• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ಯಾನ್, ಆಧಾರ್ ಜೋಡಣೆಯ ಗಡುವು ಮತ್ತಷ್ಟು ವಿಸ್ತರಣೆ

|

ನವದೆಹಲಿ, ಜೂನ್ 24 : ಪ್ಯಾನ್ ಕಾರ್ಡ್‌ ಜೊತೆ ಆಧಾರ್ ಕಾರ್ಡ್‌ ಲಿಂಕ್ ಮಾಡಬೇಕು ಎಂದು ಕೇಂದ್ರ ಸರ್ಕಾರ ಹೇಳಿತ್ತು. ಜೋಡಣೆ ಮಾಡಲು ಇದ್ದ ಗಡುವನ್ನು ಸರ್ಕಾರ 2021ರ ಮಾರ್ಚ್ 31ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.

   SSLC Exam:ಪರೀಕ್ಷೆ ಬರೆಯುತ್ತಿರುವ 10ನೇ ತರಗತಿ ವಿದ್ಯಾರ್ಥಿಗಳಿಗೆ ಸಂದೇಶ ಕೊಟ್ಟ ಕುಮಾರಸ್ವಾಮಿ. | Kumarswamy

   ಪ್ಯಾನ್ ಕಾರ್ಡ್‌ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲು 2020ರ ಮಾರ್ಚ್ 31ರ ಗಡುವು ನೀಡಲಾಗಿತ್ತು. ಬಳಿಕ ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ್ದರಿಂದ ಅದನ್ನು ಜೂನ್ 30ರ ತನಕ ವಿಸ್ತರಣೆ ಮಾಡಲಾಗಿತ್ತು.

   ಆಧಾರ್ ಬಳಸಿ ಇ-ಪ್ಯಾನ್ ಕಾರ್ಡನ್ನು ತ್ವರಿತವಾಗಿ ಪಡೆಯುವುದು ಹೇಗೆ?

   ಬುಧವಾರ ಕೇಂದ್ರ ಸರ್ಕಾರ 2021ರ ಮಾರ್ಚ್ 31ರ ತನಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಗಡುವು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಹಲವು ಬಾರಿ ಗಡುವು ವಿಸ್ತರಣೆಯಾಗಿತ್ತು. ಈ ಇನ್ನೂ ಹೆಚ್ಚು ಸಮಯವನ್ನು ನೀಡಿ ಆದೇಶಿಸಲಾಗಿದೆ.

   ಪ್ಯಾನ್- ಆಧಾರ್ ಜೋಡಣೆಯಾಗದಿದ್ದರೆ ಭಾರಿ ದಂಡ ಬೀಳಲಿದೆ!

   ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಲಿಂಕ್ ಆಗದಿದ್ದರೆ ನಿಮ್ಮ ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿತ್ತು. 2020ರ ಜನವರಿ ವರೆಗಿನ ಅಂಕಿ ಅಂಶಗಳಂತೆ 30.75 ಕೋಟಿಗೂ ಹೆಚ್ಚು ಜನರು ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಜೋಡಣೆ ಮಾಡಿದ್ದಾರೆ.

   ಕೆಲವೇ ನಿಮಿಷಗಳಲ್ಲಿ ಇ-ಪ್ಯಾನ್ ಕಾರ್ಡ್ ಪಡೆಯುವುದು ಹೇಗೆ?

   ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಜನರು ಬಳಕೆದಾರರಾಗಿ ಹೆಸರು ನೋಂದಣಿ ಮಾಡಿಸಿದ್ದರೆ ಆಧಾರ್ ಮತ್ತು ಪ್ಯಾನ್ ಲಿಂಕ್ ಆಗಿರುತ್ತದೆ. ನೋಂದಣಿ ಆಗಿರದಿದ್ದರೆ ಅದೇ ವೆಬ್‌ಸೈಟ್‌ನಲ್ಲಿನ ಲಿಂಕ್‌ ಮೇಲೆ ಕ್ಲಿಕ್ ಮಾಡಿ ಜೋಡಣೆ ಮಾಡಬಹುದಾಗಿದೆ.

   English summary
   Union government extended the deadline to link Aadhaar with PAN till March 31, 2021.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X