• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭಾರತೀಯ ಸೇನೆಯ ಕಣ್ತಪ್ಪಿಸಲು ಪಾಕ್ ಹೊಸ ಕುಟಿಲ ತಂತ್ರ

|

ನವದೆಹಲಿ: ರಾತ್ರಿ ವೇಳೆ ಭಾರತೀಯ ಸೇನೆಯ ಕಣ್ತಪ್ಪಿಸಿ ದಾಳಿ ನಡೆಸಲು ಪಾಕಿಸ್ತಾನದ ಸೇನೆ ಹೊಸ ತಂತ್ರ ನಡೆಸುತ್ತಿದೆ.

ರಾತ್ರಿ ವೇಳೆ ವಸ್ತುಗಳನ್ನು ಗ್ರಹಿಸುವ ಉಪಕರಣಗಳ ಕಣ್ಣಿಗೆ ಮಣ್ಣೆರಚಿ ಒಳನುಸುಳಿ ದಾಳಿ ನಡೆಸಲು ವಿಶಿಷ್ಟ ಉಡುಪನ್ನು ಪಾಕಿಸ್ತಾನ ಸೇನೆ ಬಳಸುತ್ತಿದೆ.

ಈ ತಂತ್ರವನ್ನು ಬಳಸಿಯೇ ಇತ್ತೀಚೆಗೆ ಗಡಿ ಭಾಗದಲ್ಲಿ ಗಡಿ ಭದ್ರತಾ ಪಡೆಯ ಕಾನ್‌ಸ್ಟೆಬಲ್ ಒಬ್ಬರನ್ನು ಹತ್ಯೆ ಮಾಡಲಾಗಿದೆ ಎಂದು ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.

ಹುತಾತ್ಮ ಯೋಧನಿಗೆ ಪುಟ್ಟ ಮಗಳ ಭಾವಪೂರ್ಣ ಬಾಷ್ಪಾಂಜಲಿ

ಮೇ 18ರಂದು ಬಿಎಸ್‌ಎಫ್‌ನ 192ನೇ ಬಟಾಲಿಯನ್‌ನ ಕಾನ್‌ಸ್ಟೆಬಲ್ ಸೀತಾರಾಮ್ ಯಾದವ್ (28) ಹತ್ಯೆಗೊಳಗಾಗಿದ್ದರು. ಅವರ ದೇಹದ ಎಡಭಾಗದಲ್ಲಿ ಆಗಿದ್ದ ಗಾಯ ಅಂತಿಮವಾಗಿ ಅವರ ಸಾವಿಗೆ ಕಾರಣವಾಗಿತ್ತು.

ಪಾಕಿಸ್ತಾನ ಸೇನೆಯ ಈ ಹೊಸ ಕುಟಿಲತೆ ಭಾರತೀಯ ಸೇನೆಯನ್ನು ಚಿಂತೆಗೀಡು ಮಾಡಿದೆ. ಇಂತಹ ಸನ್ನಿವೇಶಗಳನ್ನು ಎದುರಿಸಲು ಯೋಜನೆಗಳನ್ನು ರೂಪಿಸುತ್ತಿದೆ.

ಪಾಕಿಸ್ತಾನದ ಸೇನೆಯು ಸ್ನೇಪರ್ ದಾಳಿ ನಡೆಸಿ ಕಾನ್‌ಸ್ಟೆಬಲ್ ಹತ್ಯೆ ಮಾಡಿದೆ ಎಂದು ಭಾವಿಸಲಾಗಿತ್ತು. ಥರ್ಮಲ್ ಇಮೇಜ್‌ಗಳಲ್ಲಿ ದಾಖಲಾದ ಚಿತ್ರಣಗಳನ್ನು ಪರಿಶೀಲಿಸಿದ ಬಳಿಕ ತೀರಾ ಸಮೀಪದಿಂದ ಕಾನ್‌ಸ್ಟೆಬಲ್‌ನನ್ನು ಹತ್ಯೆ ಮಾಡಲಾಗಿದೆ ಎಂಬುದು ತಿಳಿದುಬಂದಿತ್ತು.

ಭಾರತೀಯ ಸೇನೆಯಲ್ಲಿ 52,000 ಸೈನಿಕರ ಕೊರತೆ

ಕೊಲೆಗಡುಕ ಪಾಕಿಸ್ತಾನ ಸೇನೆಗೆ ಸೇರಿದ್ದವನೇ ಅಥವಾ ಉಗ್ರನೇ ಎಂಬುದನ್ನು ಖಚಿತಪಡಿಸಲಾಗುತ್ತಿದೆ.

ವಿಡಿಯೊ ದೃಶ್ಯಾವಳಿಯಲ್ಲಿ ಕಪ್ಪು ನೆರಳಿನ ಅತ್ಯಂತ ತೆಳುವಾದ ಚಲನೆಯೊಂದು ಪತ್ತೆಯಾಗಿದೆ. ಅದು ಬಿಎಸ್‌ಎಫ್ ನೆಲೆ ಬಳಿ ಬಂದು, ಯಾದವ್ ಅವರ ಮೇಲೆ ಗುಂಡು ಹಾರಿಸಿದೆ.

