ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದ ವಿರುದ್ಧ ಸೈಬರ್ ಯುದ್ಧ ಆರಂಭಿಸಿದ ಪಾಕ್

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಆಗಸ್ಟ್ 8 : ದೇಶಕ್ಕೆ ಭಯೋತ್ಪಾದಕರನ್ನು ಕಳುಹಿಸಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಪಾಕಿಸ್ತಾನ ಭಾರತದ ವಿರುದ್ಧ ಸೈಬರ್ ಯುದ್ಧವನ್ನು ಆರಂಭಿಸಿದೆ. ವಿವಿಧ ಸರ್ಕಾರಿ ಇಲಾಖೆಗಳ ವೆಬ್‌ಸೈಟ್‌ಗಳು ಹ್ಯಾಕ್ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ.

ಪಾಕಿಸ್ತಾನದ ಸೈಬರ್ ಆರ್ಮಿ ರಕ್ಷಣೆ ಮತ್ತು ವಿದೇಶಾಂಗ ಇಲಾಖೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ ಎಚ್ಚರಿಕೆ ನೀಡಿದೆ. ವಿವಿಧ ಸರ್ಕಾರಿ ಇಲಾಖೆಗಳ ಕಂಪ್ಯೂಟರ್‌ಗಳ ರಕ್ಷಣೆಗೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದೆ.

internet

ಪಾಕಿಸ್ತಾನದ ಐಎಸ್‌ಐ ಭಾಗವಾಗಿರುವ ಸೈಬರ್ ಆರ್ಮಿ ಹಿಂದೆಯೂ ಅನೇಕ ಸೈಬರ್ ದಾಳಿಗಳನ್ನು ಮಾಡಿ ಮಾಹಿತಿಗಳನ್ನು ಕದಿಯುವ ಕಾರ್ಯಾಚರಣೆಯನ್ನು ಮಾಡಿದೆ. ಸುಮಾರು 500 ಜನರು ಈ ಸೈಬರ್ ಸೇನೆಯಲ್ಲಿದ್ದು, ಸರ್ಕಾರಿ ವೆಬ್‌ಸೈಟ್‌ಗೆ ಲಗ್ಗೆ ಇಡುತ್ತಾರೆ. [ನವೀದ್ ಭಾರತಕ್ಕೆ ನುಸುಳಿ ಬಂದಿದ್ದು ಎಲ್ಲಿಂದ?]

ಕೆಲವು ವರ್ಷಗಳ ಹಿಂದೆ ಇದೇ ಪಾಕಿಸ್ತಾನದ ಸೈಬರ್ ಸೇನೆ ಸಿಬಿಐ ವೆಬ್‌ಸೈಟ್‌ಅನ್ನು ಹ್ಯಾಕ್ ಮಾಡಿತ್ತು. ಕೆಲವು ದಿನಗಳ ಕಾಲ ವೆಬ್‌ಸೈಟ್ ಬಂದ್ ಮಾಡಲಾಗಿತ್ತು. ಈಗಲೂ ಇದೇ ತರಹದ ಸೈಬರ್‌ ಯುದ್ಧವನ್ನು ಪಾಕ್ ಆರಂಭಿಸಿದೆ ಎಂಬುದು ಗುಪ್ತಚರ ಇಲಾಖೆಯ ಎಚ್ಚರಿಕೆ. [ಉಡುಪಿ ಬಿಜೆಪಿ ವೆಬ್ ಸೈಟ್ ನಲ್ಲಿ ಪಾಕ್ ಗೆ ಜಿಂದಾಬಾದ್]

ಗಡಿ ಮೂಲಕ ನುಸುಳಿ ಬಂದು ದೇಶದ ಜನರ ಮೇಲೆ ಗುಂಡಿನ ದಾಳಿ ನಡೆಸುವುದು ಒಂದು ತರಹದ ಯುದ್ಧವಾದರೆ, ಇಲಾಖೆಯ ವೆಬ್‌ಸೈಟ್ ಹ್ಯಾಕ್ ಮಾಡಿ ಮಾಹಿತಿ ಕದಿಯುವುದು ಮತ್ತೊಂದು ರೀತಿಯ ಯುದ್ಧವಾಗಿದೆ. ಸೈಬರ್ ಸೇನೆ ಇಂತಹ ಯುದ್ಧ ಮಾಡಲು ಮುಂದಾಗಿದೆ ಎಂದು ಗುಪ್ತಚರ ಇಲಾಖೆ ಹೇಳಿದೆ.

English summary
Pakistan has declared a proxy war on India, Intelligence Bureau officials say. While they intend to continue to with cross border firing and Infiltration's in a bid to carry out terror strikes, a new alert would also suggest a cyber war.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X