ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟರ್‌ನಲ್ಲಿ ಟ್ರೆಂಡ್‌ ಸೃಷ್ಟಿಸಿದ ಪನೀರ್‌ ಬಟರ್‌ ಮಸಾಲ: ಯಾಕೆ ಗೊತ್ತಾ?

|
Google Oneindia Kannada News

ನವದೆಹಲಿ, ಜುಲೈ, 21: ಮೊಸರು, ಪನೀರ್ ಮುಂತಾದ ಪ್ಯಾಕ್ ಮಾಡಿದ ದೈನಂದಿನ ಬಳಕೆಯ ಆಹಾರ ಪದಾರ್ಥಗಳ ಮೇಲೆ ಶೇಕಡಾ 5% ಜಿಎಸ್‌ಟಿ ವಿಧಿಸಿರುವುದು ಪನೀರ್ ಪ್ರಿಯರನ್ನು ಕೆರಳಿಸಿದೆ.

ಪ್ಯಾಕ್ ಮಾಡಲಾದ ದೈನಂದಿನ ಬಳಕೆಯ ಆಹಾರ ಪದಾರ್ಥಗಳ ಮೇಲೆ ಶೇಕಡಾ 5ರಷ್ಟು ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿದ ಬೆನ್ನಲ್ಲೇ ಪನೀರ್ ಬಟರ್ ಮಸಾಲಾ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಆಗಿದೆ. ಕಾಂಗ್ರೆಸ್ ನಾಯಕ ಶಶಿ ತರೂರ್ ಈ ಕುರಿತು ಟ್ವೀಟ್ ಮಾಡಿದ್ದು, "ಈ ಅದ್ಭುತವಾದ ವಾಟ್ಸಾಪ್ ಫಾರ್ವರ್ಡ್‌ಗಳನ್ನು ಯಾರು ತಂದಿದ್ದಾರೆಂದು ನನಗೆ ತಿಳಿದಿಲ್ಲ. ಆದರೆ, ಇದು ಜಿಎಸ್‌ಟಿಯ ಮೂರ್ಖತನವನ್ನು ಕಡಿಮೆ ಮಾಡುತ್ತದೆ!" ಎಂದು ಬರೆದುಕೊಂಡಿದ್ದಾರೆ.

ಶಶಿ ತರೂರ್ ಜಿಎಸ್‌ಟಿ ದರ ಏರಿಕೆ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಭಾರತೀಯರಿಗೆ ಆರ್ಥಿಕವಾಗಿ ತೊಂದರೆಗಳು ಹೆಚ್ಚುತ್ತಲೇ ಇವೆ. ಇಂತಹ ಸಮಯದಲ್ಲಿ ಜಿಎಸ್‌ಟಿ ದರ ಏರಿಕೆ ಮಾಡಿ ಉಸಿರುಗಟ್ಟುವಂತೆ ಮಾಡಿದೆ ಎಂದು ಕಿಡಿಕಾರಿದ್ದಾರೆ.

Why is Paneer butter masala trending on Twitter?

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಪನೀರ್, ಹಾಲು, ಮೊಸರು, ಗೋಧಿ ಹಿಟ್ಟು, ಅಕ್ಕಿ ಮುಂತಾದ ದೈನಂದಿನ ಬಳಕೆಯ ವಸ್ತುಗಳು ಸೇರಿದಂತೆ ಹಲವಾರು ವಸ್ತುಗಳ ಮೇಲೆ ದರಗಳನ್ನು ಪರಿಷ್ಕರಿಸಲಾಯಿತು. ಆಹಾರ ಪದಾರ್ಥಗಳು ಮೇಲೆ ಶೇಕಡಾ 5ರಷ್ಟು ಜಿಎಸ್‌ಟಿ ವಿಧಿಸಿದೆ. ಇದರಿಂದಾಗಿ ಇನ್ನು ಮುಂದೆ ಪನೀರ್ ಮತ್ತು ಹಾಲಿನ ಉತ್ಪನ್ನಗಳು ದುಬಾರಿಯಾಗಲಿವೆ. ಈಗಾಗಲೇ ದುಬಾರಿಯಾಗಿದ್ದ ಪನೀರ್ ಸೇರಿದಂತೆ ಪ್ಯಾಕ್‌ ಮಾಡಿದ ಉತ್ಪನ್ನಗಳ ಬೆಲೆ ಏರಿಕೆಯು ಸಾಮಾನ್ಯ ಜನರನ್ನು ಕಂಗಾಲಾಗಿಸಿದೆ.

