ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಕೃತ್ಯ ಕ್ರೂರ, ಅಮಾನವೀಯ; ಯೋಧರ ಶಿರಚ್ಛೇದಕ್ಕೆ ತೀವ್ರ ಖಂಡನೆ

"ನಾಗರೀಕತೆಯ ನಡವಳಿಕೆಗಳನ್ನು ಮೀರಿ ಸೈನಿಕರ ದೇಹಗಳ ಮೇಲೆ ಕ್ರೂರ, ಅಮಾನವೀಯ ನಡವಳಿಕೆಗಳನ್ನು ತೋರಲಾಗಿದೆ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ,” ಎಂದು ಭಾರತೀಯ ಸೇನೆಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By Sachhidananda Acharya
|
Google Oneindia Kannada News

ನವದೆಹಲಿ, ಮೇ 2: ಪಾಕಿಸ್ತಾನಿ ಸೈನಿಕರು ಭಾರತೀಯ ಸೈನಿಕರ ಶಿರಚ್ಛೇದ ಮಾಡಿದ ಒಂದು ದಿನದ ನಂತರ ಎರಡೂ ದೇಶದ ಮಿಲಿಟರಿ ಆಪರೇಷನ್ ಮುಖ್ಯಸ್ಥರ (ಡಿಜಿಎಂಒ) ನಡುವೆ ಕಾವೇರಿದ ಫೋನ್ ಸಂಭಾಷಣೆ ನಡೆದಿದೆ. ಈ ವೇಳೆ ಭಾರತದ ಮಿಲಿಟರಿ ಆಪರೇಷನ್ ಮುಖ್ಯಸ್ಥರು ಪಾಕಿಸ್ತಾನ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಾಕಿಸ್ತಾನ ಪಾಶವೀ ಕೃತ್ಯ ನಡೆಸಿದೆ, ಅಮಾನವೀಯ ಮತ್ತು ಅನಾಗರಿಕ ನಡವಳಿಕೆ ತೋರಿದೆ ಎಂದು ಭಾರತದ ಅಧಿಕಾರಿ ಪಾಕಿಸ್ತಾನ ಅಧಿಕಾರಿಯ ಮೇಲೆ ಹರಿಹಾಯ್ದಿದ್ದಾರೆ.[2 ತಲೆಗಳ ಬದಲಿಗೆ ಎಷ್ಟು ತಲೆ ಉರುಳಿಸುತ್ತೀರಿ? ಮೋದಿಗೆ ಕಪಿಲ್ ಪ್ರಶ್ನೆ]

Pakistan’s act was ‘dastardly and inhuman’ said India's DGMO

"ನಾಗರೀಕತೆಯ ನಡವಳಿಕೆಗಳನ್ನು ಮೀರಿ ಸೈನಿಕರ ದೇಹಗಳ ಮೇಲೆ ಕ್ರೂರ, ಅಮಾನವೀಯ ನಡವಳಿಕೆಗಳನ್ನು ತೋರಲಾಗಿದೆ. ಇದನ್ನು ತೀವ್ರವಾಗಿ ಖಂಡಿಸಲಾಗಿದೆ," ಎಂದು ಭಾರತೀಯ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

22 ಸಿಖ್ ಇನ್ಫೆಂಟ್ರಿಯ ನಯೀಬ್ ಸುಬೇದಾರ್ ಪರಮ್ಜೀತ್ ಸಿಂಗ್ ಹಾಗೂ ಬಿಎಸ್ಎಫ್ ನ 200ನೇ ಬೆಟಾಲಿಯನ್ನಿನ ಪ್ರೇಮ್ ಸಾಗರ್ ರನ್ನು ಪಾಕಿಸ್ತಾನದ ಸೈನಿಕರು ಸೋಮವಾರ ಮುಂಜಾನೆ ಶಿರಚ್ಛೇದನ ಮಾಡಿದ್ದರು.[ಸೈನಿಕರ ಶಿರಚ್ಛೇದ: ಮೋದಿ 56 ಇಂಚು ಎದೆ ಪ್ರದರ್ಶಿಸುವುದು ಯಾವಾಗ?]

ಆದರೆ ಪಾಕಿಸ್ತಾನ ಮಾತ್ರ ನಾವು ಈ ರೀತಿಯ ಕೃತ್ಯ ನಡೆಸಿಲ್ಲ ಎಂದು ಪ್ರತಿಪಾದಿಸುತ್ತಲೇ ಬಂದಿದೆ.

English summary
A day after Pakistani forces beheaded two Indian soldiers, the Indian Directors General of Military Operations (DGMO) today told his Pakistani counterpart that the act was "dastardly and inhuman" and "beyond any norm of civility" in a phone conversation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X