• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

75 ವರ್ಷದ ಬಳಿಕ ಸಹೋದರನನ್ನು ಭೇಟಿಯಾದ ಪಾಕ್ ಮಹಿಳೆ!

|
Google Oneindia Kannada News

ಕರಾಚಿ, ಮೇ 19 : ಪಾಕಿಸ್ತಾನದ ಮಹಿಳೆ ಬರೋಬ್ಬರಿ 75 ವರ್ಷಗಳ ನಂತರ ತನ್ನ ಭಾರತೀಯ ಸಹೋದರನನ್ನು ಭೇಟಿ ಮಾಡಿದ್ದಾರೆ. ಅವರಿಬ್ಬರು ಭಾರತ-ಪಾಕಿಸ್ತಾನ 1947ರಲ್ಲಿ ವಿಭಜನೆಯಾದ ವೇಳೆ ಬೇರ್ಪಟ್ಟಿದ್ದರು ಎಂದು ತಿಳಿದುಬಂದಿದೆ.

ಮಹಿಳೆ ಸಿಖ್‌ ಕುಟುಂಬದಲ್ಲಿ ಜನಿಸಿದ್ದರೂ ಬೆಳದಿದ್ದೂ ಮಾತ್ರ ಮುಸ್ಲಿಂ ಕುಟುಂಬದಲ್ಲಿ. 1947ರ ದೇಶ ವಿಭಜನೆಯ ಸಂದರ್ಭದಲ್ಲಿ ನಡೆದ ಹಿಂಸಾತ್ಮಕ ದಾಳಿಯಲ್ಲಿ ಸಾವನ್ನಪ್ಪಿದ್ದ ಅವರ ತಾಯಿಯ ಶವದ ಮುಂದೆ ಅಳುತ್ತಾ ಕುಳಿತಿದ್ದರು.

ಆ ಪುಟ್ಟ ಮಗುವನ್ನು ನೋಡಿ ಮರುಗಿದ ಮೊಹಮ್ಮದ್‌ ಇಕ್ಬಾಲ್ ಮತ್ತು ಅಲ್ಹಾ ರಾಖಿ ಎಂಬ ಮುಸ್ಲಿಂ ದಂಪತಿಗಳು ಆಕೆಯನ್ನು ಕರೆದುಕೊಂಡು ಹೋದರು ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಅನಾರೋಗ್ಯ ತಂದೆಯಿಂದ ದತ್ತು; ಗಲಾಟೆಯಲ್ಲಿ ತಾಯಿ ಶವದ ಮುಂದೆ ಅಳುತ್ತಾ ಕುಳಿತಿದ್ದ ಮಗುವನ್ನು ಅವರ ಅನಾರೋಗ್ಯಕ್ಕೆ ತುತ್ತಾಗಿದ್ದ ತಂದೆಯಿಂದ ಪಾಕಿಸ್ತಾನಿ ದಂಪತಿ ದತ್ತು ಪಡೆದುಕೊಂಡು, ತಮ್ಮ ಸ್ವಂತ ಮಗುವಿನಂತೆ ಸಾಕಿದ್ದರು. ಮಗುವಿಗೆ ಮುಮ್ತಾಜ್ ಬೀಬಿ ಎಂದು ಹೆಸರಿಟ್ಟಿದ್ದರು. ದೇಶ ಇಬ್ಬಾಗವಾದ ನಂತರ ಇಕ್ಬಾಲ್‌ ಪಂಜಾಬ್ ಪ್ರಾಂತ್ಯದ ಶೇಖುಪುರ ಜಿಲ್ಲೆಯ ವಾರಿಕ ಟಿಯಾನ್ ಎಂಬ ಗ್ರಾಮದಲ್ಲಿ ಉಳಿದುಕೊಂಡಿದ್ದರು.

ಸಾಯುವ ವೇಳೆ ನಿಜ ಹೇಳಿದ್ದ ಸಾಕು ತಂದೆ; ಮುಮ್ತಾಜ್‌ರನ್ನು ದತ್ತು ತೆಗೆದುಕೊಂಡ ನಂತರ ತಮ್ಮ ಸ್ವಂತ ಮಗುವಂತೆ ಸಾಕಿ ಸಲುಹಿದ ಇಕ್ಬಾಲ್ ಮತ್ತು ಅವರ ಪತ್ನಿ ಎಂದೂ ತಮ್ಮ ಸ್ವಂತ ಮಗಳಲ್ಲ ಎಂದು ತಿಳಿಸಿರಲಿಲ್ಲ. ಆದರೆ ಎರಡು ವರ್ಷಗಳ ಹಿಂದೆ ಇಕ್ಬಾಲ್ ಆರೋಗ್ಯ ಸಂಪೂರ್ಣ ಹದಗೆಟ್ಟು, ಸಾಯುವ ಸಂದರ್ಭದಲ್ಲಿದ್ದಾಗ ಮುಮ್ತಾಜ್‌ಗೆ ನೀನು ನನ್ನ ಮಗಳಲ್ಲ, ಸಿಖ್​ ಪರಿವಾರಕ್ಕೆ ಸೇರಿದವಳು, ನಿನ್ನ ಕುಟುಂಬ ಭಾರತದ ಪಂಜಾಬ್​ನಲ್ಲಿ ನೆಲೆಸಿದೆ ಎಂದು ಬಹಿರಂಗ ಪಡಿಸಿದ್ದಾರೆ.

