
ಭಾರತ್ ಜೋಡೋ ಯಾತ್ರೆಯಲ್ಲಿ ಪಾಕಿಸ್ತಾನ ಪರ ಘೋಷಣೆ, ಪ್ರಕರಣ ದಾಖಲು
ಭೋಪಾಲ್, ನವೆಂಬರ್ 28: ಮಧ್ಯಪ್ರದೇಶದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ವೇಳೆ ಪಾಕಿಸ್ತಾನ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಬಿಜೆಪಿ ನಾಯಕರು ಮಧ್ಯಪ್ರದೇಶ ಕಾಂಗ್ರೆಸ್ ಮಾಧ್ಯಮ ವಿಭಾಗದ ಮುಖ್ಯಸ್ಥ ಪಿಯೂಷ್ ಬಾಬೆಲೆ ಮತ್ತು ಐಟಿ ಮುಖ್ಯಸ್ಥ ಅಭಯ್ ತಿವಾರಿ ವಿರುದ್ಧ ಭಾನುವಾರ ಪ್ರಕರಣ ದಾಖಲಿಸಿದ್ದಾರೆ.
ಬಿಜೆಪಿಯ ಮಧ್ಯಪ್ರದೇಶದ ರಾಜ್ಯ ವಕ್ತಾರ ಪಂಕಜ್ ಚತುರ್ವೇದಿ ಮತ್ತು ರಾಜ್ಯ ಸಹ ಮಾಧ್ಯಮ ಉಸ್ತುವಾರಿ ನರೇಂದ್ರ ಶಿವಾಜಿ ಪಟೇಲ್ ಅವರು ಅಪರಾಧ ವಿಭಾಗಕ್ಕೆ ನೀಡಿದ ದೂರಿನಲ್ಲಿ ಭಾರತ್ ಜೋಡೋ ಯಾತ್ರೆಯ ನೆಪದಲ್ಲಿ ಕಾಂಗ್ರೆಸ್ನ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಕಮಲ್ ನಾಥ್ ಮತ್ತು ಇಡೀ ಕಾಂಗ್ರೆಸ್ ಪಕ್ಷವು ದೇಶದಲ್ಲಿ ರಾಷ್ಟ್ರ ವಿರೋಧಿ ಸಂಘಟನೆಯನ್ನು ಮಾಡುತ್ತಿದೆ. ಯಾತ್ರೆಯಲ್ಲಿ ದೇಶದ ಶಾಂತಿ ಕದಡಲು ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಲಾಗುತ್ತಿದೆ ಎಂದು ಬಿಜೆಪಿ ಮುಖಂಡರು ಆರೋಪಿಸಿದ್ದಾರೆ.
ಎರಡು ಕ್ಷೇತ್ರಗಳ ಕಾಂಗ್ರೆಸ್ ಟಿಕೆಟ್ಗೆ ಅರ್ಜಿ ಹಾಕಿದ ಜಿ. ಜಯರಾಮಯ್ಯ

ರಾಯ್ಪುರದ ಸಿವಿಲ್ ಲೈನ್ ಠಾಣೆಯಲ್ಲಿ ಎಫ್ಐಆರ್
ಇದಕ್ಕೂ ಮುನ್ನ ಶುಕ್ರವಾರ ಕಾಂಗ್ರೆಸ್ನ ಕಾನೂನು ವಿಭಾಗಕ್ಕೆ ಸೇರಿದ ವಕೀಲ ಅಂಕಿತ್ ಮಿಶ್ರಾ ಅವರು ಮಧ್ಯಪ್ರದೇಶದ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಕೇಳಿ ಬಂದ ಪಾಕಿಸ್ತಾನ ಪರ ಘೋಷಣೆಗಳ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಮಧ್ಯಪ್ರದೇಶ ಬಿಜೆಪಿ ನಾಯಕ ಲೋಕೇಶ್ ಪರಾಶರ್ ವಿರುದ್ಧ ರಾಯ್ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ. ಅವರು ತಮ್ಮ ದೂರಿನಲ್ಲಿ ಇದು ಜನರ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತಿದ್ದಾರೆ ಎಂದು ಮಧ್ಯಪ್ರದೇಶ ಘಟಕದ ಭಾರತೀಯ ಜನತಾ ಪಕ್ಷದ ಮಾಧ್ಯಮ ಘಟಕದ ಮುಖ್ಯಸ್ಥ ಲೋಕೇಂದ್ರ ಪರಾಶರ್ ವಿರುದ್ಧ ಆರೋಪಿಸಿದ್ದಾರೆ.
ತಿ.ನರಸೀಪುರದಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ: ಹೆಚ್ಚಿದ ಕೈ-ಕಮಲ ಆಕಾಂಕ್ಷಿಗಳು