Paneer Butter Masala created a trend on Twitter

ಬೆಣ್ಣೆ ಮತ್ತು ಮಸಾಲಾ ಮೇಲಿನ ಜಿಎಸ್‌ಟಿ ದರಗಳು ಹೆಚ್ಚಿರುವ ಕಾರಣದಿಂದ ಪನೀರ್ ಬಟರ್ ಮಸಾಲಾವು ದುಬಾರಿಯಾಗಿದೆ. ಪನೀರ್ ಶೇಕಡಾ 5, ಬೆಣ್ಣೆ ಶೇಕಡಾ 12 ಮತ್ತು ಮಸಾಲ ಶೇಕಡಾ 5ರಷ್ಟು ಜಿಎಸ್‌ಟಿ ಹೊಂದಿದೆ. ಪನ್ನೀರ್ ಬಟರ್ ಮಸಾಲಾ ಬಗ್ಗೆ ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿದ ನಂತರ, ನೆಟಿಜನ್‌ಗಳು ಇತರ ಉಲ್ಲಾಸದ ಮೀಮ್‌ಗಳು ಮತ್ತು ಜೋಕ್‌ಗಳೊಂದಿಗೆ ಒಗಟಿಗೆ ತಮ್ಮ ಉತ್ತರಗಳನ್ನು ಹಂಚಿಕೊಂಡಿದ್ದಾರೆ. ಪ್ಯಾಕ್ ಮಾಡಲಾದ ದೈನಂದಿನ ಬಳಕೆಯ ಆಹಾರ ಪದಾರ್ಥಗಳ ಮೇಲೆ ಶೇಕಡಾ 5ಕ್ಕಿಂತ ಹೆಚ್ಚಿನ ಜಿಎಸ್‌ಟಿಯ ನಡುವೆ, ಪನೀರ್ ಬಟರ್ ಮಸಾಲಾ ಟ್ವಿಟರ್‌ನಲ್ಲಿ ಟ್ರೆಂಡಿಂಗ್ ಪ್ರಾರಂಭಿಸಿತು.

ಪರಿಷ್ಕೃತ ಸರಕು ಮತ್ತು ಸೇವಾ ತೆರಿಗೆ ಜುಲೈ 18ರಿಂದ ಜಾರಿಗೆ ಬಂದಿದೆ. ಪ್ಯಾಕ್‌ ಮಾಡಲಾದ ಮತ್ತು ಲೇಬಲ್ ಮಾಡಿದ ಬೇಳೆಕಾಳುಗಳು, ಅಕ್ಕಿ, ಗೋಧಿ ಮತ್ತು ಹಿಟ್ಟಿನಂತಹ ನಂತಹ ಧಾನ್ಯಗಳಿಗೂ ಪ್ಯಾಕ್‌ ಮತ್ತು ಲೇಬಲ್‌ ಸೇರಿದಂತೆ ಶೇಕಡಾ 5 ರಷ್ಟು ದರದಲ್ಲಿ ಜಿಎಸ್‌ಟಿಯನ್ನು ವಿಧಿಸಿದಂತಾಗುತ್ತದೆ. ಪ್ಯಾಕ್‌ ಮಾಡಿದ ಮೊಸರು, ಲಸ್ಸಿ ಮತ್ತು ರೈಸ್‌ನಂತಹ ಇತರ ವಸ್ತುಗಳಿಗೂ ಶೇಕಡಾ 5 ರಷ್ಟು ದರದಲ್ಲಿ ಜಿಎಸ್‌ಟಿಯನ್ನು ವಿಧಿಸಲಾಗಿದೆ. ಚಂಡೀಗಢದಲ್ಲಿ ಇತ್ತೀಚೆಗೆ ನಡೆದ 47ನೇ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಈ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

English summary
The imposition of 5% GST on packaged daily food items like yogurt, paneer etc. has irked paneer lovers, Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X