ಇಕ್ಬಾಲ್‌ ಮರಣದ ನಂತರ ಮುಮ್ತಾಜ್‌ ಮತ್ತು ಅವರ ಮಗ ಶಹ್ಬಾಜ್‌ ಸಾಮಾಜಿಕ ಜಾಲಾತಾಣದ ನೆರವಿನೊಂದಿಗೆ ತನ್ನ ಕುಟುಂಬಕ್ಕಾಗಿ ಹುಡುಕಾಟ ನಡೆಸಿದ್ದರು. ಮುಮ್ತಾಜ್‌ಗೆ ತಂದೆ ಹೆಸರು ಮತ್ತು ಊರನ್ನು ಇಕ್ಬಾಲ್‌ರಿಂದ ತಿಳಿದುಕೊಂಡಿದ್ದರಿಂದ ತಮ್ಮ ಕಥೆಯನ್ನು ವಿವರಿಸಿ ಹುಡುಕಾಟ ನಡೆಸಿದ್ದರು. ದೇಶ ವಿಭಜನೆಯ ನಂತರ ಮುಮ್ತಾಜ್ ನಿಜವಾದ ತಂದೆ ಅನಿವಾರ್ಯವಾಗಿ ಭಾರತದ ಪಂಜಾಬ್‌ನ ಪಟಿಯಾಲದಲ್ಲಿ ಬಂದು ನೆಲೆಸಿದ್ದರು.

Pakistans Muslim sister meets her Indian Sikh brother 75 years after partition

ಹೀಗೆ ಸಾಮಾಜಿಕ ಜಾಲಾತಾಣದಲ್ಲಿ ಹುಡುಕಾಡಿದ ನಂತರ ಕೊನೆಗೂ ಎರಡೂ ಕುಟುಂಬಗಳು ಒಬ್ಬರನ್ನೊಬ್ಬರು ಸಂಪರ್ಕಿಸುವಲ್ಲಿ ಸಫಲವಾಗಿವೆ. ಮುಮ್ತಾಜ್‌ ತನಗೆ ಗುರ್ಮೀತ್ ಸಿಂಗ್, ನರಿಂದರ್ ಸಿಂಗ್ ಮತ್ತು ಅಮರಿಂದರ್ ಸಿಂಗ್ ಎಂಬ ಮೂವರು ಸಹೋದರರಿದ್ದಾರೆ
ಎನ್ನುವುದನ್ನು ತಿಳಿದುಕೊಂಡಿದ್ದಾರೆ.

ಕರ್ತಾಪುರ್‌ನಲ್ಲಿ ಒಂದಾಗ ಕುಟುಂಬ; ಎರಡು ಕುಟುಂಬವರಿಗೂ ವಿಷಯ ತಿಳಿದ ನಂತರ ಭಾರತದಲ್ಲಿದ್ದ ಮುಮ್ತಾಜ್ ಅವರ ಮೂವರು ಸಹೋದರರು ಹಾಗೂ ಕುಟುಂಬಸ್ಥರು ಸಿಖ್ಖರ ಪವಿತ್ರ ಸ್ಥಳ ಕರ್ತಾಪುರ್‌ಗೆ ಹೋಗಿದ್ದಾರೆ. ಅಲ್ಲಿಗೆ ಮುಮ್ತಾಜ್ ತನ್ನ ಕುಟುಂಬಸ್ಥರು ಜೊತೆಗೂಡಿ ಆಗಮಿಸಿದ್ದರು. ತನ್ನ ಕಳೆದುಹೋದ ಸಹೋದರರನ್ನು ಭೇಟಿ ಮಾಡಿದ್ದಾರೆ.

ಸಿಖ್ ಧರ್ಮದ ಸ್ಥಾಪಕ ಗುರುನಾನಕ್ ದೇವ್ ಅವರು ಅಂತಿಮ ಕ್ಷಣಗಳನ್ನು ಕಳೆದ ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ದೇಗುಲ ಸಿಖ್ಖರ ಪವಿತ್ರ ಸ್ಥಳವಾಗಿದೆ. ಭಾರತದ ಪಂಜಾಬ್‌ನ ಗುರುದಾಸ್‌ಪುರ ಜಿಲ್ಲೆಯ ಡೇರಾಬಾಬಾ ನಾಯಕ್‌ ದೇಗುಲದಿಂದ ಪಾಕಿಸ್ತಾನ ಪಂಜಾಬ್‌ನ ನರ್ವಾಲ್ ಜಿಲ್ಲೆಯ ಗುರುದ್ವಾರ ದರ್ಬಾರ್‌ ಸಾಹೀಬ್ ದೇಗುಲಕ್ಕೆ ಸಂಪರ್ಕ ಕಲ್ಪಿಸುವ ಚುತುಷ್ಪದ ರಸ್ತೆಯನ್ನು ಕರ್ತಾರ್‌ಪುರ್ ಕಾರಿಡಾರ್ ಎಂದು ಕರೆಯಲಾಗುತ್ತದೆ. ಗುರುನಾನಕ್‌ ಜಯಂತಿಯ ಸಂದರ್ಭದಲ್ಲಿ ಸಿಖ್ಖರು ಅಲ್ಲಿಗೆ ತೆರಳುವ ಪ್ರತೀತಿಯಿದೆ.

English summary
A Pakistan woman met her Indian brother 75 years after the partition. They were separated during the India-Pakistan partition in 1947.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X