ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೀತಿ ಆಯೋಗದ ಹೊಸ ಸಿಇಒ- ಪರಮೇಶ್ವರನ್ ಅಯ್ಯರ್

|
Google Oneindia Kannada News

ನವದೆಹಲಿ, ಜೂನ್ 24: ನೀತಿ ಆಯೋಗಕ್ಕೆ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ನೇಮಿಸಿ ಕೇಂದ್ರ ಸರ್ಕಾರ ಶುಕ್ರವಾರ(ಜೂನ್ 24) ರಂದು ಆದೇಶ ಹೊರಡಿಸಿದೆ. ಸರ್ಕಾರದ ಆದೇಶದ ಪ್ರಕಾರ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮಾಜಿ ಕಾರ್ಯದರ್ಶಿ ಪರಮೇಶ್ವರನ್ ಅಯ್ಯರ್ ಅವರನ್ನು ನೀತಿ ಆಯೋಗದ ಹೊಸ ಸಿಇಒ ಆಗಿ ನೇಮಿಸಲಾಗಿದೆ.

ಕಳೆದ ವರ್ಷ ಜುಲೈನಲ್ಲಿ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಅಯ್ಯರ್, ಉತ್ತರ ಪ್ರದೇಶ ಕೇಡರ್‌ನ 1981-ಬ್ಯಾಚ್‌ನ ಐಎಎಸ್ ಅಧಿಕಾರಿ ಮತ್ತು ಪ್ರಸಿದ್ಧ ನೈರ್ಮಲ್ಯ ತಜ್ಞರಾಗಿದ್ದಾರೆ. ನೀತಿ ಆಯೋಗದ ಹಾಲಿ ಸಿಇಒ ಅಮಿತಾಭ್ ಕಾಂತ್ ಜೂನ್ 30 ರಂದು ನಿವೃತ್ತರಾಗಲಿದ್ದಾರೆ. ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶದವರೆಗೆ, ಯಾವುದು ಮೊದಲು ಆಗುತ್ತದೋ ಅದನ್ನು ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಪರಮೇಶ್ವರನ್ ಅಯ್ಯರ್ ರನ್ನು ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸಿಬ್ಬಂದಿ ಸಚಿವಾಲಯದ ಆದೇಶವು ಅಯ್ಯರ್ ಅವರ ನೇಮಕಾತಿಯನ್ನು ಕಾಂತ್‌ಗೆ ಅನ್ವಯಿಸುವ ಅದೇ ನಿಯಮಗಳು ಮತ್ತು ಷರತ್ತುಗಳ ಮೇಲೆ ಮಾಡಲಾಗಿದೆ ಎಂದು ಹೇಳಿದೆ.

Parameswaran Iyer is new Niti Aayog CEO

ಅಯ್ಯರ್ ಅವರು 2009 ರಲ್ಲಿ ಭಾರತೀಯ ಆಡಳಿತ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರು ವಿಶ್ವಸಂಸ್ಥೆಯಲ್ಲಿ ಹಿರಿಯ ಗ್ರಾಮೀಣ ನೀರು ನೈರ್ಮಲ್ಯ ತಜ್ಞರಾಗಿಯೂ ಕೆಲಸ ಮಾಡಿದ್ದರು.

ನೀತಿ ಆಯೋಗ ಬಗ್ಗೆ:
ನೀತಿ ಆಯೋಗ ಅಥವಾ ಭಾರತದ ಬದಲಾವಣೆಗಾಗಿನ ರಾಷ್ಟ್ರೀಯ ಸಂಸ್ಥೆ (ನ್ಯಾಷನಲ್ ಇನ್ಸ್ಟಿಟ್ಯೂಟಷನ್ ಫಾರ್ ಟ್ರಾನ್ಸ್ ಫಾರ್ಮಿಂಗ್ ಇಂಡಿಯಾ:NITI=National Institution for Transforming India)ವನ್ನು ಭಾರತದ ಯೋಜನಾ ಆಯೋಗದ ಬದಲಿಗೆ ಜನವರಿ 2, 2015ರಲ್ಲಿ ಸ್ಥಾಪಿಸಲಾಗಿದೆ. ಇದು ಮುಖ್ಯವಾಗಿ ಭಾರತದ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿ ಕೇಂದ್ರ ಮತ್ತು ರಾಜ್ಯ ಸರಕಾರಗಳ ನೀತಿ ರೂಪಣೆಯಲ್ಲಿ ಬೌದ್ಧಿಕ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ

ಪ್ರಧಾನಿ ಅಧ್ಯಕ್ಷತೆಯ ನೀತಿ ಆಯೋಗದಲ್ಲಿ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ಕೇಂದ್ರಾಡಳಿತ ಪ್ರದೇಶಗಳ ಲೆಫ್ಟಿನೆಂಟ್ ಗವರ್ನರ್‍ಗಳು ಇರುತ್ತಾರೆ.ಒಬ್ಬ ಉಪಾಧ್ಯಕ್ಷ,ಓರ್ವ ಕಾರ್ಯನಿರ್ವಹಣಾಧಿಕಾರಿ ಜತೆಗೆ,ವಿವಿಧ ಕ್ಷೇತ್ರಗಳಲ್ಲಿ ತಜ್ಞರಾಗಿರುವ ಐದು ಜನ ಖಾಯಂ ಸದಸ್ಯರು, ಇಬ್ಬರು ಅರೆಕಾಲಿಕ ಸದಸ್ಯರು ಹಾಗೂ ನಾಲ್ವರು ಕೇಂದ್ರ ಸಚಿವರು ಇರುತ್ತಾರೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಎಲ್ಲಾ ಮುಖ್ಯಮಂತ್ರಿಗಳು ಮತ್ತು ಲೆಫ್ಟಿನೆಂಟ್ ಗವರ್ನರ್ಗಳು ಆಡಳಿತದ ಸಮಿತಿ (ಕೌನ್ಸಿಲ್) ಸದಸ್ಯರಾಗಿರುತ್ತಾರೆ.

ದೇಶದ ಅಭಿವೃದ್ಧಿಗೆ ಪರಿಗಣಿಸಬೇಕಾದ ವಿಷಯಗಳು,ಕ್ಷೇತ್ರಗಳು ಮತ್ತು ತಂತ್ರಗಳ ಕುರಿತು ರಾಜ್ಯಗಳ ಸಲಹೆಯೊಂದಿಗೆ ನೀತಿ ರೂಪಿಸುವುದು ಇದರ ಪ್ರಮುಖ ಕೆಲಸ. ಕೇಂದ್ರ -ರಾಜ್ಯಗಳ ನೀತಿ ರೂಪಣೆ ವಿಷಯದಲ್ಲಿ "ಚಿಂತಕರ ಚಾವಡಿ"ಯ ಪಾತ್ರವಹಿಸಿ ಸಲಹೆ ಸೂಚನೆಗಳನ್ನು ನೀಡುವುದು,ತಳಮಟ್ಟದಿಂದಲೇ ಅಭಿವೃದ್ಧಿಯಾಗುವಂತೆ ನೋಡಿಕೊಳ್ಳುವುದು ಮತ್ತು ಅಭಿವೃದ್ಧಿಯ ಮೌಲ್ಯಮಾಪನ ಮಾಡುವುದು. (ಮಾಹಿತಿ ಕೃಪೆ: ಪಿಟಿಐ/ವಿಕಿಪೀಡಿಯಾ)

English summary
Former Drinking Water and Sanitation Secretary Parameswaran Iyer was on Friday appointed the new CEO of Niti Aayog, according to a government order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X