ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಾರಣಾಸಿ ಜೈಲಿಂದ ಬಿಡುಗಡೆಗೊಂಡು ಭಗವದ್ಗೀತೆ ಕೊಂಡೊಯ್ದ ಪಾಕ್ ಕೈದಿ!

|
Google Oneindia Kannada News

ವಾರಣಾಸಿ, ನವೆಂಬರ್ 05: ವಾರಣಾಸಿಯ ಕೇಂದ್ರ ಕಾರಾಗೃಹದಿಂದ 16 ವರ್ಷಗಳ ನಂತರ ಬಿಡುಗಡೆಯಾದ ಜಲಾಲುದ್ದಿನ್ ಎಂಬ ಕೈದಿ ತನ್ನೊಂದಿಗೆ ಭಗವದ್ಗೀತೆಯನ್ನು ಕೊಂಡೊಯ್ದಿದ್ದಾನೆ.

ದೀಪಾವಳಿ ವಿಶೇಷ ಪುರವಣಿ

ಕೆಲವು ಸಂಶಯಾಸ್ಪದ ದಾಖಲೆಗಳನ್ನು ಹೊಂದಿದ್ದ ಜಲಾಲುದ್ದಿನ್ ನನ್ನು ಆತ ಪಾಕಿಸ್ತಾನಕ್ಕೆ ಮರಳುತ್ತಿದ್ದ ವೇಳೆಯಲ್ಲಿ 16 ವರ್ಷಗಳ ಹಿಂದೆ ಬಂಧಿಸಲಾಗಿತ್ತು.

ಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಸ್ಲಿಂ ಬಾಲಕಭಗವದ್ಗೀತೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮುಸ್ಲಿಂ ಬಾಲಕ

2001 ರಲ್ಲಿ ಜಲಾಲುದ್ದಿನ್ ನ ಬಳಿ ಇದ್ದ ಕೆಲವು ನಕ್ಷೆಗಳು, ವಾರಣಾಸಿ ಕಂಟೋನ್ಮೆಂಟ್ ಚಿತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಆಫಿಶಿಯಲ್ ಸೀಕ್ರೇಟ್ ಅಂಡ್ ಫಾರೆನರ್ಸ್ ಕಾಯ್ದೆ ಅಡಿಯಲ್ಲಿ ಆತನನ್ನು ಬಂಧಿಸಲಾಗಿತ್ತು.

ಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆ ಉ.ಪ್ರದೇಶ: ಸ್ವ-ಇಚ್ಛೆಯಿಂದ ಜೈಲು ಸೇರುತ್ತಿರುವ ಜನ, ಕಾರಣ ವಿಚಿತ್ರವಾಗಿದೆ

Pakistani inmate takes Bhagavd gita after his release from Varanasi jail

16 ವರ್ಷಗಳ ನಂತರ ಆತನನ್ನು ಬಿಡುಗಡೆ ಮಾಡಲಾಗಿದ್ದು, ಜೈಲಿನಿಂದ ಹೊರಬಂದ ಜಲಾಲುದ್ದಿನ್ ತನ್ನ ಬಳಿ ಭಗವದ್ಗೀತೆಯೊಂದನ್ನು ಕೊಂಡು ಹೋಗಿದ್ದಾನೆ.

ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಮತ್ತು ಮಗಳಿಗೆ ಜೈಲಿನಿಂದ ಮುಕ್ತಿ

ಕಳೆದ ಮೂರು ವರ್ಷಗಳಿಂದ ಜೈಲಿನ ಕ್ರಿಕೆಟ್ ತಂಡದಲ್ಲಿ ಅಂಪಾಯರ್ ಆಗಿದ್ದ ಜಲಾಲುದ್ದಿನ್, ಜೈಲಿನಲ್ಲಿದ್ದುಕೊಂಡೇ ಎಂಎ ಪದವಿ ಸಹ ಪಡೆದಿದ್ದಾನೆ. ಅಷ್ಟೇ ಅಲ್ಲ, ಇಲೆಕ್ಟ್ರೀಶಿಯನ್ ಕೋರ್ಸ್ ಸಹ ಮಾಡಿದ್ದಾನೆ. ಇದೀಗ ಜಲಾಲುದ್ದಿನ್ ನನ್ನು ಪಾಕಿಸ್ತಾನಕ್ಕೆ ವಾಪಸ್ ಕಳಿಸುವುದಕ್ಕೆ ಸಕಲ ವ್ಯವಸ್ಥೆಯನ್ನೂ ಮಾಡಲಾಗಿದ್ದು, ಭಗವದ್ಗೀತೆಯಿಂದ ಸಾಕಷ್ಟು ಪ್ರಭಾವಿತನಾದ ಆತ ಹೊರಡುವ ಮುನ್ನ, ಮರೆಯದೇ ಭಗವದ್ಗೀತೆಯ ಪ್ರತಿಯನ್ನು ತನ್ನೊಂದಿಗೆ ಕೊಂಡೊಯ್ದಿದ್ದಾನೆ.

English summary
A Pakistani national, Jalaluddin, who was released from Varanasi Central Jail on Sunday after 16 years, took home Bhagavad Gita with him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X