮಾ ಹೇಳಿದ್ದಾರೆ.

Paramilitary Staff On Gujarat Assembly Election Duty Shoots 2 Colleagues Dead

ಪೋರಬಂದರ್ ಬಳಿ ನಡೆದ ಘರ್ಷಣೆಗೆ ಕಾರಣವೇನು?, ಗುಂಡಿನ ದಾಳಿ ನಡೆಸಿದ ಸಿಬ್ಬಂದಿಯ ಕೋಪಕ್ಕೆ ಕಾರಣವೇನು?. ಈ ಘಟನೆಯ ಹಿನ್ನೆಲೆ ಏನು ಎಂಬುದರ ಕುರಿತು ಸಮಗ್ರ ತನಿಖೆ ನಡೆಸಲಾಗುವುದು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರೋಬಂದರ್ ಜನರಲ್ ಆಸ್ಪತ್ರೆಗೆ ಗಾಯಾಳು ದಾಖಲು: ಇನ್ನು ಪೋರಬಂದರ್ ಬಳಿ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಒಬ್ಬರ ಹೊಟ್ಟೆ ಮತ್ತೊಬ್ಬರ ಕಾಲಿಗೆ ಬುಲೆಟ್ ತಗುಲಿದೆ. ತಕ್ಷಣ ಗಾಯಾಳುಗಳನ್ನು ಪ್ರೋರ್ ಬಂದರ್ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ನಂತರ ಅವರನ್ನು ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಸುಮಾರು 150 ಕಿಮೀ ದೂರದಲ್ಲಿರುವ ಜಾಮ್‌ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಗುಂಡಿನ ದಾಳಿಯಲ್ಲಿ ಮೃತಪಟ್ಟಿದ್ದು ಯಾರು?: ಪೊಲೀಸ್ ವರದಿಯು ಆರೋಪಿಯನ್ನು ಕಾನ್‌ಸ್ಟೆಬಲ್ ಎಸ್ ಇನೌಚಾಸಿಂಗ್ ಎಂದು ಗುರುತಿಸಲಾಗಿದೆ. ಇನ್ನು ಗುಂಡಿನ ದಾಳಿಯಲ್ಲಿ ಕೊಲೆಯಾದ ಇಬ್ಬರು ಜವಾನರನ್ನು ತೊಯ್ಬಾ ಸಿಂಗ್ ಮತ್ತು ಜಿತೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಗಾಯಗೊಂಡವರು ಕಾನ್‌ಸ್ಟೆಬಲ್‌ಗಳಾದ ಚೋರಜಿತ್ ಮತ್ತು ರೋಹಿಕಾನಾ ಎಂದು ಗೊತ್ತಾಗಿದ್ದು, ಎಲ್ಲರೂ ಮಣಿಪುರಕ್ಕೆ ಸೇರಿದವರು ಎಂದು ತಿಳಿದು ಬಂದಿದೆ.

Paramilitary Staff On Gujarat Assembly Election Duty Shoots 2 Colleagues Dead

ಸೈಕ್ಲೋನ್ ಕೇಂದ್ರದಲ್ಲಿ ತಂಗಿದ್ದ ಸಿಬ್ಬಂದಿ: ಗುಜರಾತ್‌ನ ಪೋರಬಂದರ್‌ನಿಂದ ಸುಮಾರು 25 ಕಿಮೀ ದೂರದಲ್ಲಿರುವ ತುಕ್ಡಾ ಗೋಸಾ ಗ್ರಾಮದ ಸೈಕ್ಲೋನ್ ಕೇಂದ್ರದಲ್ಲಿ ಈ ಅರೆಸೇನಾ ಸಿಬ್ಬಂದಿಯು ತಂಗಿದ್ದರು. ಪೋರಬಂದರ್ ಜಿಲ್ಲೆಯಲ್ಲಿ ಡಿಸೆಂಬರ್ 1ರಂದು ಮೊದಲ ಹಂತದಲ್ಲಿ ಮತದಾನ ನಡೆಯಲಿದ್ದು, ಎರಡನೇ ಹಂತದಲ್ಲಿ ಡಿಸೆಂಬರ್ 5ರಂದು ಮತ್ತು ಫಲಿತಾಂಶ 8ರಂದು ಹೊರ ಬೀಳಲಿದೆ.

English summary
Paramilitary Staff On Gujarat Assembly Election Duty Shoots 2 Colleagues Dead. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X