ಈ ದೃಶ್ಯವನ್ನು ಥರ್ಮಲ್ ಇಮೇಜರ್ ಪತ್ತೆಹಚ್ಚುವಲ್ಲಿ ವಿಫಲವಾಗಿರುವುದು ಸೇನೆಗೆ ತಲೆನೋವು ಉಂಟುಮಾಡಿದೆ.

ದಾಳಿಕೋರ ಥರ್ಮಲ್ ಕೆಮೊಫ್ಲಾಜ್ ಉಡುಪು ಧರಿಸಿದ್ದ ಎನ್ನುವ ಶಂಕೆ ವ್ಯಕ್ತವಾಗಿದೆ. ಇದರಿಂದ ಥರ್ಮಲ್ ಇಮೇಜರಿ ಸಾಧನಕ್ಕೂ ಅದರ ಸುಳಿವು ದಕ್ಕಿಲ್ಲ.

ಏನಿದು ಥರ್ಮಲ್ ಕೆಮೊಫ್ಲಾಜ್

ರಾತ್ರಿ ನೋಟದ (ನೈಟ್ ವಿಷನ್) ಸಾಧನಗಳು ತಮ್ಮ ಎದುರಿಗೆ ಬರುವ ಮನುಷ್ಯರ ಅಥವಾ ಪ್ರಾಣಿಗಳ ದೇಹದ ಉಷ್ಣಾಂಶವನ್ನು ದೂರದಿಂದಲೇ ಗ್ರಹಿಸಿ ಅವುಗಳ ಚಲನವಲನಗಳನ್ನು ನೆರಳಿನ ರೂಪದಲ್ಲಿ ವಿದ್ಯುನ್ಮಾನ ಪರದೆಯ ಮೇಲೆ ಮೂಡಿಸುತ್ತದೆ.

ಥರ್ಮಲ್ ಕೆಮೊಫ್ಲಾಜ್ ಸಾಧನವು ಈ ರೀತಿ ಉಷ್ಣಾಂಶ ಹೊರಹೋಗುವುದನ್ನು ತಡೆಯುತ್ತದೆ. ಕೆಮೊಫ್ಲಾಜ್ ಉಡುಪು ಧರಿಸಿದ ಮನುಷ್ಯನ ದೇಹದ ಉಷ್ಣಾಂಶ ಹೊರಬರುವುದಿಲ್ಲ. ಹೀಗಾಗಿ ಈ ಉಡುಪುಗಳನ್ನು ಧರಿಸಿದ ಮನುಷ್ಯರ ಚಿತ್ರಗಳು ರಾತ್ರಿ ನೋಟದ ಸಾಧನಗಳ ಕಣ್ಣಿಗೆ ಬೀಳುವುದಿಲ್ಲ.

ಈ ಉಡುಪುಗಳಿಂದ ಮನುಷ್ಯರ ಬಿಂಬ ಗೊತ್ತಾಗುವುದಿಲ್ಲ. ಆದರೆ ಅವರ ನೆರಳನ್ನೂ ಸೇನೆಯ ಬಳಿ ಇರುವ ಸಾಧನಗಳಿಗೆ ಗ್ರಹಿಸಲು ಸಾಧ್ಯವಾಗದೆ ಇರುವುದು ಚಿಂತೆಗೀಡು ಮಾಡಿದೆ.

ಈ ಥರ್ಮಲ್ ಕೆಮೊಫ್ಲಾಜ್ ಉಡುಪುಗಳು ಜಗತ್ತಿನ ಎಲ್ಲೆಡೆ ಲಭ್ಯವಿದೆ. ಶತ್ರುಗಳ ಮೇಲೆ ಹಠಾತ್ ದಾಳಿ ನಡೆಸಲು ಈ ಉಡುಪು ನೆರವಾಗುತ್ತಿದೆ. ಭಾರತೀಯ ಸೇನೆಗೆ ಸಿಕ್ಕಿ ಬೀಳದಂತೆ ತಪ್ಪಿಸಿಕೊಳ್ಳಲು ಮತ್ತು ದೊಡ್ಡ ದಾಳಿಗಳನ್ನು ಎಸಗಲು ಪಾಕಿಸ್ತಾನ ಸೇನೆ ಮತ್ತು ಉಗ್ರರು ಈ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸೇನೆ ಅಭಿಪ್ರಾಯಪಟ್ಟಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a bid to avoid detection, the Pakistan army is dressing its personnel in thermal camouflage suits while carrying out attacks on Indian security forces. On May 18, constable Sitaram Yadav, 28 of the 192nd battalion of the BSF was killed. An injury to his left ultimately caused his death. This new modus operandi by the Pakistan army has left the Indian forces worried and news plans are afloat to avoid such situations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more