ಬಿಜೆಪಿ ವಿರುದ್ಧವೇ ಪ್ರಕರಣ ದಾಖಲು
ನವೆಂಬರ್ 25ರಂದು ಮಧ್ಯಪ್ರದೇಶದ ಬಿಜೆಪಿ ಮಾಧ್ಯಮ ಉಸ್ತುವಾರಿ ಲೋಕೇಂದ್ರ ಪರಾಶರ್ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಿಂದ ಮಧ್ಯಪ್ರದೇಶದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ್ದಾರೆ ಎಂದು ಹೇಳಲಾದ ವೀಡಿಯೊವನ್ನು ಟ್ವೀಟ್ ಮಾಡಿದ್ದರು. ವಕೀಲ ಅಂಕಿತ್ ಮಿಶ್ರಾ ಅವರು ಮಧ್ಯಪ್ರದೇಶದ ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ವೀಡಿಯೊವನ್ನು ಟ್ವೀಟ್ ಮಾಡಲಾಗಿದೆ ಎಂದು ಆರೋಪಿಸಿ ಐಪಿಸಿ 153 ಎ, 120 ಬಿ ಮತ್ತು ಇತರ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಸಿವಿಲ್ ಲೈನ್ ಸಿಎಸ್ಪಿ ವೀರೇಂದ್ರ ಚತುರ್ವೇದಿ ಸ್ಪಷ್ಟಪಡಿಸಿದ್ದಾರೆ.

ಟ್ವಿಟ್ಟರ್ನಲ್ಲಿ ಯಾತ್ರೆ ವೀಡಿಯೊ ಪೋಸ್ಟ್
ಇದಕ್ಕೂ ಮುನ್ನ ನವೆಂಬರ್ 26 ರಂದು ಮಧ್ಯಪ್ರದೇಶದ ಖಾರ್ಗೋನ್ನಲ್ಲಿ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿದವರು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದರು ಎಂದು ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಆರೋಪಿಸಿದ್ದಾರೆ. ಯಾತ್ರೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆಗಳನ್ನು ಕೂಗಲಾಗಿದೆ ಎಂದು ಆರೋಪಿಸಿ ಬಿಜೆಪಿ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಮತ್ತು ಪಕ್ಷದ ಇತರ ಮುಖಂಡರು ಯಾತ್ರೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ನಂತರ ವಿವಾದ ಭುಗಿಲೆದ್ದಿದೆ.

ರಾಹುಲ್ ಸಿಗುತ್ತಿರುವ ಬೆಂಬಲದಿಂದ ಬಿಜೆಪಿಗೆ ಭಯ
ಆದರೆ, ಕಾಂಗ್ರೆಸ್ ಪಕ್ಷವು ಬಿಜೆಪಿ ನಾಯಕರ ಆರೋಪವನ್ನು ಅಲ್ಲಗೆಳೆದದಿದ್ದು, ಇದು ರಾಹುಲ್ ಗಾಂಧಿ ಅವರ ವಿರುದ್ಧ ಬಿಜೆಪಿಯ ಪಿತೂರಿ ಎಂದು ತಿಳಿಸಿದೆ. ಭಾರತ್ ಜೋಡೋ ಯಾತ್ರೆಗೆ ಸಿಗುತ್ತಿರುವ ಸಾರ್ವಜನಿಕ ಪ್ರತಿಕ್ರಿಯೆಯಿಂದ ಭಯಗೊಂಡಿರುವ ಭಾರತೀಯ ಜನತಾ ಪಕ್ಷವು ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಭಾರತ್ ಜೋಡೋ ಯಾತ್ರೆ ಮಧ್ಯಪ್ರದೇಶ ತಲುಪಿದ್ದು, ಅಲ್ಲಿ ಸಾರ್ವಜನಿಕರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಇದಕ್ಕೆ ಹೆದರಿ ನಕಲಿ ವೀಡಿಯೋ ಮಾಡಿ, ಸುಳ್ಳು ಹೇಳುವ ಮೂಲಕ ವಿವಾದ ಸೃಷ್ಟಿಸುವ ಅಭ್ಯಾಸ ಹೊಂದಿರುವ ಬಿಜೆಪಿಯವರು ಕಪೋಲಕಲ್ಪಿತ ವಿಡಿಯೋವನ್ನು ಹರಿಬಿಟ್ಟಿದ್ದರು ಎಂದು ಕಾಂಗ್ರೆಸ್ ಪಕ್ಷದ ನಾಯಕ ಧನಂಜಯ್ ಠಾಕೂರ್ ಹೇಳಿದ್ದಾರೆ.